ಶಿಮೂಲ್ ಮೊದಲು ಸಭೆ: ಅಭಿವೃದ್ಧಿಗೆ ಪ್ಲಾನ್!
– ನೂತನ ಅಧ್ಯಕ್ಷರಾದ ಗುರುಶಕ್ತಿ ವಿಧ್ಯಾದರ್ ಅವರ ಅಧ್ಯಕ್ಷತೆಯಲ್ಲಿ ಸಭೆ
– ಸಹಕಾರ ನಾಯಕ ಮಂಜುನಾಥ ಗೌಡರಿಗೆ ಸನ್ಮಾನ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಹಾಲೂ ಒಕ್ಕೂಟ (ಶಿಮೂಲ್) ಈ ಸಾಲಿನ ಮೊದಲ ಆಡಳಿತ ಮಂಡಳಿಯ ಸಭೆ ನೂತನ ಅಧ್ಯಕ್ಷರಾದ ಗುರುಶಕ್ತಿ ವಿಧ್ಯಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಶಿಮೂಲ್ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು.
ವಿದ್ಯಾಧರ ಗುರುಶಕ್ತಿ ಅವರ ಅಧ್ಯಕ್ಷತೆಯಲ್ಲಿ ರೈತರ ಮತ್ತು ಹಾಲು ಸಂಘಗಳ ಜೊತೆಗೆ ಸಿಬ್ಬಂದಿಗಳ ಬಗ್ಗೆ ಹಲವಾರು ವಿಚಾರದ ಚರ್ಚೆ ನಡೆಸಿದ ಶಿಮೂಲ್ ನಿರ್ದೇಶಕರು, ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥಗೌಡ ಅವರು ಅನೇಕ ಮಾರ್ಗದರ್ಶನ ನೀಡಿದರು. ಉಪಾಧ್ಯಕ್ಷರಾದ ಚೇತನ್, ಹಿರಿಯ ನಿರ್ದೇಶಕರಾದ ಶಿವಶಂಕರ್ ಭದ್ರಾವತಿ ಕುಮಾರ್, ಆನಂದ್, ರವಿಕುಮಾರ್,ಸಂಜೀವಮೂರ್ತಿ ಬಣಕಾರ್ ದೀನೇಶ್ ಬಸಪ್ಪ ಮತ್ತು ಎಲ್ಲಾ ನಿರ್ದೇಶಕರು ಇದ್ದರು.
ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಗೌರವ
ಇತ್ತೀಚಿಗೆ ಶಿವಮೊಗ್ಗ ಚಿತ್ರದುರ್ಗ ದಾವಣಗೆರೆ ಹಾಲು ಒಕ್ಕೂಟದ ಶಿಮೂಲ್) ಅಧ್ಯಕ್ಷರ ಚುನಾವಣೆಯಲ್ಲಿ ಹೊಸನಗರದಿಂದ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ವಿದ್ಯಾಧರ ಗುರುಶಕ್ತಿ 3ನೇ ಬಾರಿ ನಿರ್ದೇಶಕರಾಗಿದ್ದು, ಎರಡನೇ ಬಾರಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ದಾವಣಗೆರೆಯ ಚೇತನ್ ಎಸ್ ನಾಡಿಗರ್ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದರು.