ಟಾಪ್ 3 ನ್ಯೂಸ್ ಮಲ್ನಾಡ್
ಕೊಪ್ಪ: ಸ್ಕಿಡ್ ಆಗಿ 20 ಅಡಿ ಎತ್ತರಿಂದ ಕೆಳಗೆ ಬಿದ್ದ ಪಿಕಪ್
– ಶಿಕಾರಿಪುರ: ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವು!
– ಶಿವಮೊಗ್ಗ-ಸಾಗರ ನಡವಿನ ರಸ್ತೆಯಲ್ಲಿ ಮರಗಳ ಮೇಲೆ ಗುರುತು ಯಾಕೆ?
NAMMUR EXPRESS NEWS
ಕೊಪ್ಪ: ಪಿಕಪ್ ವಾಹನ ಸ್ಕಿಡ್ ಆಗಿ 20 ಅಡಿ ಎತ್ತರಿಂದ ಕೆಳಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಲದುರ್ಗ ಗ್ರಾಮದ ಬಳಿ ನಡೆದಿದೆ. ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದ ಕಾರಣ ತಿರುವಿನಲ್ಲಿ ಗಾಡಿ ಸ್ಕಿಡ್ ಆಗಿ 20 ಅಡಿ ಎತ್ತರಿಂದ ಗುಡ್ಡದ ಮರಗಿಡಗಳಿಗೆ ಸಿಲುಕಿ ಕೆಳಗೆ ಬಿದ್ದಿದೆ. ಪರಿಣಾಮ ಪಿಕಪ್ ವಾಹನದಲ್ಲಿದ್ದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ಶಿಕಾರಿಪುರ: ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವು!
ಶಿಕಾರಿಪುರ : ಮನೆಯಲ್ಲಿ ಆಟವಾಡುವ ವೇಳೆ, ಒಂದೂವರೆ ವರ್ಷದ ಮಗುವೊಂದು ಜ್ಯೂಸ್ ಬಾಟಲಿಯ ಮುಚ್ಚಳ ನುಂಗಿ ಉಸಿರಾಟದ ತೊಂದರೆಯಿಂದ ಮೃತಪಟ್ಟ ದಾರುಣ ಘಟನೆ, ಶಿಕಾರಿಪುರ ತಾಲೂಕಿನ ಮೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಹರಗುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಪುತ್ರ ನಂದೀಶ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಮನೆಯಲ್ಲಿ ಜ್ಯೂಸ್ ಬಾಟಲಿ ಹಿಡಿದುಕೊಂಡು ಮಗು ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮುಚ್ಚಳ ನುಂಗಿದ್ದು ಅದು ಗಂಟಲಲ್ಲಿ ಸಿಲುಕಿ ಬಿದ್ದಿದೆ. ಮುಗುವಿನ ಉಸಿರಾಟದಲ್ಲಿ ಏರುಪೇರಾಗಿದೆ. ತಕ್ಷಣವೇ ಕುಟುಂಬದವರು ವಾಹನವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.
– ಶಿವಮೊಗ್ಗ-ಸಾಗರ ನಡವಿನ ರಸ್ತೆಯಲ್ಲಿ ಮರಗಳ ಮೇಲೆ ಗುರುತು ಯಾಕೆ?
ಶಿವಮೊಗ್ಗ: ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾಗುವ ಮುಂಚೆನೆ, ಹಾಗೂ ಅರಣ್ಯದಲ್ಲಿ ಒತ್ತುವರಿಯಾಗುವ ರೆಸಾರ್ಟ್ ಮತ್ತು ಹೋಮ್ ಸ್ಟೇಗಳನ್ನ ತೆರವುಗೊಳಿಸುವ ಆದೇಶದ ಬೆನ್ನ ಹಿಂದೆ ಶಿವಮೊಗ್ಗ ಮತ್ತು ಸಾಗರ ರಸ್ತೆಯ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಮರಗಳು ಕಡಿತಲೆಯಾಗಲು ಸಿದ್ದವಾಗಿದೆ. ಜನವಸತಿಗೆ ಸಿಗದ ಅರಣ್ಯದ ಅನುಮತಿ ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ಕ್ಲಿಯರೆನ್ಸ್ ಸಿಗುವುದು ದುರಂತವೇ ಸರಿ. ಚೋರಡಿ, ತುಪ್ಪೂರು ಭಾಗದಲ್ಲಿ ಈಗಾಗಲೇ ರಸ್ತೆಯ ಬದಿಗಳಲ್ಲಿರುವ ಮರಗಳಿಗೆ ಗುರುತು ಮಾಡಲಾಗುತ್ತಿದೆ. ಮರಗಳಿಗೆ ಚಿಪ್ಪಿಂಗ್ ಮಾಡಿ 2024 ಎಂದು ಗುರುತಿಸಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕಡಿತಲೆಗೆ 2023 ರಲ್ಲೇ ಅನುಮತಿ ಪಡೆಯಲಾಗಿದೆ. ಸಾಗರ ಮತ್ತು ಶಿವಮೊಗ್ಗ ನಡುವೆ ರಸ್ತೆ ಅಗಲೀಕರಣಕ್ಕೆ ಕಾರ್ಯಚಾರಣೆ ಆರಂಭವಾಗಿದೆ ಎಂದು ಒಪ್ಪಿಕೊಂಡರು ಎಷ್ಟು ಮರಗಳ ಕಡಿತಲೆ ಆಗಲಿದೆ ಎಂಬ ಮಾಹಿತಿ ಮಾತ್ರ ಹೇಳುತ್ತಿಲ್ಲ.
ರಸ್ತೆ ಅಭಿವೃದ್ಧಿಗೆ ಟೈಗರ್ ಫಾರೆಸ್ಟ್, ಡೀಮ್ಡ್ ಫಾರೆಸ್ಟ್, ವೈಲ್ಡ್ ಫಾರೆಸ್ಟ್ ಮುಂತಾದ ಕಾನೂನುಗಳು ಪುಸ್ತಕದಲ್ಲಿ ಮಾತ್ರ ಭದ್ರಾಗಿ ಕೂರುವುದಾದರೆ ಜನವಸತಿಗೆ ಯಾೆ ಅಡ್ಡಿ ಬರುತ್ತದೆ ಎಂಬುದಕ್ಕೆ ಯಾರೂ ಉತ್ತರ ನೀಡುತ್ತಿಲ್ಲ. ಪಶ್ಚಿಮ ಘಟ್ಟದಲ್ಲಿ ಅನಾಹುತವಾಗುವುದರಿಂದ 2015 ರಿಂದ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಒತ್ತುವರಿಯಲ್ಲಿ ನಿರ್ಮಿಸಿರುವ ರೆಸಾರ್ಟ್ ಮತ್ತು ಹೋಮ್ ಸ್ಟೇಗಳು ಅರಣ್ಯ ಸಚಿವರಿಗೆ ಕಣ್ಣಿಗೆ ಕಾಣುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಮರಗಳ ಮತ್ತು ಪ್ರಕೃತಿಯ ಮೇಲಿನ ಅತಿಕ್ರಮಣ ಕಾಣದೆ ಹೋಗಿರುವುದು ದುರಂತ.