ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಸಾಮಾನ್ಯ ಖೈದಿಯಂತೆ!
• ನಟ ದರ್ಶನ್ ಭೇಟಿಗೆ ಸೆಲೆಬ್ರೆಟಿಗಳಿಗೆ ಅವಕಾಶ ಇಲ್ಲ!
• ಸಾಮಾನ್ಯ ಖೈದಿಯಂತೆ ಸಿಸಿಟಿವಿ ಕಣ್ಗಾವಲು
NAMMUR EXPRESS NEWS
ಬೆಂಗಳೂರು: ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಭೇಟಿಗೆ ಕುಟುಂಬಸ್ಥರು ಹೊರತು ಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಜತೆಗೆ ಯಾವುದೇ ವಿವಿಐಪಿ ಟ್ರೀಟ್ಮೆಂಟ್ ಇರುವುದಿಲ್ಲ. ಸಾಮಾನ್ಯ ಖೈದಿಯಂತೆ ಸಿಸಿಟಿವಿ ಕಣ್ಗಾವಲು ಇರಲಿದೆ.
ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್ನನ್ನು ಪೊಲೀಸ್ ಬಂದೋಬಸ್ತ್ನಲ್ಲಿ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇನ್ಮುಂದೆ ನಟ ದರ್ಶನ್ ಭೇಟಿಗೆ ಸೆಲೆಬ್ರೆಟಿಗಳಿಗೆ ಅವಕಾಶ ಇಲ್ಲ ಎನ್ನಲಾಗಿದೆ.
ಕೇವಲ ಕೈದಿಯ ಧರ್ಮಪತ್ನಿ, ರಕ್ತಸಂಬಂಧಿಗಳು ಮತ್ತು ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ವ್ಯಕ್ತಿಗಳು ಯಾರಿಗೂ ದರ್ಶನ್ ಭೇಟಿಗೆ ಅವಕಾಶ ಇರುವುದಿಲ್ಲ. ಇನ್ನೂ ಸಾಮಾನ್ಯ ಖೈದಿಯಂತೆ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರಲಿದ್ದು, ಗೃಹ, ಮನರಂಜನೆ ಸೌಲಭ್ಯಗಳು, ಕಾಾಗೃಹದ ನಿಯಮಂತೆ ಒದಗಿಸಲಾಗುತ್ತದೆ. ನಿಯಮ ಉಲ್ಲಂಘನೆ ಮಾಡುವ ಹಾಗಿಲ್ಲ. ಬೇರೆ ಕೈದಿಗಳ ಜತೆ ಬೆರೆಯದಂತೆ ಸೂಕ್ತ ಭದ್ರತೆ ನೀಡಲಾಗಿದೆ.
ಸಾಮಾನ್ಯ ಖೈದಿಯಂತೆ ಸಿಸಿಟಿವಿ ಕಣ್ಗಾವಲು ಇರಲಿದೆ.
ದರ್ಶನ್ ಇರುವ ಕೊಠಡಿಗೆ ಮುಖ್ಯ ವೀಕ್ಷಕ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ಅನುಭವವುಳ್ಳ ಸಿಬ್ಬಂದಿ ವರ್ಗ ನಿಯೋಜನೆ ಮಾಡಲಾಗಿದೆ. ಭದ್ರತೆ ಹಾಗೂ ದರ್ಶನ್ ಚಲನವಲನಗಳ ಬಗ್ಗೆ ತೀವ್ರ ನಿಗಾ ಇಡಲಾಗುತ್ತದೆ. ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿನಿತ್ಯ ಬೀಗ ತೆರೆಯುವ ಹಾಗೂ ಬೀಗ ಮುದ್ರೆ ಮಾಡುವ ಸಮಯದಲ್ಲಿ ಕೂಲಂಕುಷವಾಗಿ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಯಾವುದೇ ನಿಷೇಧಿತ ವಸ್ತುಗಳು ದೊರಕದ ಹಾಗೆ ಪ್ರತ್ಯೇಕ ಕಾರ್ಯವನ್ನು ನಿರ್ವಹಿಸಬೇಕು. ಪಹರೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಬಾಡಿ ವೋರ್ನ್ ಕ್ಯಾಮೆರಾ ಧರಿಸಬೇಕು ಎಂದು ಹೇಳಲಾಗಿದೆ.