ದೇಶ ವಿದೇಶಕ್ಕೂ ಹಬ್ಬಿದ ಅಡಿಕೆ ಮಾಫಿಯಾ!
– ರಾಳದ ಹೆಸರಲ್ಲಿ ದುಬೈನಿಂದ ಅಡಿಕೆ ಆಮದು
– ಸಂಸದರು, ಶಾಸಕರು ಅಕ್ರಮದ ವಿರುದ್ಧ ದನಿ ಇತ್ತಲ್ಲ ಏಕೆ?
NAMMUR EXPRESS NEWS
ಶಿವಮೊಗ್ಗ: ಮಲೆನಾಡಿನ ಅಡಿಕೆ ಮಾಫಿಯಾದ ಕೈಗಳು ಈಗ ದೇಶ ವಿದೇಶದಲ್ಲೂ ತಮ್ಮ ಚಾಲಾಕಿತನದ ಮೂಲಕ ವ್ಯವಹಾರ ಮಾಡಲು ಮುಂದಾಗಿವೆ. ಗುಜರಾತಿನ ಮುಂದ್ರಾ ಬಂದರಿನಲ್ಲಿ 3 ಕೋಟಿ ಮೌಲ್ಯದ 53 ಟನ್ ಅಕ್ರಮ ಅಡಕೆ ವಶಪಡಿಸಿಕೊಳ್ಳಲಾಗಿದೆ.
ರಾಳದ ಹೆಸರಿನಲ್ಲಿ ದುಬೈ ನಿಂದ ಬಂದಿದ್ದ ಅಡಿಕೆ ಕಂಟೈನರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಚ್ನ ಮುಂಡ್ರಾ ಬಂದರಿನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟ ಪ್ರಕರಣ ವರದಿಯಾಗಿದ್ದು, ಸುಮಾರು 3 ಕೋಟಿ ರೂಪಾಯಿ ಮೌಲ್ಯದ 53 ಟನ್ ಅಡಿಕೆಯ ಎರಡು ಕಂಟೈನರ್ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಕಂಟೈನರ್ಗಳು ದುಬೈನಿಂದ ಬಂದಿತ್ತು. ರಾಳ ಹಾಗೂ ಧಾನ್ಯ ಎಂದು ಉಲ್ಲೇಖಿಸಿ ಆಮದು ಮಾಡಿಕೊಳ್ಳಲಾಗುತ್ತಿತ್ತು.
ಅಧಿಕಾರಿಗಳು ತನಿಖೆ ನಡೆಸುವ ವೇಳೆ, ಅಡಿಕೆ ಸಾಗಿಸುತ್ತಿದ್ದ ಎರಡು ಕಂಟೈನರ್ಗಳನ್ನು ವಶಪಡಿಸಿಕೊಳ್ಳಲಾಯಿತು. ಬಂದರಿನಲ್ಲಿ ರಾಳ ಅಥವಾ ಧಾನ್ಯಗಳು ಎಂದು ತ್ಪಾಗಿ ಘೋಷಿಸಾಗಿತ್ತು. ಅಡಿಕೆ ಆಮದು ಮಾಡಿಕೊಳ್ಳಲು ಹಾಗೂ ತೆರಿಗೆ ತಪ್ಪಿಸಲು ಈ ತಂತ್ರಗಳನ್ನು ಕಳೆದ ಕೆಲ ಸಮಯಗಳಿಂದ ನಡೆಸಲಾಗುತ್ತಿದೆ. ಈ ಬಾರಿ ಅಧಿಕಾರಿಗಳು ಪತ್ತೆ ಮಾಡಿದ್ದು, ಇದೀಗ ಇನ್ನೂ ಎರಡು ಕಂಟೈನರ್ಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಡಿಆರ್ಐ ಕಾರ್ಯನಿರ್ವಹಣೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ, ಏಕೆಂದರೆ ಡಿಆರ್ಐ ಸ್ವಲ್ಪ ಸಮಯದವರೆಗೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಲಾಗಿದೆ.
ದೇಶದ ವಿವಿಧ ಗಡಿಯಲ್ಲಿ ಅಡಿಕೆ ಕಳ್ಳ ಸಾಗಣೆ ನಡೆಯುತ್ತಿದ್ದೂ, ಈ ಬಗ್ಗೆ ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಸಂಸದರು, ಶಾಸಕರು ದನಿ ಎತ್ತಬೇಕಿದೆ.