- ಮಾ.4ರಂದು ರಾಜ್ಯದಲ್ಲಿ ಆಮ್ ಆದ್ಮಿ ಅಲೆ
- ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಸೇರಿ ಅನೇಕ ನಾಯಕರ ಆಗಮನ
NAMMUR EXPRESS NEWS
ದಾವಣಗೆರೆ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ದಾವಣಗೆರೆಯಲ್ಲಿ ಮಾ.4ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯದಲ್ಲಿ ಆಮ್ ಆದ್ಮಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಜೊತೆಗೆ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ರಾಜ್ಯದ ಜನರಿಗೆ ತಿಳಿಸಲಿದ್ದಾರೆ.
ಮಾ.4ರ ಶನಿವಾರ ಬೆಳಗ್ಗೆ 11 ಗಂಟೆಗೆ ದಾವಣಗೆರೆ ಸರ್ಕಾರಿ ಹೈಸ್ಕೂಲ್, ಮೈದಾನದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ದೆಹಲಿಯಲ್ಲಿ ಸಮಸ್ತವಾದ ಆಡಳಿತವನ್ನು ನೀಡುವುದರೊಂದಿಗೆ ಉಚಿತ ಉತ್ತಮ ಶಿಕ್ಷಣ, ಉಚಿತ ಅತ್ಯುತ್ತಮ ಚಿಕಿತ್ಸೆ, ಜೀರೋ ಕರೆಂಟ್ ಬಿಲ್, ವಿಶ್ವ ದರ್ಜೆಯ ಆಸ್ಪತ್ರೆಗಳು, ಜೀರೋ ವಾಟರ್ ಬಿಲ್, ಉಚಿತ ಬಸ್ ಪ್ರಯಾಣ, ಹೀಗೆ ನವದೆಹಲಿಯಲ್ಲಿ ಸಮಸ್ತ ವಾದ ಆಡಳಿತವನ್ನು ನೀಡಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಗಮಿಸಿ ಮಾರ್ಚ್ 4ರ ಶನಿವಾರ ದಾವಣಗೆರೆಯ ಸರ್ಕಾರಿ ಹೈಸ್ಕೂಲ್, ಮೈದಾನದಲ್ಲಿ ನಡೆಯಲಿರುವ ಆಮ್ ಆದ್ಮಿ ಪಾರ್ಟಿಯ ಸಮಾವೇಶ ಉದ್ಘಾಟಿಸಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಮಾವೇಶದಲ್ಲಿ ಪಂಜಾಬ್ ಮುಖ್ಯಮಂತ್ರಿಗಳಾದ ಭಗವಾನ್ ಮಾನ್ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಪ್ರಮುಖ ಎಲ್ಲ ಮುಖಂಡರು ಪಾಲ್ಗೊಳ್ಳುತ್ತಿದ್ದು, ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ನಿಯೋಜಿತ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.
ಸಮಸ್ತ ಜನರನ್ನು ಸ್ವಾಗತಿಸಿದ ಸಾಲೂರು ಶಿವಕುಮಾರ್
ಮಾ.4ರ ಶನಿವಾರ ದಾವಣಗೆರೆಯಲ್ಲಿ ನಮ್ಮೆಲ್ಲರ ನೆಚ್ಚಿನ ನಾಯಕ ದೇಶ ಕಂಡ ಅಪ್ರತಿಮ ಸಮರ್ಥ ಆಡಳಿತಗಾರ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಗೌರವಾನ್ವಿತ ಮುಖ್ಯಮಂತ್ರಿಗಳಾದ ಭಗವಾನ್ ಮಾನ್ ಅವರು ಇವರಿಬ್ಬರೂ ಬಂದು ಕರ್ನಾಟಕದಲ್ಲಿ ಚುನಾವಣಾ ರಣ ಕಹಳೆ 2023ಕ್ಕೆ ಚಾಲನೆ ನೀಡುತ್ತಿದ್ದಾರೆ. ಅದೊಂದು ಅಪ್ರತಿಮ ಕ್ರಾಂತಿ. ಹಜಾರೆಯ ಆಂದೋಲನ,ಆ ಆಂದೋಲನದಿಂದ ಬೆಳೆದ ಈ ಪಕ್ಷ ಇಂದು ಹೆಮ್ಮೆರವಾಗಿ ಇಡೀ ದೇಶಾದ್ಯಂತ ರಾಷ್ಟ್ರೀಯ ಪಕ್ಷವಾಗಿದೆ. ಈ ರಾಷ್ಟ್ರೀಯ ಪಕ್ಷದ ಆರೋಗ್ಯ ಹಾಗೂ ಶಿಕ್ಷಣ ಕ್ರಾಂತಿಕನಸು ರಾಜ್ಯದಲ್ಲಿ ನನಸು ಮಾಡೋಣ., ಈ ಕ್ರಾಂತಿಯಲ್ಲಿ ನಾನು ನೀವು ಎಲ್ಲರೂ ಒಂದಾಗಿ ಭಾಗಿಯಾಗೋಣ. ಬಹು ಸಂಖ್ಯೆಯಲ್ಲಿ ಇಲ್ಲಿಂದ ಹೋಗಿ ಅವರಿಗೆ ನಾವು ಧೈರ್ಯ, ಚೈತನ್ಯಹಾಗೂ ಬೆಂಬಲವನ್ನು ಕೊಡೋಣ ಎಂದು ರಾಜ್ಯ ಆಮ್ ಆದ್ಮಿ ಮುಖಂಡರು, ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು, ತೀರ್ಥಹಳ್ಳಿ ಅಭ್ಯರ್ಥಿಗಳೂ ಆದ ಸಾಲೂರು ಶಿವಕುಮಾರ್ ಗೌಡ ಕರೆ ನೀಡಿದ್ದಾರೆ. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಪೊರಕೆ ಬಳಸಿ ಭ್ರಷ್ಟರನ್ನು ಓಡಿಸಿ ಕರ್ನಾಟಕ ಉಳಿಸಿ ಎಂಬ ಘೋಷಣೆಯೊಂದಿಗೆ ಹೊರಟಿರುವ ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿ, ಆಶೀರ್ವದಿಸಿ ಎಂದು ಅವರು ಸಮಸ್ತ ಜನರಲ್ಲಿ ಮನವಿ ಮಾಡಿದ್ದಾರೆ.