ಟಾಪ್ 4 ನ್ಯೂಸ್ ಮಲ್ನಾಡ್
ಶಿವಮೊಗ್ಗ : ಹುಲಿಕಲ್ ಘಾಟ್ ಬಳಿ ಎರಡು ಲಾರಿಗಳ ನಡುವೆ ಅಪಘಾತ
– ಚಿಕ್ಕಮಗಳೂರು: ಕೆಲವು ಕಡೆ ಎತ್ತು, ಎಮ್ಮೆಗಳ ಕಳ್ಳತನ, ಐವರು ಆರೋಪಿಗಳ ಬಂಧನ
– ಭದ್ರಾವತಿ: ಬೆಲ್ಲದಲ್ಲೂ ಕೂಡ ಕಲಬೆರಕೆ
– ಉಂಬ್ಳೇಬೈಲು : ಸಾಗುವನಿ ಮರಗಳನ್ನು ಅಕ್ರಮವಾಗಿ ಕಡಿತ ನಾಲ್ವರ ಬಂಧನ
NAMMUR EXPRESS NEWS
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ
ತಾಲೂಕಿನ ಹುಲಿಕಲ್ ಘಾಟ್ ಬಳಿ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ರಸ್ತೆ ಮಧ್ಯೆ ಲಾರಿಗಳು ನಿಂತ ಪರಿಣಾಮ ಹುಲಿಕಲ್ ಮಾರ್ಗದ ರಸ್ತೆ ಸಂಚಾರ ಬಂದ್ ಆದ ಘಟನೆ ಇಂದು ಬೆಳಿಗ್ಗಿನ ಜಾವ ಸಂಭವಿಸಿದೆ. ಎರಡು ಅಪಘಾತಕ್ಕೀಡಾದ ಜಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಎರಡು ಲಾರಿಗಳು ಅಪಘಾತಕ್ಕೀಡಾಗಿ ರಸ್ತೆ ಮಧ್ಯದಲ್ಲೇ ನಿಂತಿವೆ. ರಸ್ತೆಯ ಎರಡು ಬದಿಯಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ.
– ಚಿಕ್ಕಮಗಳೂರು: ಕೆಲವು ಕಡೆ ಎತ್ತು, ಎಮ್ಮೆಗಳ ಕಳ್ಳತನ, ಐವರು ಆರೋಪಿಗಳ ಬಂಧನ
ಚಿಕ್ಕಮಗಳೂರು : ಜಿಲ್ಲೆಯ ಅಜ್ಜಂಪುರ ಪೊಲೀಸ್ ಾಣಾ ವ್ಯಾಪ್ತಿಯಲ್ಲಿ ವಿವಿಧೆಡೆ ಎತ್ತು ಹಾಗೂ ಎಮ್ಮೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 3,80,000/- ರೂ ನಗದು ವಶ ಪಡಿಸಿಕೊಂಡಿದ್ದಾರೆ . ಶಿವನಿ ಹೋಬಳಿ ದಂದೂರು ಗ್ರಾಮದ ಕಿರಣ್ ರವರ 160000/- ರೂ ಮೌಲ್ಯದ ಎತ್ತುಗಳು ಕಳ್ಳತನವಾಗಿದ್ದು ಪ್ರಕರಣ ದಾಖಲಿಸಲಾಗಿತ್ತು. ಅಜ್ಜಂಪುರ ಪಟ್ಟಣದ ನವೀನ್ ಕುಮಾರ್ ರವರ ಸುಮಾರು 1,45,000/- ರೂ ಬೆಲೆಯ9 ಎಮ್ಮೆಗಳು ಕಳ್ಳತನ ವಾಗಿತ್ತು. ವೀರಾಪುರ ಹೊಸೂರು ಗ್ರಾಮದ ಜಗದೀಶ ರವರ 1,00,000/- ರೂ ಬೆಲೆ ಬಾಳುವ ಒಂದು ಜೊತೆ ಬೇಸಾಯ ಮಾಡುವ ಎತ್ತುಗಳು ಕಳ್ಳತನವಾಗಿ ದೂರು ನೀಡಲಾಗಿತ್ತು . ನಾರಾಯಣಾಪುರ ಗ್ರಾಮದ ಅವಿನಾಶ್ ರವರು ಸುಮಾರು 1,20,000/- ರೂ ಬೆಲೆ ಬಾಳುವ ಒಂದು ಎತ್ತು ಕಳವಾಗಿತ್ತು. ಸತತವಾಗಿ ಗೋವುಗಳ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರಿಂದ ಪೊಲೀಸರಿಗೂ ಸವಾಲಾಗಿತ್ತು. ಈ ಹಿನ್ನಲೆಯಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೀರೇಂದ್ರ ನೇತೃತ್ವದಲ್ಲಿ ಅಪರಾಧ ತನಿಖಾ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
– ಭದ್ರಾವತಿ : ಬೆಲ್ಲದಲ್ಲೂ ಕೂಡ ಕಲಬೆರಕೆ
ಭದ್ರಾವತಿ : ತಾಲ್ಲೂಕಿನಲ್ಲಿ ಬೆಲ್ಲ ತಯಾರಿಕಾ ಘಟಕಗಳಲ್ಲಿ ಬೆಲ್ಲ ತಯಾರಿಸಲು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಿಸಿ ಗುರುದತ್ತ ಹೆಗೆಡೆಯವರು ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
– ಉಂಬ್ಳೇಬೈಲು : ಸಾಗುವನಿ ಮರಗಳನ್ನು ಅಕ್ರಮವಾಗಿ ಕಡಿತ ನಾಲ್ವರ ಬಂಧನ
ಉಂಬ್ಳೇಬೈಲು: ಅಕ್ರಮವಾಗಿ ಮರ ಕಡಿತಲೆ ಮಾಡಿ ಸಾಗುವನಿ ಮರಗಳನ್ನು ಸಾಗಾಣಿಕೆ ಮಾಡುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಾಲಿಗೆರೆ ಗ್ರಾಮದ ಮಧುಸೂದನ್, ಉಂಬ್ಳೇಬೈಲು ಗ್ರಾಮದ ಕುಮಾರ್, ಕೃಷ್ಣ ಹಾಗೂ ಗಾಜನೂರು ಗ್ರಾಮದ ಮೈಲಾರಿ ಎಂದು ಗುರುತಿಸಲಾಗಿದೆ. ಬೆಲೆಾಳುವ ಮರಗಳನ್ನು ಅಕ್ರಮವಾಗಿ ಮರಕಡಿತಲೆ ಮಾಡಿ ಟಾಟಾ ಏಸ್ನಲ್ಲಿ 6 ಮರಗಳನ್ನು ಸಾಲಿಗೆರೆಯಿಂದ ಗಾಜನೂರಿಗೆ ಸಾಗಿಸುವ ವೇಳೆ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಟಾಟಾ ಏಸ್, ದ್ವಿಚಕ್ರವಾಹನವನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್ಎಫ್ಒ ಗಿಡ್ಡಸ್ವಾಮಿ, ಡೆಪ್ಯೂಟಿ ಆರ್ಎಫ್ ಪವನ್ ಮಹೇಂದ್ರಕರ್, ನಾಗರಾಜ್, ಬೀಟ್ ಆಫೀಸರ್ ಶ್ರೀಕಾಂತ್, ಶಂಕರವಲಯ ಮತ್ತು ಉಂಬ್ಳೆಬೈಲಿನ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.