- ಸೊರಬದ ದತ್ತಾತ್ರೇಯ ಹೊಸಬಾಳೆಗೆ ಮಹತ್ವದ ಹುದ್ದೆ
- ಪ್ರಧಾನ ಕಾರ್ಯದರ್ಶಿ ಸ್ಥಾನ
ಶಿವಮೊಗ್ಗ: ರಾಜಕೀಯ ಕ್ಷೇತ್ರದಲ್ಲಿ ದೇಶ ಮಟ್ಟದಲ್ಲಿ ಇದೀಗ ಶಿವಮೊಗ್ಗ ಜಿಲ್ಲೆ ಸದ್ದು ಮಾಡುತ್ತಿದೆ. ಈ ನಡುವೆ ದೇಶದ ಆರೆಸ್ಸೆಸ್ ಆಗ್ರ ಸ್ಥಾನ ಸರ ಕಾರ್ಯ ವಾಹಕ್ ಸ್ಥಾನಕ್ಕೆ ಶಿವಮೊಗ್ಗ ಜಿಲ್ಲೆ ಸೊರಬ ಮೂಲದ ದತ್ತಾತ್ರೇಯ ಹೊಸಬಾಳೆ ನೇಮಕವಾಗಿದ್ದಾರೆ.
ಸೊರಬದಲ್ಲಿ ಜನಿಸಿದ ದತ್ತ ಖ್ಯಾತಿಯ ಸಂಘಟಕ ದತ್ತಾತ್ರೇಯ ಈ ಹಿಂದೆ ಸಂಘದಲ್ಲಿ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಿದ್ದರು. 1975-77ರವರೆಗೆ 16 ತಿಂಗಳು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ವಾಸ ಅನುಭವಿಸಿದ್ದರು. ಶನಿವಾರ ಬೆಂಗಳೂರಲ್ಲಿ ನಡೆದ ಅಖಿಲ ಭಾರತ ಪ್ರತಿನಿಧಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಎಬಿವಿಪಿಯಲ್ಲಿ ಸುಮಾರು 12 ವರ್ಷಗಳ ಕಾಲ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಹೊಸಬಾಳೆ ಅವರು ಮೈಸೂರು ವಿವಿ ಇಂಗ್ಲಿಷ್ ಸ್ನಾತಕೋತ್ತರ ಪದವೀಧರರು. ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿರುವ ಇವರು ಅಸೀಮ ಎಂಬ ಕನ್ನಡ ಮ್ಯಾಗಜೀನ್ ಹುಟ್ಟು ಹಾಕಿದರು. ಈಗಾಗಲೇ ಶಿವಮೊಗ್ಗ ಮೂಲದ ಸಂತೋಷ್ ಜೀ ಸಂಘದ ಮಹತ್ವದ ಹುದ್ದೆ ಹೊಂದಿದ್ದಾರೆ.
ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಶಿವಮೊಗ್ಗ ಈಗ ಮತ್ತೊಂದು ಸ್ಥಾನ ಪಡೆದಂತಾಗಿದೆ.ಇದು ಸಂಘದಲ್ಲಿ ಟಾಪ್ 2 ಸ್ಥಾನ ಆಗಿದೆ.
ರಾಜ್ಯದ ಎಲ್ಲಾ ಸುದ್ದಿಗಳಿಗೆ nammurexpress.in ವೀಕ್ಷಿಸಿ..!.