ಡಿ.10ರಿಂದ ಆಳ್ವಾಸ್ ವಿರಾಸತ್ ಸಂಭ್ರಮ!
– ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ, ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಆಯೋಜನೆ: ಸರ್ವರಿಗೂ ಸ್ವಾಗತ
– 30ನೇ ವರ್ಷದ ಸಂಭ್ರಮ: ಆರು ದಿನಗಳ ಕಾಲ ಅದ್ಧೂರಿ ಉತ್ಸವ
NAMMUR EXPRESS NEWS
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತನ್ನ ಪ್ರತಿಷ್ಠಿತ ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ ಆಳ್ವಾಸ್ ವಿರಾಸತ್ ಅನ್ನು ಡಿಸೆಂಬರ್ 10 ರಿಂದ 15, 2024 ರವರೆಗೆ ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಆಯೋಜಿಸಲು ಸಜ್ಜಾಗಿದೆ.
ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ನೇತೃತ್ವದಲ್ಲಿ ನಡೆಯುವ ಈ ಉತ್ಸವ ಇಡೀ ದೇಶದ ಗಮನ ಸೆಳೆಯಲಿದೆ. 30ನೇ ವರ್ಷದ ಸಂಭ್ರಮದಲ್ಲಿರುವ ಈ ಉತ್ಸವ ಆರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಪ್ರತಿ ದಿನ ಲಕ್ಷ ಲಕ್ಷ ಜನ ಭೇಟಿ ನೀಡಲಿದ್ದಾರೆ. ಮೊದಲ ಐದು ದಿನಗಳಲ್ಲಿ ಆಹಾರೋತ್ಸವ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಇತರ ಪ್ರದರ್ಶನಗಳೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮ ದಿನವಾದ ಡಿಸೆಂಬರ್ 15, ಭಾನುವಾರದಂದು ಬರುತ್ತದೆ, ಇದನ್ನು ಪ್ರದರ್ಶನಗಳಿಗೆ ಮಾತ್ರ ಮೀಸಲಿಡಲಾಗುತ್ತದೆ. ಹಿಂದಿನ ವರ್ಷಗಳಂತೆ, ಉತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ. ಕಲೆ ಮತ್ತು ಸಂಸ್ಕೃತಿಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಡಾ.ಮೋಹನ್ ಆಳ್ವಾ ಅವರು ಆಹ್ವಾನ ನೀಡಿದ್ದಾರೆ.
ಆಹಾರೋತ್ಸವ, ಕೃಷಿ-ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ
ಮೂಡುಬಿದಿರೆ: ಡಿ. 10ರ ಮಂಗಳವಾರದಿಂದ 15ರವರೆಗೆ ಭಾನುವಾರದವರೆಗೆ ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ, ಮಿಜಾರುಗುತ್ತು ಆನಂದ ಆಳ್ವರ ಸ್ಮರಣಾರ್ಥ ಆರು ದಿನಗಳ ರೈತರ ಸಂತೆ ಮತ್ತು ಕೃಷಿಮೇಳವು ಪ್ಯಾಲೇಸ್ಗ್ರೌಂಡ್ ನಲ್ಲಿ ನಡೆಸಲು ಆಯೋಜಿಸಲಾಗಿದೆ. ಆಹಾರೋತ್ಸವ-ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳವನ್ನು ಪ್ಯಾಲೇಸ್ಗೌಂಡ್ ಹಾಗೂ ಮುಂಡುದೆಗುತ್ತು ಕೆ.ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ) ಸಭಾಂಗಣ, ವಿದ್ಯಾಗಿರಿ, ಮೂಡುಬಿದಿರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಮಹಾಮೇಳದಲ್ಲಿ ಭಾಗವಹಿಸಿ ಮಳಿಗೆ ತೆರೆಯಲು ಆತ್ಮೀಯ ಆಮಂತ್ರಣ ವಿತರಿಸಲಾಯಿತು.
ಈ ಮಹಾಮೇಳದಲ್ಲಿ ಆಹಾರೋತ್ಸವ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಸಸ್ಯಾಹಾರ-ಮಾಂಸಾಹಾರ ಖಾದ್ಯಗಳು, ಫಾಸ್ಟ್ಫುಡ್ ಹಾಗೂ ವೈವಿಧ್ಯಮಯ ಪಾನೀಯಗಳಿಗೆ ಸಂಬಂಧಿಸಿದ ಸಿದ್ಧ ಮತ್ತು ಸ್ಥಳದಲ್ಲೇ ತಯಾರಿಸಿ ನೀಡುವ ಆಹಾರ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೃಷಿಗೆ ಸಂಬಂಧಿಸಿದ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಹಣ್ಣು, ತರಕಾರಿ, ಹೂವು ಬೀಜಗಳಮಾರಾಟ, ನರ್ಸರಿಗಳು, ಸಾವಯವ-ರಾಸಾಯನಿಕ ಗೊಬ್ಬರಗಳು, ನೀರು-ನೆಲಗಳಲ್ಲಿ ಬೆಳೆಯುವ ವೈವಿಧ್ಯಮಯ ಹೂಗಿಡಗಳು, ಕೃಷಿ ಉಪಕರಣ-ಯಂತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ.
* ಈ ಬಾರಿಯ ಪ್ರಮುಖ ಆಕರ್ಷಣೆ ಎಂದರೆ “ರೈತರ ಸಂತೆ!!
