ಶಿವಮೊಗ್ಗ ಜಿಲ್ಲೆ: 21 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
* ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ,ಪ್ರೌಢ ಶಾಲಾ ವಿಭಾಗ
* ಯಾರು ಯಾರಿಗೆ ಪ್ರಶಸ್ತಿ?: ಇಲ್ಲಿದೆ ಡೀಟೇಲ್ಸ್
* ತೀರ್ಥಹಳ್ಳಿಯ ನಾಗರಾಜ್, ಗಣೇಶ ನಾಯ್ಕ್ ಅವರಿಗೆ ಒಲಿದ ಪ್ರಶಸ್ತಿ
NAMMUR EXPRESS NEWS
ಶಿವಮೊಗ್ಗ : ಜಿಲ್ಲಾ ಮಟ್ಟದ 2024-25ನೇ ಸಾಲಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಒಟ್ಟು 21 ಮಂದಿ ಶಿಕ್ಷಕರುಗಳನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೋಹನ್ ಕುಮಾರ್ ಹೆಚ್ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾರಂಬಳ್ಳಿ, ಬಸವರಾಜಪ್ಪ ಹೆಚ್ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕನ್ನೆಗೊಪ್ಪ, ಸುಧಾಚಕ್ರಸಾಲಿ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವಾಬಾಳು, ಈಶ್ವರಪ್ಪ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಕಳಲೆ, ನಿತ್ಯಾನಂದ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯರೇಕಟ್ಟೆ, ಆರ್ ಪಲಾ ನಾಯ್ಕ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉಪ್ಪಳ್ಳಿ, ನಾಗರಾಜ ಆರ್ ಎ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೇಹಳ್ಳಿ ( ನಡಬೂರು) ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ವತಿಯಿಂದ ಆಯ್ಕೆಯಾಗಿರುತ್ತಾರೆ.
ಅಂಬಿಕಾ ಲಕ್ಷ್ಮಣ್ ರಾವ್ ಉಡುಪಿ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಟಗಾರು , ಪಾರ್ವತಮ್ಮ ಎನ್ ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆಮಾರನ ಹಳ್ಳಿ, ಗಣೇಶ ನಾಯ್ಕ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕನಕೊಡಿಕೆ( ಕೋಣಂದೂರು),ರುಕ್ಸಾನ ಬೇಗಂ ಸಹ ಶಿಕ್ಷಕರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ
ನ್ಯೂ ಮಂಡ್ಲಿ, ಸತ್ಯನಾರಾಯಣ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಜಿಗಳೆಮನೆ, ಕಮಲಮ್ಮ ಎಂ.ಎನ್ ಬಡ್ತಿ ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚುರ್ಚಿಗುಂಡಿ, ಶಿವಕುಮಾರ ಎನ್ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಲಗುಡ್ಡೆ ಹಿರಿಯ ಶಾಲಾ ವತಿಯಿಂದ ಆಯ್ಕೆಯಾಗಿರುತ್ತಾರೆ.
ಮೂರ್ತಿ ಸಹಶಿಕ್ಷಕರು ಸರ್ಕಾರಿಪ್ರೌಢಶಾಲೆ ಸೊನಲೆ,ದಿವಾಕರ ಎಂ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಅರಳಿಹಳ್ಳಿ, ರೇವಣಪ್ಪ ಡಿ ದೈಹಿಕ ಶಿಕ್ಷಣ ಶಿಕ್ಷಕರು ತಿಪ್ಪೇಸ್ವಾಮಿ ಪ್ರೌಢಶಾಲೆ ಅರೇನಲ್ಲಿ , ಚನ್ನಬಸಪ್ಪ ನ್ಯಾಮತಿ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಶೆಟ್ಟಿಕೆರೆ, ಈರೇಶ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹಿರೇನೆಲ್ಲೂರು, ನಾಗರಾಜ ನಾಯ್ಕ ಎಂ ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕಲ್ಮನೆ, ನಾಗರಾಜಪ್ಪ ಹೆಚ್ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಚಿಟ್ಟೂರು ಪ್ರೌಢ ಶಾಲಾ ಶಿಕ್ಷಕರು ಆಯ್ಕೆಯಾಗಿದ್ದಾರೆ.