ತೀರ್ಥಹಳ್ಳಿಯಲ್ಲಿ ಕಾರ್ಮಿಕರಿಗೆ ಗೌರವ: ಪ. ಪಂ ಮಾದರಿ ಹೆಜ್ಜೆ!
– ಕಾರ್ಮಿಕರ ಸೇವೆ ಹೊಗಳಿದ ಶಾಸಕ ಆರಗ ಜ್ಞಾನೇಂದ್ರ
– ಪೌರ ಕಾರ್ಮಿಕರು, ಸಿಬ್ಬಂದಿಗೆ ಸನ್ಮಾನ: ಮಸ್ಕಿರಿ ಕುಡ್ಲ ನಾಟಕ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಸೆ. 30ರಂದು ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಅವರನ್ನು ನೆನೆಯುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಗೌರವ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಪಟ್ಟಣದ ಅಭಿವೃದ್ಧಿಗೆ ಪೌರ ಕಾರ್ಮಿಕರ ಕೊಡುಗೆ ಅಪಾರ. ನಾವೆಲ್ಲರೂ ಶುಚಿತ್ವದ ಬಗ್ಗೆ ಗಮನ ಕೊಡಬೇಕು. ತೀರ್ಥಹಳ್ಳಿ ಸುಸಂಸ್ಕೃತರ ನಾಡು. ತೀರ್ಥಹಳ್ಳಿ ಹಿರಿಮೆ ಹೆಚ್ಚಿಸಲು ನಾವೆಲ್ಲರೂ ಶ್ರಮ ಪಡೋಣ ಎಂದರು.
ಸ್ವಚ್ಛ ಭಾರತ್ ಅಭಿಯಾನ ಮೂಲಕ ಪ್ರಧಾನಿಯವರೇ ಪೊರಕೆ ಹಿಡಿದು ಕಸ ಗುಡಿಸಿದ್ದರು. ಜನರಿಗೆ ಇತ್ತೀಚಿಗೆ ಸ್ವಚ್ಛತೆ ಬಗ್ಗೆ ಗಮನ ಇಲ್ಲದಂತಾಗಿದೆ.ಕಾಲೇಜು ವಿದ್ಯಾರ್ಥಿಗಳಿಗಳಿಗೂ ನಿಯಮ ಪಾಲನೆ ಇಲ್ಲ. ನಾವು ಕಸ ಹಾಕಿದರೆ ಯಾರೋ ತೆಗೆಯುತ್ತಾರೆ ಎಂಬ ಮನಸ್ಥಿತಿಯಂತೆ ನಡೆದುಕೊಳ್ಳುತ್ತಾರೆ. ಅದು ಬದಲಾಗಬೇಕು. ಪೌರ ಕಾರ್ಮಿಕರೇ ಕಸ ತೆಗೆಯುವವರು ಎನ್ನುವ ಬದಲು ಅವರಿಗೂ ಗೌರವ ನೀಡಬೇಕು ಎಂದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ಮಾತನಾಡಿ, ಪೌರ ಕಾರ್ಮಿಕರು ಪಟ್ಟಣ ಪಂಚಾಯತ್ ವ್ಯವಸ್ಥೆಯ ಜೀವ ನಾಡಿಗಳು. ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಸ್ವಚ್ಛತೆ ಮಾಡುವ ಮೂಲಕ ನಮ್ಮ ಸೇವೆ ಮಾಡುತ್ತಿದ್ದಾರೆ. 22 ಮಂದಿ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ. ಕಾರ್ಮಿಕರ ಸನ್ಮಾನ ನಾಗರಿಕರಿಂದ ಸನ್ಮಾನ ಆಗಬೇಕು ಎಂಬುದು ನಮ್ಮ ಕನಸು ಎಂದರು.
ಉಪಾಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, 365 ದಿನ ಅವರು ನಮ್ಮ ಒಳಿತಿಗಾಗಿ ಕೆಲಸ ಮಾಡುತ್ತಾರೆ. ಆದರೆ ಅವರಿಗೆ ನಾವೆಲ್ಲರೂ ಗೌರವ ಕೊಡಬೇಕು. ಪ್ರತಿ ಮನೆಗೆ ಡಸ್ಟ್ ಬಿನ್ ವಿತರಿಸಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದರು.
ಪಟ್ಟಣ ಪಂಚಾಯತ್ ಸದಸ್ಯರಾದ ಗಣಪತಿ, ಸೊಪ್ಪುಗುಡ್ಡೆ ರಾಘವೇಂದ್ರ, ಸಂದೇಶ್ ಜವಳಿ, ಜಯಪ್ರಕಾಶ್ ಶೆಟ್ಟಿ, ಜ್ಯೋತಿ ಮೋಹನ್, ಸುಶೀಲ ಶೆಟ್ಟಿ, ಶಬನಂ, ಬಿ ಜ್ಯೋತಿ ಗಣೇಶ, ರತ್ನಾಕರ್ ಶೆಟ್ಟಿ, ಮಂಜುಳಾ ನಾಗೇಂದ್ರ, ನವೀನ್, ರವೀಶ್ ಬಾಬಿ, ನಮ್ರತ್ ಲ್, ಮುಖ್ಯಾಧಿಕಾರಿ ನಾಗರಾಜ್,, ನಾಗರಾಜ್ ಶೆಟ್ಟಿ, ಶಚಿಂದ್ರ ಹೆಗ್ಡೆ ಸೇರಿ ಹಲವರು ಉಪಸ್ಥಿತರಿದ್ದರು.
ವೈದ್ಯ ಅಧಿಕಾರಿ ಗಣೇಶ್ ಭಟ್, ನಾಗರಾಜ್ ಶೆಟ್ಟಿ, ಸಚ್ಚಿ0ದ್ರ ಹೆಗ್ಡೆ ಝೆ ಸಿಇಓ ನಾಗರಾಜ್, ಜೆಇ ಸತೀಶ್, ಹೆಲ್ತ್ ಆಫೀಸರ್ ರಮೆಶ್, ಮೇಸ್ತ್ರಿ ರಾಘು ಸೇರಿದಂತೆ ಅನೇಕರನ್ನು ಸನ್ಮಾನ ಮಾಡಲಾಯಿತು.
ಮಸ್ಕಿರಿ ಕುಡ್ಲ ಎಂಬ ಮಂಗಳೂರು ಕಲಾವಿದರ ನಾಟಕ ಪ್ರದರ್ಶನಗೊಂಡಿತು. ಆಟೋಟಗಳಲ್ಲಿ ಗೆದ್ದ ಪೌರ ಕಾರ್ಮಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು.