ಮತ್ತೆ ವೆನ್ಲ್ಯಾಕ್ ಆಸ್ಪತ್ರೆಗೆ ಡಾ.ಶಿವಪ್ರಕಾಶ್ ವರ್ಗಾವಣೆ
– ಭದ್ರಾವತಿಯಿಂದ ಮಂಗಳೂರಿಗೆ ಜನ ಮೆಚ್ಚಿದ ಡಾಕ್ಟರ್
– ತೀರ್ಥಹಳ್ಳಿ ಸಂಜೀವಿನಿ ಕ್ಲಿನಿಕ್ ಡಾ.ನಾಗರಾಜ್ ಅವರಿಗೆ ಆಯುಷ್ ಎಕ್ಸಲೆನ್ಸ್ ಅವಾರ್ಡ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿ ಉತ್ತಮ ಸೇವೆ ನೀಡುವ ಮೂಲಕ ಜನಸ್ನೇಹಿ ವೈದ್ಯರು ಎಂಬ ಖ್ಯಾತಿ ಗಳಿಸಿರುವ ಡಾ.ಶಿವಪ್ರಕಾಶ್ ಅವರನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧಿಕ್ಷಕರು ಇವರನ್ನು ಮಂಗಳೂರಿನ ವೆನ್ಲ್ಯಾಕ್ ಆಸ್ಪತ್ರೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭದ್ರಾವತಿಗೂ ಮುನ್ನ ತೀರ್ಥಹಳ್ಳಿಯ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸುಮಾರು 10 ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲ ಸೇವೆ ನಡೆಸಿ ರೋಗಿಗಳಿಗೆ ಅದರಲ್ಲೂ ಆರ್ಥಿಕವಾಗಿ ದುರ್ಬಲರಾಗಿರುವ ರೋಗಿಗಳಿಗೆ ತಮ್ಮ ನಗುಮುಖದ ಉತ್ತಮ ಸೇವೆಯಿಂದ ಇಡೀ ತಾಲೂಕಿನಲ್ಲಿ ಅಲ್ಲದೆ ಅಕ್ಕ ಪಕ್ಕದ ಊರುಗಳಲ್ಲಿ ಹಾಗೂ ಕೊಪ್ಪ, ಎನ್ ಆರ್ ಪುರ, ಕಳಸ, ಾಳಹೊನ್ನೂರು, ಜಯಪುರ ಇತ್ತ ಹೊಸನಗರ ತಾಲೂಕಿನ ಜನರ ಪ್ರೀತಿಗೆ ಪಾತ್ರರಾಗಿದ್ದರು. ಇದೀಗ ವೆನ್ಲ್ಯಾಕ್ ಆಸ್ಪತ್ರೆಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.
ತೀರ್ಥಹಳ್ಳಿ ಸಂಜೀವಿನಿ ಕ್ಲಿನಿಕ್ ಡಾ.ನಾಗರಾಜ್ ಅವರಿಗೆ ಆಯುಷ್ ಎಕ್ಸಲೆನ್ಸ್ ಅವಾರ್ಡ್
ತೀರ್ಥಹಳ್ಳಿಯಲ್ಲಿ ಕಳೆದ ಎರಡು ದಶಕಗಳಿಗೂ ಅಧಿಕ ಆರೊಗ್ಯ ಸೇವೆ ಒದಗಿಸುತ್ತಿರುವ “ಸಂಜೀವಿನಿ ಕ್ಲಿನಿಕ್” ನ ಡಾ. ನಾಗರಾಜ ಕೆ. ಆರ್ ಅವರಿಗೆ ಬೆಂಗಳೂರಿನ “ಸಿಗ್ನೇಚರ್ ಮೀಡಿಯಾ” ದಿನಾಂಕ 1/9/2024 ರಂದು “ಆಯುಷ್ ಎಕ್ಸಲೆನ್ಸ್ ” ಅವಾರ್ಡ್ ಕೊಟ್ಟು ಗೌರವಿಸಿತು. ಡಾ.ನಾಗರಾಜ ಕೆ ಆರ್ ಅವರು ಮೈಗ್ರೆನ್ ತಲೆ ನೋವಿಗೆ ವಿಶೇಷ ಚಿಕಿತ್ಸೆಯನ್ನು ನೀಡಿ, ಅನೇಕ ಜನರ ತಲೆ ನೋವು ಗುಣ ಪಡಿಸುವುದರಲ್ಲಿ ಸಿದ್ದ ಹಸ್ತರು. ಅಲರ್ಜೀ,ಶೀತ, ಜಾಂಡಿಸ್,ಅನೇಕ ವಾತ ಕಾಯಿಲೆಗೆ ಚಿಕಿತ್ಸೆ ನೀಡಿ ತೀರ್ಥಹಳ್ಳಿಯ ಜನತೆಗೆ ಉತ್ತಮ ಸೇವೆ ನೀಡಿರುತ್ತಾರೆ. ರೋಟರಿ ಕ್ಲಬ್ ಹಾಗೂ ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಗಳಂತಹ ಸಂಸ್ಥೆಯ ಮೂಲಕವಾಗಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಡಾ.ನಾಗರಾಜ್ ಕೆ ಆರ್ ರವರು ಎಸ್.ಡಿ.ಎಂ.ಅಯುರ್ವೆದಿಕ್ ಆಸ್ಪತ್ರೆ ಹಾಸನದಲ್ಲಿ ವ್ಯಾಸಂಗ ಮಾಡಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದು ಡಾ ಪ್ರಸನ್ನ ಎನ್ ರಾವ್ ಅವರ ಬಳಿ ಪ್ರಾಕ್ಟೀಸ್ ಮಾಡಿ ಅಪಾರ ಅನುಭವ ಹೊಂದಿದ್ದಾರೆ. ಕಳೆದ 24 ವರ್ಷಗಳಿಂದ ತೀರ್ಥಹಳ್ಳಿ ಮತ್ತು ಅಕ್ಕಪಕ್ಕದ ತಾಲೂಕಿನ ಜನತೆಗೆ ಅರೋಗ್ಯ ಸೇವೆಯನ್ನು ಒದಗಿಸುತ್ತಿದ್ದಾರೆ.