ಕ್ರೀಡೆ ಆಯೋಜನೆ ಮೂಲಕ ಗಮನ ಸೆಳೆದ ಕುವೆಂಪು ಶಾಲೆ!
– ತೀರ್ಥಹಳ್ಳಿ ತಾಲೂಕು ಮಟ್ಟದ ಚೆಸ್, ಯೋಗಾಸನ ಸ್ಪರ್ಧೆ
– ಚೆಸ್ ಯೋಗಾಸನ ಸ್ಪರ್ಧೆ ವಿಜೇತರು ಯಾರು ಯಾರು..?
NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿಯಲ್ಲಿ ಆ. 28 ರಂದು ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ/ಬಾಲಕಿಯರ ಯೋಗಾಸನ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಶೆಟ್ಟಿ ವಹಿಸಿದ್ದರು ಹಾಗೂ ಆರಗ ಜ್ಞಾನೇಂದ್ರ ಇವರು ಉದ್ಘಾಟನೆಮಾಡಿದರು.ಬಾಲಕ ಬಾಲಕಿಯರ ಯೋಗಾಸನ ಹಾಗೂ ಚೆಸ್ ಸ್ಪರ್ಧೆಯ ವಿಜೇತರಿಗೆ ಸಂಜೆ ಬಹುಮಾನ ವಿತರಣೆ ಮಾಡಲಾಯಿತು.
ಗೆದ್ದವರು ಯಾರು?
ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಸಾನ್ವಿ ಜೋಯಿಸ್,ಅನುಕ್ತ. ಎಸ್ ಅವರು,ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ತೀರ್ಥಹಳ್ಳಿ, ಸಾನ್ವಿ. ಎಸ್. ಕಾಂಚನ್ ಸೇವಾ ಭಾರತಿ ಆಂಗ್ಲ ಮಾಧ್ಯಮ ಶಾಲೆ ತೀರ್ಥಹಳ್ಳಿ, ಸನ್ವಿತ ಎ. ಎಸ್. ಕುಲಕರ್ಣ. ಪ್ರಜ್ಞಾಭಾರತಿ ತೀರ್ಥಹಳ್ಳಿ, ಪೂಜ್ಯ ಮೇದೋಳಿಗೆ ಸೇವಾಭಾರತಿ ಶಾಲೆ ತೀರ್ಥಹಳ್ಳಿ ಹಾಗೂ ಯೋಗಾಸನ ನೃತ್ಯ ಸ್ಪರ್ಧೆಯಲ್ಲಿ ಸಂಹಿತಾ. ಎನ್. ಉಡುಪ. ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ಇವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕರ ಯೋಗಾಸನ ಸ್ಪರ್ಧೆಯಲ್ಲಿ ಶಿಶಿರ. ಡಿ. ಆರ್, ಎಚ್. ಪಿ. ಎಸ್ ಬಾವಿಕೈಸರು, ಶ್ರೇಯಸ್ ಜಿ. ಎಂ. ಸೇವಾಭಾರತಿ ತೀರ್ಥಹಳ್ಳಿ ಶಾಲೆ, ಪೃಥ್ವಿತ್ ಎಸ್. ಶೆಟ್ಟಿ. ಸೇವಾ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಸುಧಿನ ಬಿ.ಎನ್ ಸರಕಾರಿ ಶಾಲೆ ಸಿದ್ದಾಪುರ, ಪ್ರಥಮ್ ಜಿ ಆರ್ ಪ್ರಜ್ಞಭಾರತಿ ತೀರ್ಥಹಳ್ಳಿ ಶಾಲೆ, ಸೃಜನ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.
(U- 14 ) ಬಾಲಕರ ಚೆಸ್ ವಿಭಾಗದಲ್ಲಿ ರಿತೇಶ್ ಕುಮಾರ್ ಎ.ಕೆ ವಾಗ್ದೇವಿ ಶಾಲೆ ತೀರ್ಥಹಳ್ಳಿ, ಆಶಿಕ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ,ಸಂಪತ್ತು ಎಸ್. ಜೆ ಮಲೆನಾಡು ಹಿರಿಯ ಪ್ರಾಥಮಿಕ ಶಾಲೆ ಬೆಜ್ಜವಳ್ಳಿ, ಆಕಾಶ್ ಕುವೆಂಪು ಶಾಲೆ ತೀರ್ಥಹಳ್ಳಿ, ಪ್ರಥಮ್ ಎನ್ ರಾವ್ ವಾಗ್ದೇವಿ ಶಾಲೆ ತೀರ್ಥಹಳ್ಳಿ, ಪ್ರಥಮ ಸ್ಥಾನದ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಪೋಷಕರು ಹಾಗೂ ಶಿಕ್ಷಕರು ಸೇರಿದ್ದು, ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ರಹಮತುಲ್ಲ ಆಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಮಹಾಬಲೇಶ್ವರ ಹೆಗಡೆ, ಜ್ಯೋತಿ ಗಣೇಶ್, ಜಿಲ್ಲಾ ಶಿಕ್ಷಕರ ಸಂಘ ಖಜಾಂಚಿ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ಚಂದ್ರಪ್ಪ,
ಶಾಲೆ ಮುಖ್ಯ ಉಪಧ್ಯಾಯರಾದ ನಾಗರಾಜ್, ಎಸ್. ಡಿ. ಎಂ. ಸಿ ಸದಸ್ಯರು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.