Categories
ಕುಂದಾಪುರ

ಸೀತಾರಾಮ್ ಶೆಟ್ಟಿ ಕೇರಿ ಕೊಡ್ಲು ಅವರಿಗೆ ಅಂತಿಮ ನಮನ

ಸೀತಾರಾಮ್ ಶೆಟ್ಟಿ ಕೇರಿ ಕೊಡ್ಲು ಅವರಿಗೆ ಅಂತಿಮ ನಮನ

– ಮುಳ್ಳಿಕಟ್ಟೆಯಲ್ಲಿ ಅಂಬಾ ಫ್ರೆಂಡ್ಸ್ ಗ್ರೂಪ್ ಹುಟ್ಟು ಹಾಕಿ ಅನೇಕರಿಗೆ ದಾರಿ ತೋರಿಸಿ ಕೊಟ್ಟ ವ್ಯಕ್ತಿ
– ಜಾತಿ ಮತ, ಪಕ್ಷ ಬದಿಗಿಟ್ಟು ಜನರ ಕರೆಗೆ ಸ್ಪಂದಿಸುತ್ತಿರುವ ಧೀಮಂತ ವ್ಯಕ್ತಿಗೆ ಅಂತಿಮ ನಮನ

NAMMUR EXPRESS NEWS
ಬೈಂದೂರು/ಕುಂದಾಪುರ: ಮುಳ್ಳಿಕಟ್ಟೆಯಲ್ಲಿ ಅಂಬಾ ಫ್ರೆಂಡ್ಸ್ ಗ್ರೂಪ್ ಹುಟ್ಟು ಹಾಕಿ ಅನೇಕರಿಗೆ ದಾರಿ ತೋರಿಸಿ ಕೊಟ್ಟ ವ್ಯಕ್ತಿ, ಜಾತಿ ಮತ, ಪಕ್ಷ ಬದಿಗಿಟ್ಟು ಜನರ ಕರೆಗೆ ಸ್ಪಂದಿಸುತ್ತಿದ್ದ ಧೀಮಂತ ವ್ಯಕ್ತಿತ್ವದ ಸೀತಾರಾಮ್ ಶೆಟ್ಟಿ ಕೇರಿ ಕೊಡ್ಲು ಅವರು ವಿಧಿವಶರಾಗಿದ್ದು, ಮುಳ್ಳಿಕಟ್ಟಿ ಪರಿಸರದ ಜನತೆಗೆ ಅತ್ಯಂತ ಆಘಾತದ ಸುದ್ದಿಯಾಗಿದೆ. ಉಲ್ಲಾಸದ ಬದುಕನ್ನು ಕಟ್ಟಿಕೊಂಡ ಇವರು ತಮ್ಮ ಸೇವಾ ಮನೋಭಾವದಿಂದ ಸಮಾಜದ ಆಸ್ತಿಯಾದವರು. ಸರಳ ಸಜ್ಜನಿಕೆ ನಿರಾಡಂಬರ ಪರೋಪಕಾರ ಇತ್ಯಾದಿ ಪದಗಳಿಗೆ ಅರ್ಥ ತಂದುಕೊಟ್ಟ ಮಹಾನ್ ವ್ಯಕ್ತಿ.ಜಾತಿ ಮತ ಪಕ್ಷ ಬದಿಗಿಟ್ಟು ಜನರ ಕರೆಗೆ ಓಗೊಟ್ಟು ಬಾಂಧವ್ಯದ ಬೆಸುಗೆಯಂತೆ ನೂರಾರು ಅಂತ್ಯ ಸಂಸ್ಕಾರಕ್ಕೆ ಜೊತೆಗೂಡಿ ಘನ ವ್ಯಕ್ತಿತ್ವವನ್ನು ಹೊಂದಿ ಅಪಾರ ಜನರ ಪ್ರೀತಿ ಗಳಿಸಿದವರಾಗಿದ್ದರು. ಮುಳ್ಳಿಕಟ್ಟೆಯಲ್ಲಿ ಅಂಬಾ ಫ್ರೆಂಡ್ಸ್ ಗ್ರೂಪ್ ಹುಟ್ಟು ಹಾಕಿ ಅನೇಕರಿಗೆ ಸಹಾಯವಾಗುವಂತೆ ದಾರಿ ತೋರಿಸಿ ಕೊಟ್ಟವರು. ಇವರ ಅಕಾಲಿಕ ನಿಧನ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು. ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ ಆದರೆ ಹಣ, ಆಸ್ತಿ, ಅಂತಸ್ತು, ಕೀರ್ತಿಗಾಗಿ ಅದ್ವಾನ ಪಡುವವರು ಅನೇಕರು ಇದ್ಯಾವುದಕ್ಕೂ ಆಸೆ ಪಡದೆ ಅದರ್ಶ ಬದುಕನ್ನು ನಡೆಸಿ ಇತರರಿಗೆ ಮಾದರಿಯಾದವರು ಸೀತಾರಾಮ್ ಶೆಟ್ಟಿ. ಇನ್ನು ನಮಗೆ ನೆನಪು ಮಾತ್ರ! ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಸಮಾಜಮುಖಿ ಚಿಂತನೆ ಹಾಗೂ ಸೇವೆಯಲ್ಲಿ ತೊಡಗಿಸಿಕೊಂಡು ಕೃತಾರ್ಥರಾದವರು.
ಅಗಲಿದ ಇವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಹಾಗೂ ಇವರ ಬಂಧು ಬಳಗದವರಿಗೆ ಈ ಆಘಾತದ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಸಮಸ್ತ ಬಂಧುಗಳ ಪರವಾಗಿ ಪ್ರಾರ್ಥಿಸಲಾಗಿದೆ. ಕುಟುಂಬದವರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.