ತೀರ್ಥಹಳ್ಳಿ, ಹೊಸನಗರದಲ್ಲಿ ಗಣೇಶೋತ್ಸವಕ್ಕೆ ಸಜ್ಜು!
– ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಅಲಂಕಾರ
– ಹೊಸನಗರ ತಾಲೂಕಲ್ಲಿ ಅತೀ ಹೆಚ್ಚು ಗಣೇಶ
– ಎಲ್ಲೆಡೆ ಪೊಲೀಸ್ ಕಣ್ಣು: ಜನರೇ ಶಾಂತಿಯಿಂದ ಹಬ್ಬ ಆಚರಿಸಿ
NAMMUR EXPRESS NEWS
ತೀರ್ಥಹಳ್ಳಿ/ಹೊಸನಗರ: ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಲ್ಲಿ ತಾಲೂಕಿನಲ್ಲಿ ಶಾಂತಿಯುತ ಗಣೇಶ ಹಬ್ಬಕ್ಕೆ ಎಲ್ಲೆಡೆ ಅಂತಿಮ ಸಿದ್ಧತೆ ನಡೆದಿದೆ. ಎಲ್ಲಾ ಊರುಗಳಲ್ಲೂ ಹಬ್ಬಕ್ಕೆ ಸಂಘಗಳು ತಯಾರಿ ಮಾಡಿವೆ.
ತೀರ್ಥಹಳ್ಳಿಯ ಪ್ರತಿಷ್ಠಿತ ಗಣಪತಿ ಉತ್ಸವಗಳಾದ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ, ದೇವಂಗಿ, ಕುರುವಳ್ಳಿ, ಹಿಲಿಕೆರೆ, ಕೋಳಿಕಾಲು ಗುಡ್ಡ, ಛತ್ರಕೇರಿ, ಮಂಡಗದ್ದೆ, ಕಟ್ಟೆಹಕ್ಲು, ಹೊದಲ, ಕಮ್ಮರಡಿ, ಆಗುಂಬೆ ಸೇರಿ ಎಲ್ಲಾ ಗ್ರಾಮ ವ್ಯಾಪ್ತಿಯಲ್ಲಿ ಗಣೇಶ ಕೂರಿಸಲಾಗುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಗಣೇಶ ಹಬ್ಬವನ್ನು ಶಾಂತಿಯುತವಾಗಿ ನಡೆಸುವಂತೆ ಡಿವೈಎಸ್ಪಿ ಗಜಾನನ ವಾಮನ ಸುತಾರ ಮನವಿ ಮಾಡಿದ್ದಾರೆ.
ಯಾವ ಠಾಣಾ ವ್ಯಾಪ್ತಿಯಲ್ಲಿ ಎಷ್ು ಗಣೇಶ?
ತೀರ್ಥಹಳ್ಳಿ 114, ಮಾಳೂರು 64,
ಆಗುಂಬೆ 51, ಹೊಸನಗರ 88, ರಿಪ್ಪನಪೇಟೆ 121, ನಗರ 43 ಗಣಪತಿ ಕೂರಿಸಲಾಗುತ್ತದೆ.
ವಿಶೇಷ ಆಕರ್ಷಣೆ
ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣ, ಹೊಸನಗರ, ಕೋಣಂದೂರು, ಛತ್ರಕೇರಿ, ದೇವಂಗಿ, ಹಿಲಿಕೆರೆ, ರಿಪ್ಪನ್ ಪೇಟೆ, ನಗರ, ಮಾಸ್ತಿಕಟ್ಟೆ, ಹೊದಲ ಸೇರಿ ಅನೇಕ ಕಡೆ ಅದ್ದೂರಿ ಗಣೇಶೋತ್ಸವ ನಡೆಯಲಿದೆ.