ಈ ರೈತರ ಸಂತೆಯಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.
ಮೊದಲು ಬಂದವರಿಗೆ ಮೊದಲ ಆದ್ಯತೆ. ರೈತರೇ ನೇರವಾಗಿ ತಾವು ಬೆಳೆದ ತರಕಾರಿ, ಹಣ್ಣು ಪುಷ್ಪಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ಹಾಗೆಯೇ ಕರಕುಶಲ ವಸ್ತುಗಳಾದಂತಹ ಸೆರಾಮಿಕ್ಸ್ ಮತ್ತು ಗಾಜಿನ ವಸ್ತುಗಳು, ಫೈಬರ್ ಮತ್ತು ಜವಳಿ ಕರಕುಶಲ ವಸ್ತುಗಳು, ಹೂವಿನ ಕರಕುಶಲ ವಸ್ತುಗಳು, ಚರ್ಮದ ಕರಕುಶಲ ವಸ್ತುಗಳು, ಗೃಹಪಯೋಗಿ ವಸ್ತುಗಳ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆಹಾರ ಮತ್ತು ಕರಕುಶಲ ಮೇಳದ ಮಾರಾಟ ಮತ್ತು ಪ್ರದರ್ಶನ ಕೃಷಿಸಿರಿ ವೇದಿಕೆಯಲ್ಲಿ ನಡೆಯಲಿದೆ. ಒಟ್ಟಾರೆ ಈ ಮಹಾಮೇಳದಲ್ಲಿ 500 ರಿಂದ 600 ಮಳಿಗೆಗಳನ್ನು ತೆರೆಯಲು ಅವಕಾಶವಿದ್ದು, ಆಸಕ್ತ ವ್ಯಾಪಾರಿಗಳು ಮಳಿಗೆಗಳನ್ನು ಅದಷ್ಟು ಬೇಗ ನೊಂದಾಯಿಸಿಕೊಳ್ಳಲು ವಿನಂತಿಸಲಾಗಿದೆ. ಈ ಮೇಳದಲ್ಲಿ ಮಳಿಗೆಯನ್ನು ತೆರೆಯಲು ಇಚ್ಚಿಸಿದರೆ, ರೈತರಿಗೆ ನಿಮ್ಮ ಮಳಿಗೆಯ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕಾಗುತ್ತದೆ.
ಹಾಗೆಯೇ ಮಳಿಗೆಯ ವಸ್ತುಗಳ ಪ್ರದರ್ಶನ ಮತ್ತು ಆರು ದಿನಗಳ ಕಾಲ ನಡೆಯುವ ಈ ಮಹಾಮೇಳದಲ್ಲಿ ಆರು ದಿನಗಳಿಗೆ ಒಟ್ಟು 10XIO ಅಡಿ ಸುತ್ತಳತೆಯ ಒಂದು ಕೃಷಿ ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ರೂ. 6,000/-, 10X10 ಅಡಿ ಸುತ್ತಳತೆಯ ಒಂದು ಆಹಾರ ಮಳಿಗೆಗೆ ರೂ. 10,000/- ಮತ್ತು 10X20 ಅಡಿ ಸುತ್ತಳತೆಯ ಒಂದು ನರ್ಸರಿ ಮಳಿಗೆಗೆ ರೂ. 10,000/- ದರ ನಿಗದಿ ಮಾಡಲಾಗಿದೆ. ಆಸಕ್ತರು ಅಗತ್ಯಕ್ಕೆ ಅನುಗುಣವಾಗಿ ಮಳಿಗೆಗಳನ್ನು ತೆರೆಯಲು ಈ ಮೂಲಕ ಆಹ್ವಾನಿಸಲಾಗಿದೆ.
* ಮಳಿಗೆಗಳನ್ನು ತೆರೆಯ ಬಯಸುವವರು ಅರ್ಜಿ ಸಲ್ಲಿಸುವುದು ಹೇಗೆ?
ಮಳಿಗೆಗಳನ್ನು ತೆರೆಯ ಬಯಸುವವರು ನಗದು ರೂಪದಲ್ಲಿ, ALVA’S VIRASATH (R.) ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಡಿಮಾಂಡ್ ಡ್ರಾಫ್ಟ್ (ಡಿ.ಡಿ.) ಅಥವಾ QR Code (Online) ಸ್ಕಾನಿಂಗ್ ಮೂಲಕ ಶುಲ್ಕ ಸಂದಾಯ ಮಾಡಿ ದಿನಾಂಕ 06-12-2024ರ ಒಳಗಾಗಿ Google Forms link ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.
Google Forms ಬಳಕೆಯ ಮಾಹಿತಿಯಿಲ್ಲದವರು ಈ ಪತ್ರದೊಂದಿಗೆ ಲಗತ್ತಿಸಿರುವ ಅರ್ಜಿ ಫಾರಂವನ್ನು ತುಂಬಿ ಕಳುಹಿಸಿಕೊಡಬೇಕಾಗಿ ಅಧ್ಯಕ್ಷರು,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.), ಮೂಡುಬಿದಿರೆ ಡಾಎಂ.ಮೋಹನ ಆಳ್ವ ಈ ಮೂಲಕ ವಿನಂತಿಸಿಕೊಳ್ಳಳ್ಳುತ್ತಿದ್ದಾರೆ.