ಹಳೆ ವಾಹನ ಗುಜರಿಗೆ ಹಾಕಿದ್ರೆ ಹೊಸ ವಾಹನಕ್ಕೆ ಆಫರ್!
– ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ಘೋಷಣೆ
– ಹಳೆ ವಾಹನ ಗುಜರಿ ನೀತಿ ಶುರುವಾಗುತ್ತಾ…?
NAMMUR EXPRESS NEWS
ದೆಹಲಿ: ಹಳೆ ವಾಹನವನ್ನು ಗುಜರಿಗೆ ಹಾಕಿದವರಿಗೆ ಹೊಸ ವಾಹನದ ಖರೀದಿ ವೇಳೆ ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ನೀಡುವುದಾಗಿ ಘೋಷಿಸಲಾಗಿದೆ.
ಹೆಚ್ಚು ಮಾಲಿನ್ಯ ಹೊರಸೂಸುವ ವಾಹನಗಳನ್ನು ರಸ್ತೆಯಿಂದ ಹೊರಗಿಡುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಹಳೆಯ ವಾಹನಗಳನ್ನು ನಿಗದಿತ ಗುಜರಿ ಕೇಂದ್ರಗಳಿಗೆ ಹಾಕಿ ಅದಕ್ಕೆ ಪ್ರಮಾಣಪತ್ರ ನೀಡುವ ನೀತಿ ಜಾರಿಗೆ ತಂದಿದೆ. ಹೀಗೆ ಕಳೆದ 6 ತಿಂಗಳಲ್ಲಿ ತಮ್ಮ ವಾಹನವನ್ನು ಗುಜರಿಗೆ ಹಾಕಿದ ಯಾವುದೇ ವ್ಯಕ್ತಿಗಳು ಈ ಹೊಸ ರಿಯಾಯಿತಿ ಆಫರ್ ಪಡೆದುಕೊಳ್ಳಬಹುದು ಎಂದು ವಾಹನ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದ ಬಳಿಕ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.
ಕಾರು ಕಂಪನಿಗಳಿಂದ ವಿಶೇಷ ರಿಯಾಯಿತಿ
ಪ್ರಯಾಣಿಕ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ, ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ, ಟೊಯೋಟಾ, ಹೊಂಡಾ, ಎಂಜ ಹೆ್ಟರ್, ರೆನಾಲ್ಟ್, ನಿಸ್ಸಾನ್, ಸ್ಕೋಡಾ ಕಂಪನಿಗಳು ಶೇ.15ರಷ್ಟು ಅಥವಾ 20000 ರೂ. ಪೈಕಿ ಯಾವುದು ಕಡಿಮೆಯೋ ಅದನ್ನು ನೀಡುವುದಾಗಿ ಪ್ರಕಟಿಸಿವೆ. ಇನ್ನು ಮರ್ಸಿಡಿಸಿ ಬೆಂಜ್ 25000 ಡಿಸ್ಕೌಂಟ್ ಆಫರ್ ಮುಂದಿಟ್ಟಿದೆ.
ಸರಕು ಸಾಗಣೆ ವಾಹನ ತಯಾರಿಕಾ ಕಂಪನಿಗಳಾದ ಟಾಟಾ, ವೋಲ್ವೋ,ಅಶೋಕ್ ಲೈಲ್ಯಾಂಡ್, ಮಹೀಂದ್ರಾ, ಫೋರ್ಸ್ ಮೋಟಾರ್ಸ್, ಇಸುಜು ಕಂಪನಿಗಳು 3.5 ಟನ್ಗಿಂತ ಹೆಚ್ಚಿನ ತೂಕದ ವಾಹನಗಳಿಗೆ ಶೇ.3ರಷ್ಟು ರಿಯಾಯ್ತಿಯನ್ನು ಘೋಷಿಸಿದೆ.