ವಾಹನ ಸವಾರರೇ ಎಚ್ಚರ: ಈ ತಿಂಗಳು ಹೊಸ ರೂಲ್ಸ್ ಫಿಕ್ಸ್!
– ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಸೆ.15 ಕೊನೆ ದಿನ
– ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದೇ ಇದ್ದರೆ ದಂಡ
NAMMUR EXPRESS NEWS
ಬೆಂಗಳೂರು: 2019ರ ಏಪ್ರಿಲ್ 1 ರ ಹಿಂದೆ ರಾಜ್ಯದಲ್ಲಿ ನೋಂದಣಿ ಆಗಿರುವ ಎಲ್ಲ ವಾಹನಗಳಿಗೆ ಎಚ್ಎಸ್ಆರ್ಸಿ ನಂಬರ್ ಪ್ಲೇಟ್ ವಾಹನಗಳಿಗೆ ಅಳವಡಿಸುವುದು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ 2023ರ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಬಳಿಕ ಗಡುವು ನೀಡುತ್ತಾ ಬಂದಿದ್ದು, ಇದೀಗ ಮತ್ತೆ ಗಡುವು ನೀಡಿದೆ. ಸಾರಿಗೆ ಇಲಾಖೆ ಸೂಚಿಸಿದಂತೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಕೆ ಮಾಡಿದ್ದು, ಕೆಲವರು ಗಡುವು ನೀಡುತ್ತಾ ಬಂದಿದ್ದರೂ ಕೂಡ ಅಳವಡಿಕೆ ಮಾಡಿಕೊಂಡಿಲ್ಲ. ಆದ್ದರಿಂದ ಸಾರಿಗೆ ಇಲಾಖೆ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಇದೀಗ ಮತ್ತೆ ಸೆಪ್ಟೆಂಬರ್ 15ರವರೆಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಅವಕಾಶ ಕಲ್ಪಿಸಿದೆ. ಇದನ್ನು ಮೀರಿ HSRPಗಳನ್ನು ಅಳವಡಿಕೆ ಮಾಡದ ವಾಹನ ಮಾಲೀಕರು ಸೆಪ್ಟೆಂಬರ್ 16 ರಿಂದ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ಡದ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆಯಿಂದ ಮಾಹಿತಿ ಹೊರಬಿದ್ದಿದೆ ಎಂದು ತಿಳಿದುಬಂದಿದೆ. ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್ಎಸ್ಆರ್ಪಿ) ಅಳವಡಿಕೆಗೆ ಸೆಪ್ಟೆಂಬರ್ 15ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. 2019ರ ಏಪ್ರಿಲ್ 1ಕ್ಕೂ ಮುಂಚಿತವಾಗಿ ನೋಂದಣಿ ಆಗಿರುವ ಎಲ್ಲಾ ವಾಹನಗಳಿಗೆ ಎಚ್ಎಸ್ಆರ್ಪಿಯನ್ನು ಸಾರಿಗೆ ಇಲಾಖೆಯಿಂದ ಕಡ್ಡಾಯ ಮಾಡಲಾಗಿದೆ. ಇನ್ನು ಸಾರಿಗೆ ಇಲಾಖೆ ಪೊಲೀಸ್ ಇಲಾಖೆ ಜೊತೆ ಸೇರಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ಹಾಕಲು ನಿರ್ಧರಿಸಿದೆ. ಅವಧಿಯೊಳಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ, 500-1,000 ರೂಪಾಯಿ ವರೆಗೆ ದಂಡ ವಿಧಿಸಲಿದೆ ಎಂದು ಎನ್ನುವ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ಇದೀಗ ಸಾರಿಗೆ ಇಲಾಖೆ ಕೊಟ್ಟಿರುವ ಗಡುವು ಕೊನೆಯ ಗಡುವು ಆಗಿದೆ ಎಂದು ತಿಳಿದುಬಂದಿದ್ದು, ಇದರೊಳಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದರೆ, ದಂಡಾಸ್ತ್ರ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.