ದೇಶಾದ್ಯಂತ ಗಣೇಶ ಚತುರ್ಥಿಗೆ ಭರ್ಜರಿ ಸಿದ್ಧತೆ
– ವಿಗ್ರಹ ತಯಾರಿಯಲ್ಲಿ ಕಲಾವಿದರು ತಲ್ಲೀನ
– ಮಾರುಕಟ್ಟೆಗೆ ವಿಧ-ವಿಧದ ಗಣೇಶ ಮೂರ್ತಿಗಳ ಲಗ್ಗೆ
– ಯುವ ಜನತೆಯಲ್ಲಿ ಮೂಡಿದ ಉತ್ಸಾಹ!
NAMMUR EXPRESS NEWS
ದೇಶದ ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಗೆ ಇನ್ನು ಕೇವಲ ದಿನಗಳು ಉಳಿದಿವೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಗಣೇಶ ಚತುರ್ಥಿ ಆಚರಣೆ ಅದ್ದೂರಿಯಾಗಿರುತ್ತದೆ. ಉತ್ತರ ಕರ್ನಾಟಕದಲ್ಲೂ ವಿಘ್ನವಿನಾಯಕ ಗಣೇಶನ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಈಗಾಗಲೇ ಗಣೇಶನ ಮೂರ್ತಿಗಳು ಸಿದ್ಧಗೊಂಡಿದ್ದು ಪ್ರತಿಷ್ಠಾಪನೆಗೆ ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ಭಾರತದಾದ್ಯಂತ ಭರದ ಸಿದ್ಧತೆಗಳು ನಡೆಯುತ್ತಿವೆ. ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗಣೇಶನ ಮೂರ್ತಿ ಖರೀದಿ ಜೋರಾಗಿದೆ.
ಪರಿಸರ ಸ್ನೇಹಿ ಚೌತಿ ಆಚರಣೆ ನಡೆಯುತ್ತಿದ್ದು, ಮೂರ್ತಿ ರಚನೆಗೆ ಆವೆ ಮಣ್ಣನ್ನು ಮಾತ್ರ ಬಳಸಲಾಗಿದೆ.
ಈಗಾಗಲೇ ಸಂಘ-ಸಂಸ್ಥೆಗಳು ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಯುವಜನತೆಯಲ್ಲಿ ಉತ್ಸಾಹ ಮೂಡಿಸಲಾಗಿದೆ. ಹಲವೆಡೆ ಗಣೇಶೋತ್ಸವದ ತಯಾರಿ ಬಿರುಸಿನಿಂದ ನಡೆಯುತ್ತಿದೆ.
ಇನ್ನು ಮಹಿಳೆಯರು ಗಣೇಶನ ಹಬ್ಬಕ್ಕೆ ಚಕ್ಕುಲಿ, ಕರ್ಜೂರ, ಮೋದಕ ಸೇರಿದಂತೆ ವಿಧ ವಿಧದ ತಿಂಡಿ ತಿನಿಸುಗಳನ್ನು ಮಾಡಲು ಅಂಗಡಿಗಳಲ್ಲಿ ಖರೀದಿಸಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.