- ಪೊಲೀಸ್ ತನಿಖೆ ನಡೆದು ಸತ್ಯ ಹೊರ ಬರಲಿ: ಸುಮ್ಮನೆ ತಪ್ಪು ಸಂದೇಶ ನೀಡಬೇಡಿ
- ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಿಗೆ ಭಕ್ತರ ಮನವಿ
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಶಾಸಕ ರೇಣುಕಾಚಾರ್ಯ ಅವರ ಸಹೋದರ ಮಗ ಚಂದ್ರು ಸಾವಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಒಬ್ಬ ವ್ಯಕ್ತಿಯ ಸಾವಿಗೆ ಯಾರೇ ಕಾರಣವಾಗಿದ್ದರೂ ಅವರು ಕಾನೂನಾತ್ಮಕವಾಗಿ ಶಿಕ್ಷೆಗೆ ಒಳಗಾಗಬೇಕೆಂಬುದು ನಮ್ಮ ಆಶಯ. ಹಾಗೆಯೇ ಚಂದ್ರು ಸಾವಿನ ರಹಸ್ಯ ಆದಷ್ಟು ಬೇಗ ಬಹಿರಂಗವಾಗಲಿ ಎನ್ನುವುದನ್ನು ನಾವೂ ಆಗ್ರಹಿಸುತ್ತೇವೆ.
ಹೀಗಿರುವಾಗ ಚಂದ್ರು ಸಾವಿನ ವಿಷಯದಲ್ಲಿ ಸಾವಿರಾರು ಅನುಯಾಯಿಗಳನ್ನು ಹೊಂದಿರುವ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹೆಸರು ಅನೌಪಚಾರಿಕವಾಗಿ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹಾಗಿದ್ದರೂ ಚಂದ್ರು ದಿನಂಪ್ರತಿ ನೂರಾರು ಭಕ್ತರು ಮತ್ತು ಅನುಯಾಯಿಗಳು ಭೇಟಿ ನೀಡುವ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಗೌರಿಗದ್ದೆ ಆಶ್ರಮಕ್ಕೆ ಭೇಟಿ ಕೊಟ್ಟಿದ್ದ ಎಂಬ ಒಂದೇ ವಿಚಾರದಿಂದ ಚಂದ್ರು ಸಾವಿನಲ್ಲಿ ವಿನಯ್ ಗುರೂಜಿ ಅವರ ಹೆಸರನ್ನು ತಳುಕು ಹಾಕುವುದು ಸಮಂಜಸವಲ್ಲ.
ಚಂದ್ರು ಸಾವಿನ ವಿಚಾರವಾಗಿ ವಿನಯ್ ಗುರೂಜಿ ಹೆಸರು ಸಾಮಾಜಿಕ ಜಾಲತಾಣಗಳಲ್ಲಷ್ಟೇ ತಳುಕು ಹಾಕಿದ್ದರೂ ಈ ಕುರಿತು ಸ್ಪಷ್ಟನೆಗಾಗಿ ಪೊಲೀಸರು ಹಾಗೂ ನ್ಯಾಯಾಂಗದ ಮುಂದೆ ಎಲ್ಲಾ ರೀತಿಯ ಸಹಕಾರವನ್ನು ನೀಡಲು ವಿನಯ್ ಗುರೂಜಿ ಆಗಲೀ ಅವರ ಆಶ್ರಮವಾಗಲೀ ಬದ್ದರಾಗಿದ್ದು ಆ ರೀತಿಯಲ್ಲಿ ಸರಿಯಾದ ಸಹಕಾರ ಮತ್ತು ಸ್ಪಂದನೆ ನೀಡಲಾಗುತ್ತಿದೆ.
ಹಾಗಿದ್ದರೂ ಅನೌಪಚಾರಿಕ ಕಾರ್ಯಕ್ರಮಗಳು, ಲೇಖನಗಳಲ್ಲಿ ತಮ್ಮ ಗೌರವಾನ್ವಿತ ಮಾಧ್ಯಮದಲ್ಲಿ ಚಂದ್ರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಗುರೂಜಿ ಅವರ ಹೆಸರನ್ನ ಬಳಸಲಾಗುತ್ತಿದ್ದು ಅದು ಸಮಂಜಸವಲ್ಲ. ತಮ್ಮ ಮಾಧ್ಯಮದಲ್ಲಿ ನೀಡಲಾಗಿರುವ ಸುದ್ದಿಯಾಗಲೀ, ಹೆಡ್ ಲೈನ್ಸ್ ಆಗಲೀ, ತಂಬ್ ನೈಲ್ ಗಳಾಗಲೀ ಎಲ್ಲವೂ ಜನರಿಗೆ ಉತ್ತಮ ಮಾಹಿತಿ ಕೊಡುವಂತಹ ವಿಚಾರವಲ್ಲ. ಆದುದರಿಂದಲೇ ತಮ್ಮ ಗೌರವಾನ್ವಿತ ಮಾಧ್ಯಮದಲ್ಲಿ ವಿನಯ್ ಗುರೂಜಿ ಅವರ ಹೆಸರನ್ನು ಬಳಸಿರುವ ಸುದ್ದಿಗಳನ್ನು ನೋಡಲು ಲಕ್ಷಾಂತರ ಅನುಯಾಯಿಗಳಲ್ಲಿ ಬಹಳ ನೋವು ತರಿಸುತ್ತದೆ.
ಪೊಲೀಸರಿಂದ ಅಥವಾ ನ್ಯಾಯಾಂಗದಿಂದ ಈ ಕುರಿತು ಯಾವುದೇ ಮಾಹಿತಿಗಳು ಹೊರಬಂದಿಲ್ಲವಾಗಿದ್ದರೂ ಊಹಾಪೋಹಗಳ ಮೇಲೆ ವಿನಯ್ ಗುರೂಜಿ ಅವರ ಹೆಸರಿನಲ್ಲಿ ಸುದ್ದಿಗಳನ್ನು ಬಿತ್ತರಿಸುವುದು ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ. ಪೊಲೀಸರ ತನಿಖೆಯ ಮೂಲಕವಷ್ಟೇ ಎಲ್ಲಾ ಸತ್ಯಾಸತ್ಯತೆಗಳು ಹೊರಬರಬೇಕಾಗಿದೆ.
ಅಲ್ಲದೇ ಇಂತಹ ಅಪಪ್ರಚಾರಗಳಿಗೆ ಆಸ್ಪದ ನೀಡದೇ ಜನರಲ್ಲಿ ತಪ್ಪು ಸಂದೇಶವನ್ನು ನೀಡುವಂತಾಗದಂತೆ ತಾವು ನೋಡಿಕೊಳ್ಳಬೇಕಾಗಿ ಗೌರವಯುತವಾಗಿ ವಿನಂತಿ
ಇಂತಿ ತಮ್ಮ ವಿಶ್ವಾಸಿ
ಭಕ್ತವೃಂದ
ಅವಧೂತ ಶ್ರೀ ವಿನಯ್ ಗುರೂಜಿ ಅಶ್ರಮ
ಗೌರಿಗದ್ದೆ