- ಆಮ್ ಆದ್ಮಿ ಪಕ್ಷದ ಬೃಹತ್ ಸಮಾವೇಶಕ್ಕೆ ಜನವೋ ಜನ
- ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಅರವಿಂದ್ ಆಕ್ರೋಶ
NAMMUR EXPRESS NEWS
ದಾವಣಗೆರೆ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ದಾವಣಗೆರೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯದ ಆಮ್ ಆದ್ಮಿ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರಿಗೆ ಬಲ ತುಂಬಿದರು.
ದಾವಣಗೆರೆ ಸರ್ಕಾರಿ ಹೈಸ್ಕೂಲ್, ಮೈದಾನದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಟ್ಟದ ಬೃಹತ್ ಸಮಾವೇಶ ಉದ್ಘಾಟನೆ ಮಾಡಿ ಕನ್ನಡದಲ್ಲೇ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆ ಬಗ್ಗೆ ಕಿಡಿಕಾರಿದರು.
ದೆಹಲಿಯಲ್ಲಿ ಉಚಿತ ಉತ್ತಮ ಶಿಕ್ಷಣ, ಉಚಿತ ಅತ್ಯುತ್ತಮ ಚಿಕಿತ್ಸೆ, ಜೀರೋ ಕರೆಂಟ್ ಬಿಲ್, ವಿಶ್ವ ದರ್ಜೆಯ ಆಸ್ಪತ್ರೆಗಳು, ಜೀರೋ ವಾಟರ್ ಬಿಲ್, ಉಚಿತ ಬಸ್ ಪ್ರಯಾಣ, ಹೀಗೆ ನವದೆಹಲಿಯಲ್ಲಿ ಸಮಸ್ತ ವಾದ ಆಡಳಿತವನ್ನು ನೀಡಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ್ದೇವೆ. ಆದರೆ ಅತೀ ಹೆಚ್ಚು ಆದಾಯ ಇರುವ ಕರ್ನಾಟಕದಲ್ಲಿ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಪಂಜಾಬ್ ಮುಖ್ಯಮಂತ್ರಿಗಳಾದ ಭಗವಾನ್ ಮಾನ್, ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ನಾಯಕರು ಭಾಗಿಯಾಗಿದ್ದರು. ಸುಮಾರು 60 ಸಾವಿರ ಮಂದಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
ತೀರ್ಥಹಳ್ಳಿಯಿಂದ ಸಮಾವೇಶಕ್ಕೆ ಜನ!
ಸುಪ್ರೀಂ ಕೋರ್ಟ್ ನ್ಯಾಯವಾದಿಗಳು, ತೀರ್ಥಹಳ್ಳಿ ಅಭ್ಯರ್ಥಿಗಳೂ ಆದ ಸಾಲೂರು ಶಿವಕುಮಾರ್ ಗೌಡ ನೇತೃತ್ವದಲ್ಲಿ ತೀರ್ಥಹಳ್ಳಿ ಕ್ಷೇತ್ರದ 300ಕ್ಕೂ ಹೆಚ್ಚು ಮಂದಿ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ತೆರಳಿದ್ದರು.