ರಾಷ್ಟ್ರಮಟ್ಟದ ಮದಕರಿ ಕಪ್ ಕಬ್ಬಡಿ ಪಂದ್ಯಾವಳಿ!
– ಬೆಂಗಳೂರಲ್ಲಿ ಅ.5, 6 ರಂದು ಕ್ರೀಡಾಕೂಟ
– ಪೋಸ್ಟರ್ ಬಿಡುಗಡೆಗೊಳಿಸಿದ ಭಗೀರಥ ಶ್ರೀ
NAMMUR EXPRESS NEWS
ಹೊಸದುರ್ಗ: ಚಿತ್ರದುರ್ಗವನ್ನು ಜಗತ್ತಿಗೆ ಪರಿಚಯಿಸಿದ ನಾಡದೊರೆ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ಮದಕರಿ ನಾಯಕ ಯುವ ಬ್ರಿಗೇಡ್ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆಯ ರಾಜೀವ್ ಗಾಂಧಿ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಅಕ್ಟೋಬರ್ 5 ಮತ್ತು 6 ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ “ಮದಕರಿ ಕಪ್” ಪೋಸ್ಟರನ್ನು ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು, ತನ್ನ ಬದುಕಿನುದ್ದಕ್ಕೂ ಹುಲಿಯಂತೆ ಹೋರಾಡಿ ಶತ್ರುಗಳಿಂದಲೂ ಸೈ ಎನಿಸಿಕೊಂಡಿದ್ದ ಕನ್ನಡನಾಡಿನ ಹೆಮ್ಮೆಯ ಸುಪುತ್ರ, ನಾಡದೊರೆ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ವಿಶೇಷವಾಗಿ ನಾಡಿನ ಮದಕರಿ ನಾಯಕರ ಎಲ್ಲಾ ಅಭಿಮಾನಿಗಳು ಒಂದುಗಡಿ, ಂದ್ಯಾವಳಿ ಆಯೋಜನೆ ಮಾಡಿರುವುದು ಸಂತಸದ ವಿಷಯ. ಕಬಡ್ಡಿ ಇದೊಂದು ದೇಶೀಯ ಕ್ರೀಡೆಯಾಗಿದೆ. ಇಂತಹ ಕ್ರೀಡಾ ಕಾರ್ಯಕ್ರಮಗಳ ಆಯೋಜನೆಯಿಂದ ಮದಕರಿ ನಾಯಕರಿಗೆ ಗೌರವ ಸಿಗುವುದರ ಜೊತೆಗೆ ಕ್ರೀಡಾಪಟುಗಳ ಪ್ರತಿಭೆ ಗುರುತಿಸಿ,ಪ್ರೋತ್ಸಾಹಿಸಿದಂತಾಗುತ್ತದೆ. ನಾಡಿನ ಉತ್ಸಾಹಿ ಯುವಕರು ಬೆಂಗಳೂರಿನಲ್ಲಿ ನಡೆಯಲಿರುವ ಕ್ರೀಡೆಯಲ್ಲಿ ಭಾಗವಹಿಸಿ. ಕ್ರೀಡೆಯಲ್ಲಿ ಸೋಲು-ಗೆಲುವು ಇದ್ದೆ ಇರುತ್ತದೆ. ಅದನ್ನು ಆರೋಗ್ಯಕರವಾಗಿ ತೆಗೆದುಕೊಳ್ಳಿ. ಮದಕರಿ ಕಪ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂದು ಶುಭಕೋರಿದರು.
ಈ ವೇಳೆ ಹೊಸದುರ್ಗ ಪುರಸಭೆಯ ನಾಮನಿರ್ದೇಶಿತ ಸದಸ್ಯ, ಹೊಸದುರ್ಗ ತಾಲ್ಲೂಕು ನಾಯಕ ಸಮಾಜದ ಉಪಾಧ್ಯಕ್ಷ ಹಾಗೂ ಪುರಸಭಾ ಸದಸ್ಯ ಗೌಡ್ರು ತಿಪ್ಪೇಸ್ವಾಮಿ, ಮುಖಂಡ ಕಿಟ್ಟದಹಳ್ಳಿ ಕೆಂಚಪ್ಪ ನಾಯಕ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಹೊಸದುರ್ಗ ಯುವ ಘಟಕದ ಅರುಣ್, ವಸಂತ್, ಲೋಕೇಶ್, ಪ್ರಸನ್ನ, ಲೋಹಿತ್, ಪ್ರದೀಪ್ ಮತ್ತು ಸಿದ್ಧೇಶ್ ಇದ್ದರು.