ಶಾಕ್ ನೀಡಿದ ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಶನ್
– ಬ್ಯಾಕಪ್ ಪಡೆಯಲು 130 ರೂ.ಗಳ ಶುಲ್ಕ!
– ಇನ್ಮುಂದೆ ಇಲ್ಲ ಗೂಗಲ್ ಸ್ಪೇಸ್ ಅನ್ ಲಿಮಿಟೆಡ್ ಫ್ರೀ!
NAMMUR EXPRESS NEWS
ನವದೆಹಲಿ: ಈಗಿನ ಕಾಲದಲ್ಲಿ ಬಹುತೇಕ ಎಲ್ಲಾ ಸ್ಮಾರ್ಟ್ ಪೋನ್ ಗಳು ವಾಟ್ಸಾಪ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಳಸುತಿದ್ದು ಇದೊಂದು ಬಹು ಮುಖ್ಯವಾದ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ. ತನ್ನ ಕೋಟ್ಯಾಂತರ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ನವೀಕರಣಗಳನ್ನು ತರುತ್ತಿರುವ ವಾಟ್ಸಪ್ ತನ್ನ ಬಳಕೆದಾರರಿಗೆ ಇದೀಗ ಶಾಕ್ ನೀಡಿದೆ. ಇನ್ಮುಂದೆ ವಾಟ್ಸಾಪ್ನಲ್ಲಿ ಚಾಟ್ ಬ್ಯಾಕಪ್ ಮತ್ತು ಮೀಡಿಯಾ ಫೈಲ್ ಬ್ಯಾಕಪ್ ಪಡೆಯಲು ವಾಟ್ಸಾಪ್ ಜೂನ್ ನಿಂದ ಉಚಿತ ಸೇವೆಯನ್ನು ನಿಲ್ಲಿಸಲಿದೆ. ಇಲ್ಲಿಯವರೆಗೆ ವಾಟ್ಸಾಪ್ ಚಾಟ್ ಗಳಿಗಾಗಿ ಗೂಗಲ್ ಡ್ರೈವ್ನಲ್ಲಿ ಪ್ರತ್ಯೇಕ ಉಚಿತ ಸ್ಥಳವಿತ್ತು. ಆದರೆ ಈಗ ಗೂಗಲ್ ಚಾಟ್ ಬ್ಯಾಕಪ್ ಮತ್ತು ಮಾಧ್ಯಮ ಫೈಲ್ಗಳ ಬ್ಯಾಕಪ್ ಗೆ ಉಚಿತ ಸ್ಥಳವನ್ನು ನೀಡಲು ನಿರಾಕರಿಸಿದೆ.
ಈಗ ಆಂಡ್ರಾಯ್ಡ್ ಫೋನ್ ಬಳಕೆದಾರರು ಕೇವಲ 15 ಜಿಬಿ ಕ್ಲೌಡ್ ಸ್ಟೋರೇಜ್ ನೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಗೂಗಲ್ ಡ್ರೈವ್ ನ ಉಚಿತ ಸ್ಥಳ ಮುಗಿದ ನಂತರ,130 ರೂ.ಗಳ ಶುಲ್ಕವನ್ನು ಕೊಟ್ಟು ಬ್ಯಾಕಪ್ ತಯಾರಿಸಲು ನೀವು ಕ್ಲೌಡ್ ಸ್ಟೋರೇಜ್ ಖರೀದಿಸಬೇಕಾಗುತ್ತದೆ. ಗೂಗಲ್ ತನ್ನ ಡ್ರೈವ್ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಇದು ಜೂನ್ 2024 ರಿಂದ ಜಾರಿಗೆ ಬರಲಿದೆ. ಈ ಹೊಸ ನಿಯಮಗಳನ್ನು ಜಾರಿಗೆ ತರುವ ಮೊದಲು ಗೂಗಲ್ ಬಳಕೆದಾರರಿಗೆ ಅಧಿಸೂಚನೆಗಳನ್ನು ಕಳುಹಿಸುತ್ತದೆ.