ಜನಪರ ಅಧಿಕಾರಿ ವಿನಯ್ ನಾಯ್ಕ್ ಆಗುಂಬೆಯಿಂದ ವರ್ಗಾವಣೆ
– 9 ವರ್ಷಗಳ ಸುದೀರ್ಘ ಸೇವೆಯಲ್ಲಿ ಜನರ ಪರ ಕಾಳಜಿ
– ಸೇವಾ ಜೀವನಕ್ಕೆ ಶುಭ ಕೋರಿದ ಆಗುಂಬೆ ಸಾರ್ವಜನಿಕರು
NAMMUR EXPRESS NEWS
ತೀರ್ಥಹಳ್ಳಿ: ಕುದುರೆಮುಖ ನ್ಯಾಷನಲ್ ಪಾರ್ಕ್ ವ್ಯಾಪ್ತಿಯ ಆಗುಂಬೆ ವನ್ಯ ಜೀವಿ ವಲಯದ ಉಪ ವಲಯ ಅರಣ್ಯ ಅಧಿಕಾರಿ ವಿನಯ್ ಜಿ ನಾಯ್ಕ್ ಅವರು ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದಾರೆ. ಆಗುಂಬೆ ವಲಯದಲ್ಲಿ ಕಳೆದ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ವಿನಯ್ ಅವರು ಜನರಿಗೆ ಸಹಕಾರದ ಜತೆಗೆ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆಗುಂಬೆ ವನ್ಯ ಜೀವಿ ವಲಯದಲ್ಲಿ ಯಾವುದೇ ಸಮಸ್ಯೆ ಆದರೂ ಜನರ ಸ್ಪಂದನೆಗೆ ಸಿಗುತ್ತಿದ್ದರು. ಆಗುಂಬೆ ಜನ ಅವರ ವರ್ಗಾವಣೆ ಬಳಿಕ ಅವರ ಸೇವೆಯನನ್ನು ನೆನೆಯುತ್ತಿದ್ದಾರೆ.
ಹೆಬ್ರಿ ವಲಯದ ನಾರಾಯಣ್ ನಾಯಕ್ ಇದೀಗ ಇಲ್ಲಿಗೆ ವರ್ಗಾವಣೆ ಆಗಿದ್ದಾರೆ. ವಿನಯ್ ಅವರು 9 ವರ್ಷದಲ್ಲಿ ಸಾವಿರಾರುಜನರಿಗೆ ಸಹಕಾರ ಮಾಡಿದ್ದಾರೆ. ಜತೆಗೆ ಯಾವುದೇ ತುರ್ತು ಸಂದರ್ಭದಲ್ಲಿ ಜನರ ಜತೆಗೆ ಇದ್ದಾರೆ. ಇದೀಗ ಅವರ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ ಮುಂದಿನ ಅವರ ಸೇವಾ ಅವಧಿ ಯಶಸ್ವಿ ಆಗಲಿ ಎಂದು ಸಾರ್ವಜನಿಕರು ಶುಭ ಕೋರಿದ್ದಾರೆ.