ತೀರ್ಥಹಳ್ಳಿ ಪಟ್ಟಣದ ಜನರಿಗೆ ಪಟ್ಟಣ ಪಂಚಾಯತ್ ಅರೋಗ್ಯ ಭಾಗ್ಯ!
– ರಹಮತುಲ್ಲಾ ಅಸಾದಿ ಉಸ್ತುವಾರಿಯಲ್ಲಿ ನಡೆದ ತಪಾಸಣೆ ಶಿಬಿರ
– ತಜ್ಞ ವೈದ್ಯರ ಉಚಿತ ಆರೋಗ್ಯ ತಪಾಸಣೆ: ಸಾವಿರಾರು ಮಂದಿ ಭೇಟಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಪಟ್ಟಣದ ಸಾವಿರಾರು ಜನರಿಗೆ ಅನುಕೂಲವಾಯಿತು.
ತೀರ್ಥಹಳ್ಳಿ, ಡೇ-ನಲ್ಮ್ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಶಿವಮೊಗ್ಗ ಆದರ್ಶ ಆಸ್ಪತ್ರೆ, ಉಡುಪಿ ಆದರ್ಶ ಚಾರಿಟೇಬಲ್ ಟ್ರಸ್ಟ್ (ರಿ.) ಇವರ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ 22-12-2024 ಬೆಳಿಗ್ಗೆ 8.00ರಿಂದ ಮಧ್ಯಾಹ್ನ 2.00ರ ವರೆಗೆ, ಶಾಂತವೇರಿ ಗೋಪಾಲಗೌಡ ರಂಗ ಮಂದಿರ, ತೀರ್ಥಹಳ್ಳಿಯಲ್ಲಿ ನೆರವೇರಿತು. ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರು ರಹಮತುಲ್ಲಾ ಅಸಾದಿ ಇವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ನಾಗರಿಕರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ ಮುಂದಿನ ದಿನಗಳಲ್ಲಿಯೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಕೆಲಸವನ್ನು ಮಾಡಲು ಶ್ರಮಿಸುತ್ತೇವೆ ಎಂದು ಕಾರ್ಯಕ್ರಮದಲ್ಲಿ ಹೇಳಿದರು. ಬೀದಿ ವ್ಯಾಪಾರಿಗಳಿಗೆ ಈ ಶಿಬಿರ ನಡೆಸಿದ್ದು, ಸುಮಾರು 850ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗಿಯಾಗಿದ್ದರು. ಉಚಿತ ಆರೋಗ್ಯ ತಪಾಸಣಾ ಸೌಲಭ್ಯದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದ್ದು, ತೀರ್ಥಹಳ್ಳಿ ಪಟ್ಟಣ ಮತ್ತು ತಾಲೂಕಿನ ಜನರು ಈ ಸೌಲಭ್ಯ ಬಳಸಿಕೊಂಡಿದ್ದು, ಒಂದೇ ದಿನದಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ನೋಂದಾವಣಿ ಮಾಡಿಕೊಂಡಿದ್ದರು ಎಂದು ತಿಳಿಸಿದರು.ಶಿಬಿರದಲ್ಲಿ ರಕ್ತದೊತ್ತಡ (BP) ಪರೀಕ್ಷೆ, ರಕ್ತದ ಸಕ್ಕರೆಯ ಅಂಶ, ರಕ್ತದ ಕೊಬ್ಬಿನಾಂಶ, ಇ ಸಿ ಜಿ ಸೇರಿದಂತೆ ಅನೇಕ ಅರೋಗ್ಯ ತಪಾಸಣೆ ರೋಗಕ್ಕೆ ತಪಾಸಣೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.