ದೀಪಾವಳಿಗೆ ಪಟಾಕಿ ಸಿಡಿಸುವಾಗ ಎಚ್ಚರ..!
– ಹಬ್ಬದ ಸಂಭ್ರಮ ಓಕೆ, ನಿಮ್ಮ ಮಕ್ಕಳ ಬಗ್ಗೆ ಜಾಗೃತಿ ಇರಲಿ
– ಪಟಾಕಿ ಅಂಗಡಿಯ ಮಾಲೀಕರಿಗೆ ಕೆಲವು ಸೂಚನೆ
– ಪಟಾಕಿ ಅನಾಹುತ ತಡೆಯಲು ಇಲಾಖೆ ಪ್ಲಾನ್
– ಕಣ್ಣುಗಳ ಬಗ್ಗೆ ಹುಷಾರು: ಭಾರೀ ಶಬ್ದದ ಪಟಾಕಿ ಬೇಡ
NAMMUR EXPRESS NEWS
ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಬೆಳಕಿನ ಹಬ್ಬಕ್ಕೆ ಪಟಾಕಿಯೇ ರಂಗು. ಆದರೆ ಪಟಾಕಿ ಸಿಡಿಸುವಾಗ ಎಚ್ಚರ ಇರಲಿ. ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಗಮನಿಸಬೇಕಿದೆ.
ಪಟಾಕಿ ಅನಾಹುತ ತಡೆಯಲು ಇಲಾಖೆ ಪ್ಲಾನ್
ಹಬ್ಬದ ಸಂದರ್ಭ ಅಗ್ನಿ ಅವಘಡ ತಪ್ಪಿಸಲು ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ. ಸೋಮವಾರವಷ್ಟೇ ಕಾಸರಗೋಡಿನ ನೀಲೇಶ್ವರದಲ್ಲಿ ಸಂಭವಿಸಿದ ಅಗ್ನಿ ಅವಘಡ, ಕಳೆದ ವರ್ಷ ಬೆಂಗಳೂರಿನ ಅತ್ತಿಬೆಲೆ, ಹಾವೇರಿಯಲ್ಲಿ ಸಂಭವಿಸಿದ ದುರಂತಗಳ ಹಿನ್ನೆಲೆಯಲ್ಲಿ ಎಲ್ಲೆಡೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದರಂತೆ ಎಲ್ಲಾ ಜಿಲ್ಲಾಡಳಿತ, ಅಗ್ನಿಶಾಮಕ ಇಲಾಖೆ ಕೂಡಾ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿವೆ. ವಾಹನಗಳನ್ನು ಸಜ್ಜಾಗಿಟ್ಟುಕೊಳ್ಳುವುದು, ನೀರು ಸಂಗ್ರಹಿಸಿಟ್ಟುಕೊಳ್ಳುವುದು, ಫೈಯರ್ ಸುರಕ್ಷತೆ ಸಾಧನಗಳನ್ನು ಜಾಗೃತ ಸ್ಥಿತಿಯಲ್ಲಿಡುವುದು ಹೀಗೆ ಠಾಣೆಗಳ ಸಿಬಂದಿ ಸರ್ವ ರೀತಿಯಲ್ಲಿ ಸಜ್ಜಾಗಿರಲು ಕಟ್ಟಪ್ಪಣೆ ನೀಡಲಾಗಿದೆ. ಠಾಣೆಗಳ ಸಿಬಂದಿಗೆ ರಜೆ ಇದೆ. ಹಬ್ಬದ ಸಂದರ್ಭದಲ್ಲಿ ತುರ್ತು ಸೇವೆ ಬೇಕಾಗುವ ಸಾಧ್ಯತೆ ಇರುವುದರಿಂದ ಠಾಣೆಗಳಾರೂ ರಜೆ ಮಾಡದಂತೆ ಸುತ್ತೋಲೆ ನೀಡಲಾಗಿದೆ.
– ಪಟಾಕಿ ಅಂಗಡಿಯ ಮಾಲೀಕರಿಗೆ ಕೆಲವು ಸೂಚನೆ
ಎಲ್ಲಾ ಪಟಾಕಿ ಮಳಿಗೆಗಳು ಅಗತ್ಯ ಸುರಕ್ಷತಾ ಸಾಧನಗಳನ್ನು ಹೊಂದಿರಬೇಕು.ಮಳಿಗೆ ತೆರೆಯುವಲ್ಲಿ ಸಾಕಷ್ಟು ತೆರೆದ ಸ್ಥಳ ಇರಬೇಕು. ವಸತಿ ಪ್ರದೇಶ, ಶಾಲಾ ಬಳಿ ತೆರೆಯಬಾರದು.ಅಂಗಡಿಗಳ ಮಧ್ಯ 5 ಕಿ.ಮೀ ಅಂತರ ಕಡ್ಡಾಯ.ಮರಳು ತುಂಬಿದ ಬಕೆಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಡ್ರಮ್ ಗಳಲ್ಲಿ ನೀರು ಇಟ್ಟುಕೊಳ್ಳಬೇಕು. ಧೂಮಪಾನ ಮಾಡದಂತೆ ಸೂಚನಾ ಫಲಕ ಅಳವಡಿಸಿಕೊಳ್ಳುವುದು.ಮಳಿಗೆಗಳಲ್ಲಿ ಗ್ಯಾಸ್ ಸಿಲಿಂಡರ್, ತ್ಯಾಜ್ಯ ಕಾಗದ ಇಡಬಾರದು.
ಜನರಿಗೆ ಪಟಾಕಿ ಮಾರ್ಗಸೂಚಿ
ಜನವಸತಿಗಿಂತ ಬಯಲು ಪ್ರದೇಶಗಳಲ್ಲಿ ಪಟಾಕಿ ಬಿಡುವುದು ಸೂಕ್ತ.
ಅಪಾಯಕಾರಿ ಪಟಾಕಿಗಳು ಬೇಡ, ಹಸಿರು ಪಟಾಕಿಗಳಿಗೆ ಆದ್ಯತೆ ಇರಲಿ.ಸಣ್ಣ ಮಕ್ಕಳ ಕೈಗೆ ಸಣ್ಣಪುಟ್ಟ ಪಟಾಕಿಗಳನ್ನಷ್ಟೇ ಕೊಡಿ, ಹಿರಿಯರು ಜೊತೆಗಿರಲಿ. ಎಲ್ಲರೂ ಸೇರಿ ಪಟಾಕಿ ಸಿಡಿಸುವುದು ಉತ್ತಮ. ಕಣ್ಣಿಗೆ, ಮೈ ಗೆ ಬೆಂಕಿ ತಗಲಿದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಿರಿ.