300 ಕೆಜಿಗೆ ಇದ್ದ ಟೊಮೇಟೊ ಈಗ 10 ರೂ.!?
– ಅಂದ್ರದ ಮಾರುಕಟ್ಟೆಯಲ್ಲಿ 10 ರೂ.
– ಇತರೆ ಮಾರುಕಟ್ಟೆಯಲ್ಲಿ ಎಷ್ಟಿದೆ ದರ..?
NAMMUR EXPRESS NEWS
ಟೊಮೆಟೊ ಹೆಸರು ಕೇಳಿದ್ರೆ ಬೇಡ ಅನ್ನುವಷ್ಟು ದರ ಏರಿದ್ದು ಈಗ ಇತಿಹಾಸ. ಟೊಮೆಟೊ ಕಳ್ಳತನ ಮಾಡಿ, ಲಾರಿಯನ್ನೇ ಹೈಜಾಕ್ ಮಾಡಿದ ಘಟನೆ ಕೂಡ ನಡೆದಿದ್ದವು. ಅಲ್ಲದೆ ಮನೆಯಲ್ಲಿ ಟೊಮೆಟೊ ತರುವುದನ್ನೇ ಜನ ನಿಲ್ಲಿಸಿದ್ದರು.
ಅದಕ್ಕೆ ಹೇಳೋದು ಕಾಲ ಒಂದೇ ತರ ಇರಲ್ಲ. ಕಾಲ ಚಕ್ರದಲ್ಲಿ ಈಗ ಟೊಮೆಟೊ ಬೆಲೆ ಕೆಜಿಗೆ ಕೆಲವೆಡೆ 10 ರೂ. ಗೆ ಬಂದು ನಿಂತಿದೆ. ಕಳೆದೆರಡು ತಿಂಗಳಿಂದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದ್ದು, ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನ ಕೊಳ್ಳೋದಾ ಬೇಡವಾ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಾರಿ ಒಂದು ಕಿಲೋ ಟೊಮೆಟೊ ರೂ. 250ಕ್ಕೆ ತಲುಪಿತ್ತು.
ಸದ್ಯ ಟೊಮೇಟೊ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಅಂದ್ರ ಪ್ರದೇಶದಲ್ಲಿ ಒಂದು ಕಿಲೋ ಟೊಮೆಟೊ ಬೆಲೆ ರೂ. 10ಕ್ಕೆ ತಲುಪಿದ ಬಳಿಕ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರು ಉಸಿರು ಬಿಗಿ ಹಿಡಿದಿದ್ದಾರೆ.
ಆಗಸ್ಟ್ ಮೊದಲ ವಾರದಿಂದಲೇ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಈಗ ಒಂದು ಕಿಲೋ ಟೊಮೆಟೊ ರೂ. 10ಕ್ಕೆ ತಲುಪಿದೆ. ಕರ್ನೂಲ್ ಜಿಲ್ಲೆಯ ಪಟಿಕೊಂಡ ಕೃಷಿ ಮಾರುಕಟ್ಟೆ ಯಾರ್ಡ್ನಲ್ಲಿ ಶುಕ್ರವಾರ ಟೊಮೇಟೊ ಖರೀದಿ ಭರದಿಂದ ಆರಂಭವಾಗಿದೆ. ರೈತರು ಮೊದಲ ದಿನವೇ ಸುಮಾರು 10 ಟನ್ ಮಾರುಕಟ್ಟೆಗೆ ತಂದಿದ್ದರು. ಹರಾಜಿನಲ್ಲಿ ಕ್ವಿಂಟಾಲ್ ಟೊಮೆಟೊ ರೂ. ಬೆಲೆ 1000 ಕ್ಕಿಂತ ಕಡಿಮೆಗೆ ಮಾರಾಟವಾಗಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಈಗಲೂ ಟೊಮ್ಯಾಟೋ ರೂ. 40ರಿಂದ 50ಕ್ಕೆ ಮಾರಾಟವಾಗುತ್ತಿದೆ. ನಗರ ಕೇಂದ್ರಗಳಲ್ಲಿನ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ರೂ. 50ರವರೆಗೆ ಇವೆ. ಟೊಮ್ಯಾಟೋ ಕೊಯ್ದು ಮುಗಿಯುತ್ತಿದ್ದಂತೆ ಮುಂದಿನ ದಿನಗಳಲ್ಲಿ ನಗರ ಪ್ರದೇಶದ ಮಾರುಕಟ್ಟೆಗಳಲ್ಲೂ ಟೊಮ್ಯಾಟೋ ಬೆಲೆ ಕಡಿಮೆಯಾಗಲಿದೆ.