ಟಾಪ್ ನ್ಯೂಸ್
ಬೆಂಗಳೂರಿನ ಹಲವೆಡೆ ಜೋರು ಮಳೆ..!
– ರಾಜ್ಯದಲ್ಲಿ ಬಿಸಿಲಿನ ನಡುವೆ ರಾಜಧಾನಿಯಲ್ಲಿ ಮಳೆ
– ಬಿಸಿಲಿನ ತಾಪಕ್ಕೆ ಹಾವೇರಿ ಕಾರ್ಮಿಕ ಬಲಿ!
– ಸೆಕೆ ನಡುವೆ ಬಸ್ನಲ್ಲಿ ಸೀಟ್ಗಾಗಿ ಮಹಿಳೆಯರ ಫೈಟ್.!
NAMMUR EXPRESS NEWS
ಬೆಂಗಳೂರು: ಕಾದು ಕೆಂಡವಾಗಿದ್ದ ಸಿಲಿಕಾನ್ ಸಿಟಿಯ ಕೆಲವೆಡೆ ವರುಣನ ಆಗಮನವಾಗಿದೆ. ಮನೆಯಿಂದ ಹೊರಬರದಂತಹ ಸ್ಥಿತಿ ತಲುಪಿದ್ದ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಹಲವೆಡೆ ದಿಢೀರ್ ಮಳೆಯಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಮನೆಯಿಂದ ಹೊರಬರದಂತಹ ಸ್ಥಿತಿ ತಲುಪಿದ್ದ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದರೆ, ಕೆಲವು ಕಡೆಗಳಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಇದರಿಂದ ಮಹಾನಗರ ಕೊಂಚ ಮಟ್ಟಿಗೆ ಕೂಲ್ ಆಗಿದೆ. ಇನ್ನು ರಾಜ್ಯದಲ್ಲಿ ಕೆಲವು ದಿನಗಳ ಕಾಲ ಬಿಸಿಗಾಳಿಯು ಮುಂದುವರೆಯಲಿದ್ದು, ಈ ಮಧ್ಯೆ ಏ.30 ರಿಂದ ಮೇ.03 ರ ನಡುವೆ ಬೆಂಗಳೂರಿನಲ್ಲಿ ಮಳೆಯಾಗುತ್ತದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿತ್ತು. ಅದರಂತೆ ಮಳೆ ಆರಂಭವಾಗಿದೆ. ಬಿಸಿಲಿನ ತಾಪದಿಂದ ಬಸವಳಿದ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದೆ.
ಅಕ್ಕಪಕ್ಕದ ಎಲ್ಲಾ ಜಿಲ್ಲೆ
ಬಿಸಿಲಿನ ತಾಪಕ್ಕೆ ಹಾವೇರಿ ಕಾರ್ಮಿಕ ಬಲಿ!
ಬಿಸಿಲಿನ ಹೊಡೆತಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಸಾವನ್ನೂರು ತಾಲೂಕಿನ ಶಿರಿಬಿದಿಗೆ ನಿವಾಸಿ, ಕಾರ್ಮಿಕ ವೃತ್ತಿ ನಡೆಸುತ್ತಿದ್ದ ರುದ್ರಪ್ಪ ಲಮಾಣಿ (45)ಮೃತಪಟ್ಟವರು. ಇವರು ಕಾಸರಗೋಡಿನ ಜೆ.ಪಿ ಕಾಲನಿಯ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿದ್ದರು. ಮನೆಯಿಂದ ಹೊರಬಂದಿದ್ದ ಇವರು ಕ್ವಾಟ್ರಸ್ ಪಕ್ಕದಲ್ಲಿಯೇ ರಸ್ತೆಬದಿ ಕುಸಿದುಬಿದ್ದಿದ್ದು, ತಕ್ಷಣ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ರುದ್ರಪ್ಪ ಲಮಾಣಿ ಕಳೆದ ಒಂಬತ್ತು ವರ್ಷಗಳಿಂದ ಕಾಸರಗೋಡಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಲಮಾಣಿ ಸಾವಿನೊಂದಿಗೆ ಕೇರಳದಲ್ಲಿ ಬಿಸಿಲಿನ ಆಘಾತಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಬಸ್ನಲ್ಲಿ ಸೀಟ್ಗಾಗಿ ಮಹಿಳೆಯರ ಫೈಟ್.!
ವಿಜಯಪುರ: ಬಸ್ನಲ್ಲಿ ಸೀಟ್ಗಾಗಿ ಮಹಿಳೆಯರು ಫೈಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬಸ್ ಚಾಲಕ ನಡು ರಸ್ತೆಯಲ್ಲೇ ಬಸ್ ನಿಲ್ಲಿಸಿದ ಘಟನೆ ವಿಜಯಪುರ ನಗರದ ಹೊಸ ಬಬಲೇಶ್ವರ ನಾಕಾ ರಸ್ತೆಯಲ್ಲಿ ನಡೆದಿದೆ. ಬಸ್ ಸೀಟ್ಗಾಗಿ ಇಬ್ಬರು ಮಹಿಳೆಯರ ಮಧ್ಯೆ ಕಿತ್ತಾಟ ನಡೆಸಿದ್ದ ದೃಶ್ಯಗಳು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ವಿಡಿಯೋ ಸೆರೆ ಹಿಡಿದಿದ್ದಾರೆ.
ಮಹಿಳೆಯರ ಕಿತ್ತಾಟದಿಂದ ಅರ್ಧ ಗಂಟೆವರೆಗೂ ಬಸ್ ಬಬಲೇಶ್ವರ ರಸ್ತೆಯಲ್ಲಿ ನಿಂತಲ್ಲೇ ನಿಂತಿತ್ತು. ಇಬ್ಬರು ಮಹಿಳೆಯರಿಗೆ ಸಮಾಧಾನ ಪಡಿಸಿದ ಬಳಿಕ ಚಾಲಕ ಬಸ್ ಚಾಲನೆ ಮಾಡಿದ್ದಾರೆ. ಡ್ರೈವರ್ ಸೀಟ್ ಬಳಿಯೇ ಮಹಿಳೆಯರು ಗಲಾಟೆ ಮಾಡುತ್ತಿದ ಕಾರಣ ಡ್ರೈವರ್ ಬಸ್ ನಿಲ್ಲಿಸಿದ್ದರಂತೆ. ಉಳಿದ ಪ್ರಯಾಣಿಕರು ಮನವಿ ಮಾಡಿದರೂ ಗಲಾಟೆ ಮುಂದುವರೆಸಿದ ಕಾರಣ ಬಸ್ ನಿಲ್ಲಿಸಿ ಮಹಿಳೆಯರನ್ನು ಸಮಾಧಾನ ಮಾಡುವ ಕಾರ್ಯ ಮಾಡಿದ್ದರಂತೆ. ಇನ್ನು, ಬಸ್ ಸೀಟ್ ಗಲಾಟೆಯಿಂದಾಗಿ ಬಸ್ ನಿಲ್ಲಿಸಿದ ಪರಿಣಾಮ ಸ್ಥಳದಲ್ಲಿ ಸುಮಾರು ಸಮಯ ಟ್ರಾಫಿಕ್ ಜಾಮ್ ಆಗಿತ್ತು.