ಸಮಗ್ರ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ವಾಗ್ದೇವಿ ಶಾಲೆ
– ಕಸಬಾ ಹೋಬಳಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಸಾಧನೆ
– ಶಾಲಾ ಆಡಳಿತ ಮಂಡಳಿಯಿಂದ ಅಭಿನಂದನೆಗಳು
NAMMUR EXPRESS NEWS
ತೀರ್ಥಹಳ್ಳಿ: ವಾಗ್ದೇವಿ ಆಂಗ್ಲಮಾಧ್ಯಮ ಹಿರಿಯಪ್ರಾಥಮಿಕ ಶಾಲೆ ಇತ್ತೀಚಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಟಮಕ್ಕಿ
ಇವರ ಸಂಯುಕ್ತಾಶ್ರಯದಲ್ಲಿ ಡಾ.ಯು.ಆರ್. ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆದ 14 ವರ್ಷ
ವಯೊಮಿತಿಯೊಳಗಿನ ಕಸಬಾ ಹೋಬಳಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ
ಹಿರಿಯಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಓವರ್ ಆಲ್ ಚಾಂಪಿಯನ್ ಶಿಪ್ ಹಾಗು ಬಾಲಕರ ಚಾಂಪಿಯನ್
ಶಿಪ್ ಗಳನ್ನು ಮುಡಿಗೇರಿಸಿಕೊಂಡು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಗೆದ್ದ ವಿದ್ಯಾರ್ಥಿಗಳ ವಿವರ
ಗುಂಪು ಆಟಗಳು –
ಬಾಲಕರ ವಿಭಾಗ – 1.4×100 ರಿಲೇ ಪ್ರಥಮ. 2. ವಾಲಿಬಾಲ್ ಪ್ರಥಮ 3. ಥ್ರೋಬಾಲ್ ಪ್ರಥಮ.
4. ಕಬಡ್ಡಿ ಪ್ರಥಮ
ಬಾಲಕಿಯರ ವಿಭಾಗ – 1.4×100 ರಿಲೇ ದ್ವಿತೀಯ. 2. ವಾಲಿಬಾಲ್ ದ್ವಿತೀಯ 3. ಥ್ರೋಬಾಲ್ ದ್ವಿತೀಯ.
4. ಕಬಡ್ಡಿ ಪ್ರಥಮ.
ವಯಕ್ತಿಕ ಆಟಗಳು –
ಬಾಲಕರ ವಿಭಾಗ – 1. ಕೌಶಲ್ ಎಲ್.ಬಿ – ಉದ್ದಜಿಗಿತ ಪ್ರಥಮ,ಎತ್ತರ ಜಿಗಿತ ದ್ವಿತೀಯ. 2. ಆಯುಶ್ ಪಿ –
ಗುಂಡುಎಸೆತ ಪ್ರಥಮ, ತಟ್ಟೆ ಎಸೆತ ದ್ವಿತೀಯ. 3. ಅಶ್ವಿನ್ ಪಿ ಭೋಸ್ಲೆ – 100 ಮೀ ಓಟ ದ್ವಿತೀಯ, 200 ಮೀ ಓಟ
ದ್ವಿತೀಯ. 4. ರಿಷಿತ್ ಟಿ.ಎಂ – ದುಂಡು ಎಸೆತ ದ್ವಿತೀಯ, ತಟ್ಟೆ ಎಸೆತ ತೃತೀಯ. 5. ಚಿರಂತ್ ಜಿ ಗೌಡ – 600 ಮೀ ಓಟ
ತೃತೀಯ.
ಬಾಲಕಿಯರ ವಿಭಾಗ – 1. ಅನ್ವಿಕ ಕೆ- ತಟ್ಟೆ ಎಸೆತ ದ್ವಿತೀಯ, ಗುಂಡು ಎಸೆತ ತೃತೀಯ. 2. ಮನನ ಎ.ಜಿ – ಉದ್ದ
ಜಿಗಿತ ದ್ವಿತೀಯ, ಗುಂಡು ಎಸೆತ ದ್ವಿತೀಯ,100 ಮೀ ಓಟ ತೃತೀಯ. 3. ಅನುಗ್ರಹ ಡಿ.ಕೆ. – ತಟ್ಟೆ ಎಸೆತ ತೃತೀಯ
ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕರು ಹಾಗೂ
ಪೋಷಕರು ಅಭಿನಂದಿಸಿ ಮುಂದಿನ ಕ್ರೀಡಾಕೂಟಕ್ಕೆ ಶುಭಹಾರೈಸಿದ್ದಾರೆ.