ಅಡಕೆ ಬೆಳೆಗೆ ಎಲೆ ಚುಕ್ಕಿ ರೋಗ, ಬೆಳೆಗಾರರಿಗೆ ಆತಂಕ!
* ರೋಗಗಳಿಂದ ಅಡಕೆ ಬೆಳೆ ಹೈರಾಣ!
* ರೋಗ ಬಂದ ಮರ ಉಳಿಸಿಕೊಳ್ಳುವುದೇ ಸವಾಲು!
NAMMUR EXPRESS NEWS
ಶಿವಮೊಗ್ಗ: ತಾಲೂಕಿನಲ್ಲಿ ಅತಿವೃಷ್ಟಿ ಅವಾಂತರ ಮುಂದುವರಿದಿದ್ದು, ಅಡಕೆ ಬೆಳೆಗೆ ಈಗಾಗಲೇ ಇರುವ ಹಲವು ಕಾಯಿಲೆ ಗಳೊಂದಿಗೆ ಎಲೆ ಚುಕ್ಕಿ ರೋಗ ಮತ್ತೆ ಮರುಕಳಿಸಿದೆ. ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ.
ಕಳೆದ ವರ್ಷ ಮಳೆಯ ಪ್ರಮಾಣದಲ್ಲಿ ಇಳಿಕೆ ಯಾಗಿದ್ದು, ಎಲೆ ಚುಕ್ಕಿ ರೋಗ ನಿಯಂತ್ರಣದ್ದು, ವರ್ಷ ಬೇಸಗೆ ಮಳೆಯೂ ಉತ್ತಮವಾಗಿದ್ದು, ಜುಲೈನಲ್ಲಿ ಸರಾಸರಿಗಿಂತ ಅಧಿಕ ಮಳೆ ಸುರಿದಿದೆ. ಆಗಸ್ಟ್ನಲ್ಲಿ ಅಲ್ಪ ಬಿಡುವು ನೀಡಿದರೂ ಮತ್ತೆ ಮಳೆಯಾಗಿದ್ದು, ಮೋಡ ಕವಿದ ವಾತಾವರಣ, ಸೋನೆ ಮಳೆ ಮಾರಕ ರೋಗ ಹರಡಲು ಪೂರಕವಾಗಿದೆ.
ತಾಲೂಕಿನಲ್ಲಿ ಹಳದಿ ಎಲೆ ರೋಗ, ಬೇರು ಹುಳು ಮತ್ತು ಕೊಳೆ ರೋಗದಿಂದ ಅಡಕೆ ಬೆಳೆ ಹೈರಾಣಾಗಿದೆ. ಇದರೊಂದಿಗೆ ಎಲೆ ಚುಕ್ಕಿ ರೋಗ ಮತ್ತಷ್ಟು ಹೊಡೆತ ನೀಡಲಾರಂಭಿಸಿದೆ. ಈಗಾಗಲೇ ರೋಗ ಪೀಡಿತವಾಗಿರುವ ಅಡಕೆ ಮರಕ್ಕೆ ಎಲೆ ಚುಕ್ಕಿ ರೋಗ ತ್ವರಿತವಾಗಿ ವ್ಯಾಪಿಸುತ್ತಿದ್ದು, ನಿಯಂತ್ರಣಕ್ಕೆ ತರಲು ಬೆಳೆಗಾರರಿಗೆ ಧ್ಯವಾಗುತ್ತಿಲ್ಲ, ಎಲೆ ಚುಕ್ಕಿ ರೋಗ ಬಂದ ಮರ ಉಳಿಸಿಕೊಳ್ಳುವುದೇ ಸವಾಲು ಎಂಬಂತಾಗಿದೆ. ಫಸಲಿನೊಂದಿಗೆ ಮರವೂ ಸಾಯುವ ಆತಂಕ ಎದುರಾಗಿದೆ.
ಕೊಳೆ ರೋಗ ಹೆಚ್ಚಳ: ಅಡಕೆ ಮರಗಳಿಗೆ ಬೋರ್ಡೋ ದ್ರಾವಣ ಸಿಂಪಡಿಸಿದ ನಂತರವೂ ಕೊಳೆ ರೋಗ ವ್ಯಾಪಕವಾಗಿದ್ದು, ಅಡಕೆ ಕಾಯಿ ನೆಲ ಕಚ್ಚುತ್ತಿವೆ. ಜೂನ್ ಮಧ್ಯ ಭಾಗದಲ್ಲಿ ಮೊದಲ ಬಾರಿ ಬೋರ್ಡೋ ಸಿಂಪಡಿಸಿದ್ದ ತೋಟಕ್ಕೆ ಎರಡನೇ ಬಾರಿ ಸಿಂಪಡಿಸಲು ಸಮಯವನ್ನೂ ನೀಡದಷ್ಟು ಸುರಿದ ಮಳೆ, ಕೊಳೆ ರೋಗ ಹೆಚ್ಚುವಂತೆ ಮಾಡಿದೆ. ಅತಿವೃಷ್ಟಿಯಿಂದ
ಶೃಂಗೇರಿ ತಾಲೂಕಿನ ಅಡಕೆ ತೋಟದಲ್ಲಿ ಎಲೆ ಚುಕ್ಕಿ ರೋಗ ಮರುಕಳಿಸಿರುವುದು.
ತೋಟಗಾರಿಕಾ ಬೆಳೆ ಕಾಳು ಮೆಣಸು, ಕಾಫಿಗೂ ಕೊಳೆ ಬಂದಿದ್ದು, ಕಾಯಿ ಉದುರುತ್ತಿವೆ. ಎರಡು ವರ್ಷ ಸತತವಾಗಿ ಮರಕ್ಕೆ ಕೊಳೆ ರೋಗ ಬಂದರೆ ಅಥವಾ ಕೊಳೆ ಹೆಚ್ಚಾದಲ್ಲಿ ಮರವೇ ಸಾಯುತ್ತದೆ. ಈ ಕುರಿತ ಆತಂಕ ರೈತರನ್ನು ಕಾಡುತ್ತಿದೆ.
* ರೋಗ ಪೀಡಿತ ಮರಕ್ಕೆ ಎಲೆಚುಕ್ಕಿ ಬಾಧೆ:
ಅಡಕೆ ತೋಟದಲ್ಲಿ ಹಳದಿ ಎಲೆ ರೋಗವಿರುವ ಮರಕ್ಕೆ ಬಹು ಬೇಗ ಕೊಳೆ ಮತ್ತು ಎಲೆ ಚುಕ್ಕಿ ರೋಗ ಹರಡುತ್ತದೆ. ತೋಟಗಾರಿಕೆ ಇಲಾಖೆ ಶಿಫಾರಸಿನಂತೆ ಬೋರ್ಡೋ ಸಿಂಪರಣೆ ವೇಳೆ, ಅಡಕೆ ಗೊನೆಗೆ ಮಾತ್ರವಲ್ಲದೇ ಎಲೆಗೂ ಸಿಂಪಡಿಸಬೇಕು. ಎಲೆ ಚುಕ್ಕಿ ರೋಗ ಚಿಕ್ಕ
ಸಸಿಗಳಲ್ಲೂ ಕಾಡುತ್ತಿದೆ. ಮಳೆ ಬಿಡುವು ನೀಡದಿದ್ದರೆ ಮತ್ತಷ್ಟು ಹರಡಲಿದೆ. ಮಲೆನಾಡಿನ ಅಡಕೆ ತೋಟ ಉಳಿಸಿಕೊಳ್ಳುವುದೇ ಸವಾಲಾಗಿದೆ.