- ರಾತ್ರಿಯಿಂದ ಮುಂಜಾನೆಯವರೆಗೆ ಪೂಜೆ: ಗದ್ದೆಗಳಲ್ಲಿ ರಂಗು
ಮಲೆನಾಡು: ಮಲೆನಾಡಿನ ಪ್ರಸಿದ್ಧ ಹಬ್ಬ ಭೂಮಿ ಹುಣ್ಣಿಮೆಯನ್ನು ಶನಿವಾರ ಮುಂಜಾನೆ ಮಲೆನಾಡಿಗರೆಲ್ಲರೂ ಸೇರಿ ಆಚರಣೆ ಮಾಡಿದರು. ಕುಟುಂಬದವರು ರಾತ್ರಿಯಿಂದಲೇ ಸೇರಿ ಅಡುಗೆ ಮಾಡಿ ಪೂಜೆ ಮಾಡಿದರು.
ಭತ್ತದ ಗದ್ದೆಗಳಲ್ಲಿ ಜನರ ಕೂಗು ಕೇಳಿ ಬಂತು. ಗದ್ದೆಯಲ್ಲಿ ಫಸಲಿಗೆ ಹೂವು, ಬಳೆ, ಕುಂಕುಮ ತೊಡಿಸಿ ಅಲಂಕಾರ ಮಾಡಿ ಉಣ ಬಡಿಸಿದರು.
ಹಾಲಪ್ಪ ಪೂಜೆ: ಸಾಗರ ಶಾಸಕ ಹಾಲಪ್ಪ ತಮ್ಮ ತವರು ಹರತಾಳಿಒನಲ್ಲಿ ಕುಟುಂಬದವರ ಜತೆ ಭೂಮಿ ಹುಣ್ಣಿಮೆ ಆಚರಿಸಿದರು. ಮಲೆನಾಡಿನ ಪ್ರತಿ ಮನೆ ಮನೆಯಲ್ಲೂ ಹಬ್ಬದ ಸಂಭ್ರಮ ಕಂಡು ಬಂತು.