ಹಾಸನದಲ್ಲಿ ನ.17ರಂದು ಡಾಗ್ ಶೋ!
– ಹಾಸನ ಕೆನಲ್ ಕ್ಲಬ್ನಿಂದ ಆಯೋಜನೆ: ಬರಲಿವೆ ವಿವಿಧ ತಳಿ ಶ್ವಾನ
– ಮೊದಲ ಬಾರಿಗೆ ಹೊರಾಂಗಣದಲ್ಲಿ ಪೆಟ್ ಡಾಗ್ ಶೋ
NAMMUR EXPRESS NEWS
ಹಾಸನ: ಹಾಸನ ಕೆನಲ್ ಕ್ಲಬ್ನಿಂದ ಬರುವ ನ.17 ಭಾನುವಾರದಂದು ಬೆಳಿಗ್ಗೆ ನಗರದ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಪೆಟ್ ಡಾಗ್ ಶೋ ನಡೆಯಲಿದೆ. ಪಪ್ಪಿ(೩-೬ ತಿಂಗಳು), ಜೂನಿಯರ್(೬-೧೨ ತಿಂಗಳು) ಮತ್ತು ಅಡಲ್ಟ್ ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು. ಹಾಸನ ಕೆನಲ್ ಕ್ಲಬ್ ಕಳೆದ ೪ ವರ್ಷಗಳಿಂದ ಒಂದೇ ವೇದಿಕೆಯಲ್ಲಿ ವಿವಿಧ ತಳಿಗಳ ನಾಯಿಗಳ ಪ್ರದರ್ಶನ ಮಾಡಿಕೊಂಡು ಬರುತ್ತಿದೆ. ಬೆಸ್ಟ್ ಇನ್ ಶೋ ಶ್ವಾನಗಳಿಗೆ ೧ ಲಕ್ಷದವರೆಗೂ ಬಹುಮಾನ ನೀಡಲಾಗುವುದು.
ಕ್ಲಬ್ನ ಪಧಾನ ಕಾರ್ಯದರ್ಶಿ ಹೆಚ್.ಎಂ. ರಾಘವೇಂದ್ರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಶ್ವಾನ ಪ್ರದರ್ಶನದಿಂದ ಸ್ವದೇಶಿ ಮತ್ತು ವಿದೇಶಿ ತಳಿಗಳ ಬಗ್ಗೆ ಅರಿವುದು ಮೂಡಿಸುವುದು, ಶ್ವಾನಗಳ ಬಗ್ಗೆ ಜನರಿಗೆ ಆಕ್ತ ಮೂಡಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಅನುಕೂಲ ಆಗಲಿದೆ ಎಂದರು.
ಇದೇ ಮೊದಲ ಬಾರಿಗೆ ಹೊರಾಂಗಣದಲ್ಲಿ ಪೆಟ್ ಡಾಗ್ ಶೋ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಇನ್ನೂರಕ್ಕೂ ಹೆಚ್ಚು ವಿವಿಧ ತಳಿಯ ಡಾಗ್ ಭಾಗವಹಿಸಲಿವೆ. ಪ್ರವೇಶ ಶುಲ್ಕ ಸಾಮಾನ್ಯ ಶ್ವಾನಗಳಿಗೆ ೫೦೦ ರೂ, ಇಂಡಿಯನ್ ಬ್ರೀಡ್ಗೆ ೩೦೦ ರೂ ವಿಧಿಸಲಾಗುವುದು. ಮೊದಲ ಬಹುಮಾನವಾಗಿ ೧೫,೦೦೦ ರೂ, ಎರಡನೇ ಬಹುಮಾನವಾಗಿ ೧೨ ಸಾವಿರ ರೂ., ಮೂರನೇ ಬಹುಮಾನವಾಗಿ ೧೦ ಸಾವಿರ ರೂ. ಈಗೆ ಹಲವಾರು ಬಹುಮಾನ ಕೊಡಲಾಗುತ್ತದೆ. ಇದರಲ್ಲಿ ಇಂಡಿಯನ್ ಬ್ರೀಡ್ ಮತ್ತು ಪಪ್ಪಿ ಬ್ರೀಡ್ ಕ್ಲಾಸ್ ಗೆ ವಿವಿಧ ರೀತಿಯ ಬಹುಮಾನ ನೀಡಲಾಗುತ್ತದೆ.
ಕ್ಲಬ್ ಅಧ್ಯಕ್ಷ ಡಾ. ಡಿ.ಆರ್. ಮಂಜುನಾಥ್, ಜಂಟಿ
ಕಾರ್ಯದರ್ಶಿ ಪ್ರೀತಂ, ವಿಶ್ವ ಪ್ರಸಾದ್ ಇತರರು ಉಪಸ್ಥಿತರಿದ್ದರು.
ಆಸಕ್ತರು ಸಂಪರ್ಕಿಸಿ: ೯೯೧೬೧೪೧೬೬೬, ೯೮೪೫೭೦೫೦೨೪