- ಅಪಘಾತದಿಂದ ಕಾರು ತುಂಗಾ ಕಾಲುವೆಗೆ ಬಿದ್ದಿದೆ
- 40 ಪುಟಗಳ ಎಫ್ ಎಸ್ ಎಲ್ ವರದಿಯಲ್ಲಿ ಬಹಿರಂಗ
- ಚಂದ್ರಶೇಖರ್ ಸಾವಿನಲ್ಲಿ ಹಲವು ರಾಜಕೀಯ..!?
- ಪ್ರಕರಣದಲ್ಲಿ ವಿನಯ್ ಗುರೂಜಿ ಹೆಸರು ದುರ್ಬಳಕೆ!?
NAMMUR EXPRESS NEWS
ದಾವಣಗೆರೆ: ಭಾರೀ ಕುತೂಹಲ ಕೆರಳಿಸಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರು ಅವರ ಸಾವು ಇದೀಗ ಅಪಘಾತ ಎಂಬುದು ದೃಢಪಟ್ಟಿದೆ.
ಸರ್ಕಾರ ನಡೆಸಿದ ಎಫ್.ಎಸ್.ಎಲ್ ವರದಿಯಲ್ಲಿ ಚಂದ್ರಶೇಖರ್ ಸಾವಿನ ರಹಸ್ಯ ಬಯಲಾಗಿದ್ದು,ಓವರ್ ಸ್ಪೀಡ್ನಿಂದ ಚಂದ್ರು ಕಾರು ಸೇತುವೆಗೆ ಡಿಕ್ಕಿಯಾಗಿ ಕಾರು ತುಂಗಾ ಕಾಲುವೆಗೆ ಬಿದ್ದಿದೆ. ಇದರ ಪರಿಣಾಮ ಚಂದ್ರು ಸಾವನ್ನಪ್ಪಿದ್ದಾನೆ ಎಂಬ 40 ಪುಟಗಳ ವರದಿಯನ್ನು ಸಲ್ಲಿಕೆ ಮಾಡಲಾಗಿದೆ.
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ!: ಎಫ್ ಎಸ್ ಎಲ್ ರಿಪೋರ್ಟ್, ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದ್ದು ಮರಣೋತ್ತರ ಪರೀಕ್ಷೆಯ ಪ್ರಕಾರ ಶ್ವಾಸಕೋಶದ ಒಳಗೆ ನೀರು ನುಗ್ಗಿ ಸಾವನ್ನಪ್ಪಿದ್ದಾರೆ ಎಂದು ವರದಿಯನ್ನು ಕೊಟ್ಟಿದ್ದಾರೆ.
40 ಪುಟಗಳ ಎಫ್ ಎಸ್ ಎಲ್ ವರದಿಯಲ್ಲಿ ಅಪಘಾತದಲ್ಲಿ ಚಂದ್ರಶೇಖರ್ ಸಾವು ಎಂದು ದೃಢಪಡಿಸಿ ದ್ದಾರೆ. ಓವರ್ ಸ್ಪೀಡ್ನಿಂದ ಚಂದ್ರು ಕಾರು ಡಿಕ್ಕಿಯಾಗಿ ತುಂಗಾ ಕಾಲುವೆಗೆ ಬಿದ್ದಿದೆ ಎಂದು ಎಫ್ ಎಸ್ ಎಲ್ ವರದಿಯಲ್ಲಿ ಅಪಘಾತ ಎಂದು ಉಲ್ಲೇಖ ಮಾಡಿದೆ. ಇನ್ನೂ ಒಂದು ಹಂತದ ಪರೀಕ್ಷೆ ಬಾಕಿ ಇದೆ ಎಂದುವಿಧಿ ವಿಜ್ಞಾನ ತಜ್ಞ ಫಣೀಂದ್ರ ಮಾಹಿತಿ ನೀಡಿದ್ದಾರೆ.
ಮೃತ ಮಗನ ಹೆಸರಲ್ಲಿ ರೇಣುಕಾಚಾರ್ಯ ರಾಜಕೀಯ..!?: ಜನರ ಜತೆ ನಾಟಕ..?
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಚಂದ್ರು ಸಹಜ ಸಾವನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕ್ಷೇತ್ರದ ಜನರ ಮುಂದೆ ಊಟ, ಕಣ್ಣೀರಿನ ನಾಟಕ ಆಡುವುದು ಅಸಹ್ಯ ಹುಟ್ಟಿಸಿದೆ ಎಂಬ ಚರ್ಚೆ ಕೇಳಿ ಬರುತ್ತಿದೆ. ಜೊತೆಗೆ ತಮ್ಮ ಸರ್ಕಾರದ ಮೇಲೆಯೇ ಆರೋಪ ಮಾಡುತ್ತಿರುವುದು ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.
ವಿನಯ್ ಗುರೂಜಿ ಹೆಸರು ದುರ್ಬಳಕೆ!?
ಚಂದ್ರು ವಿನಯ್ ಗುರೂಜಿ ಮಠಕ್ಕೆ ಹೋಗಿ ಶಿವಮೊಗ್ಗ ಮೂಲಕ ಹೊನ್ನಾಳಿಯ ನ್ಯಾಮತಿ ಸಮೀಪದ ಸುರಹೊನ್ನೆ ಬಳಿ ತುಂಗಾ ಕಾಲುವೆಗೆ ಡಿಕ್ಕಿಯಾಗಿತ್ತು. ಆದರೆ ವಿನಯ್ ಗುರೂಜಿ ಮಠಕ್ಕೆ ಬಂದಿದ್ದ ಕಾರಣಕ್ಕೆ ವಿನಯ್ ಗುರೂಜಿ ವಿರುದ್ಧ ಪಿತೂರಿ ಮಾಡುತ್ತಿರುವ ಒಂದು ತಂಡ ಅವರ ಹೆಸರನ್ನು ತಳಕು ಹಾಕಿ ಅವರ ಹೆಸರನ್ನು ಹಾಳು ಮಾಡುವ ಯತ್ನ ಮಾಡಿದೆ.. ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ತನಿಖೆಗೆ ಮಠ ಎಲ್ಲಾ ರೀತಿಯಲ್ಲೂ ಸಹಕಾರ ಮಾಡಿದೆ ಎಂದು ಪ್ರತಿನಿಧಿಗಳು ಹೇಳಿದ್ದಾರೆ.