NAMMUR EXPRESS NEWS
ಬೆಂಗಳೂರು: ವಿಶ್ವದ ಅತ್ಯಂತ ಮೌಲ್ಯಯುತವಾದ ಸ್ಟಾರ್ಟ್ಅಪ್ ಕಂಪನಿ ಬೈಜೂಸ್ ಸುಮಾರು 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ.
ಮುಂದಿನ 6 ತಿಂಗಳಲ್ಲಿ 2500 ನೌಕರರನ್ನು ವಜಾ ಮಾಡಲಿದೆ ಎಂದು ಕಂಪನಿಯ ಸಹ ಸಂಸ್ಥಾಪಕಿ ದಿವ್ಯಾ
ಗೋಕುಲ್ನಾಥ್ ಹೇಳಿದ್ದಾರೆ. ಕಾರ್ಯನಿರ್ವಹಣಾ ವೆಚ್ಚವನ್ನು ತಗ್ಗಿಸಲು ಬೈಜೂಸ್ ಶೇ.5ರಷ್ಟು ನೌಕರರು ಎಂದರೆ 2500 ಜನರನ್ನು ವಜಾ ಮಾಡಲು ನಿರ್ಧರಿಸಿದೆ.
ಕಂಪನಿಯನ್ನು ಲಾಭದಾಯಕ ಮಾಡಿಕೊಳ್ಳಲು 10 ಸಾವಿರ ಶಿಕ್ಷಕಕರನ್ನು ನೇಮಿಸಲಾಗುವುದು. ಈ ಪ್ರಕ್ರಿಯೆ ಮುಂದಿನ 6 ತಿಂಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೂನ್ನಲ್ಲಿಯೂ ನೂರಾರು ಉದ್ಯೋಗಿಗಳನ್ನು ಬೈಜೂಸ್ ವಜಾಗೊಳಿಸಿತ್ತು.
ಕೋವಿಡ್ ಬಳಿಕ ಭಾರೀ ನಷ್ಟವನ್ನು ಬೈಜೂಸ್ ಅನುಭವಿಸುತ್ತಿದೆ. 2020ರ ಹಣಕಾಸು ವರ್ಷದಲ್ಲಿ 262 ಕೋಟಿ ರೂ. ನಷ್ಟ ಅನುಭವಿಸಿದ್ದರೆ 2021ರ ಆರ್ಥಿಕ ವರ್ಷದಲ್ಲಿ 4,588 ಕೋಟಿ ನಷ್ಟ ಅನುಭವಿಸಿದೆ.
ಒಟ್ಟು 22 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಬೈಜೂಸ್ ಭಾರತದ ಅತ್ಯಂತ ಮೌಲ್ಯಯುತ ಸ್ಟಾರ್ಟಪ್ ಕಂಪನಿ ಎಂದು ಹೆಸರು ಪಡೆದಿದೆ.
2,500 ಉದ್ಯೋಗಿಗಳಿಗೆ ಬೈಜುಸ್ ಕಂಪನಿ ಗೇಟ್ ಪಾಸ್!- 10,000 ಶಿಕ್ಷಕರ ನೇಮಕಕ್ಕೆ ಪ್ಲಾನ್- ಕರೋನಾ ಬಳಿಕ ಭಾರೀ ನಷ್ಟ ಅನುಭವಿಸಿದ ಕಂಪನಿ
Related Posts
Add A Comment