ಮಲೆನಾಡಿನಲ್ಲಿ ಮತ್ತೆ ಮಳೆರಾಯನ ಆರ್ಭಟ
- ಎಲೆಚುಕ್ಕಿ ರೋಗ ಹೆಚ್ಚಾಗುವ ಸಾಧ್ಯತೆ : ರೈತರಿಗೆ ಸಂಕಷ್ಟ
NAMMUR EXPRESS NEWS
ತೀರ್ಥಹಳ್ಳಿ : ಮಲೆನಾಡಿನಲ್ಲಿ ಕೃಷಿ ಚಟುವಟಿಗೆ ಶುರುವಾಗುತ್ತಿದ್ದಂತೆ ಮಳೆರಾಯನ ಹಾವಳಿ ಕೂಡ ಶುರುವಾಗಿದೆ. ಹವಾಮಾನ ವೈಪರೀತ್ಯದಿಂದ ಮಲೆನಾಡಿನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಮಳೆ ಶುರುವಾಗಿದ್ದು ರೈತರಿಗೆ ಎಲೆಚುಕ್ಕಿ ರೋಗದ ಜೊತೆ ಮಳೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗೆ ಮಳೆ ಬಂದರೆ ಎಲ್ಲಾ ಬೆಳೆಗಳು ನಾಶವಾಗುವ ಸಾಧ್ಯತೆ ಇದೆ ಹಾಗೂ ಎಲೆಚುಕ್ಕಿ ರೋಗ ಹೆಚ್ಚಾಗಿ ಅಡಿಕೆ ಮರಗಳು ನಾಶವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
ಇನ್ನೂ ಗದ್ದೆಗಳಲ್ಲಿ ಭತ್ತದ ತೆನೆ ಬರುವ ಮೊದಲೇ ಹೀಗೆ ಮಳೆಬಂದರೆ ತೆನೆ ಕಡಿಮೆ ಆಗುತ್ತದೆ. ಇದರಿಂದ ಆಹಾರ ಆಭದ್ರತೆ ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.