ಸಹ್ಯಾದ್ರಿ ಪಿಯು ಪ್ರಾಂಶುಪಾಲ ಗುರುರಾಜ್ ಅವರಿಗೆ ಗೌರವ
– ಕ್ರೀಡೆ, ಶಿಕ್ಷಣ ಕ್ಷೇತ್ರದಲ್ಲಿ ಎಲೆ ಮರೆ ಕಾಯಂತೆ ಸೇವೆ
– ಶಿವಮೊಗ್ಗದಲ್ಲಿ ಯುನೈಟೆಡ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್
ಕ್ಲಬ್ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸಹ್ಯಾದ್ರಿ ಪಿಯು ಕಾಲೇಜು ಮತ್ತು ಪ್ರೌಢ ಶಾಲೆ ಇದೀಗ ತೀರ್ಥಹಳ್ಳಿ ತಾಲೂಕಿನ ಹಾಗೂ ಜಿಲ್ಲೆಯ ಟಾಪ್ ಕಾಲೇಜು,ಶಾಲೆಗಳಲ್ಲಿ ಒಂದಾಗಿದೆ. ಈ ಸಾಧನೆಗೆ ತೀರ್ಥಹಳ್ಳಿ ಒಕ್ಕಲಿಗರ ಸಂಘದ ಮಾರ್ಗದರ್ಶನ ಒಂದು ಕಡೆ ಆದರೆ, ಇನ್ನೊಂದೆಡೆ ಸಹ್ಯಾದ್ರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಗುರುರಾಜ್ ಎಚ್ ಬಿ ಅವರ ಸಾರ್ಥಕ ಸೇವೆ, ಮಕ್ಕಳ ಪರ ಕಾಳಜಿ ಕೂಡ ಶಿಕ್ಷಣ ಗುಣಮಟ್ಟ, ಮಕ್ಕಳ ಅಭಿವೃದ್ಧಿಗೆ ಬಹು ಮುಖ್ಯ ಕಾರಣವಾಗಿದೆ.
ಶಿಕ್ಷಣ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕೃತಿಕ, ಪಠ್ಯ ಇತರೆ ಚಟುವಟಿಕೆ ಹಾಗೂ ವ್ಯಕ್ತಿತ್ವ ವಿಕಸನದ ಮೂಲಕ ಸಾವಿರಾರು ಮಕ್ಕಳ ಗಾಡ್ ಫಾದರ್ ಆಗಿದ್ದಾರೆ.
ಗುರುರಾಜ್ ಅವರನ್ನು ಇತ್ತೀಚಿಗೆ ಶಿವಮೊಗ್ಗದ ಯುನೈಟೆಡ್ ಸ್ಪೋರ್ಟ್ಸ್ ಅಂಡ್ ಕಲ್ಬಲ್ ಕ್ಲಬ್ ವರ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ ಸನ್ಮಾನಿಸಿ ಗೌರವಿಸಿದೆ.
ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಂಸ್ಥೆಯ ಮಕ್ಕಳ ಸಾಧನೆ
ಶಿಕ್ಷಣದ ಜೊತೆಗೆ ಕ್ರೀಡೆ, ಇತರೆ ಸಾಂಸ್ಕೃತಿಕ ಚಟುವಟಿಕೆಗೆ ಮಕ್ಕಳು ಹೆಚ್ಚಿನ ಆದ್ಯತೆಯನ್ನು ನೀಡುವುದರಿಂದ ಪ್ರತಿ ಮಗುವಿನಲ್ಲಿ ಸ್ವಾಸ್ಥ ದೇಹ ಮತ್ತು ಮನಸ್ಸನ್ನು ಹೊಂದಲು ಸಹಕಾರಿಯಾಗುತ್ತದೆ ಎಂಬ ನಿಲುವಿನ ಗುರುರಾಜ್ ಅವರ ಮಾರ್ಗದರ್ಶನದಲ್ಲಿ ಸಹ್ಯಾದ್ರಿ ಶಾಲೆ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಎಲ್ಲಾ ಶಿಕ್ಷಕರು, ಸಿಬ್ಬಂದಿಗಳ ಸಹಕಾರದಿಂದ ಪ್ರತಿ ವರ್ಷ ರಾಜ್ಯ, ರಾಷ್ಟ್ರಮಟ್ಟದಲ್ಲಿ ಈ ಸಂಸ್ಥೆಯ ಮಕ್ಕಳು ತಮ್ಮದೇ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.
ಪಿಯು, ಪ್ರೌಢ ಶಿಕ್ಷಣದಲ್ಲೂ ಟಾಪರ್
ಶಿಕ್ಷಣದಲ್ಲೂ ಟಾಪರ್ ಆಗುತ್ತಿದ್ದಾರೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗಾಗಿ ತಮ್ಮ ಸೇವೆ ನೀಡುತ್ತಿರುವ ಗುರುರಾಜ್ ಅವರಿಗೆ ಯುನೈಟೆಡ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್
ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ ಜಿಲ್ಲಾ ಮಟ್ಟದಲ್ಲಿ ಗುರುತಿಸಿದ್ದಾರೆ.
ಯುನೈಟೆಡ್ ಕ್ಲಬ್ಬಿನ ಅಧ್ಯಕ್ಷರಿಗೆ, ಎಲ್ಲಾ ಪದಾಧಿಕಾರಿಗಳಿಗೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಪರವಾಗಿ ಅಭಿನಂದನೆಯನ್ನು ಕೂಡ ಪದಾಧಿಕಾರಿಗಳು ಸಲ್ಲಿಸಿದ್ದಾರೆ.