- ಮಂಗಳೂರುನಲ್ಲಿ ದಾಖಲು: ಮತ್ತಷ್ಟು ಹೆಚ್ಚುತ್ತಿರುವ ಉಷ್ಣತೆ
- ಮಲೆನಾಡಲ್ಲೂ ಬಿಸಿಲು ಹೆಚ್ಚಳ: ಬತ್ತಿದ ನೀರಿನ ಸೆಲೆ
NAMMUR EXPRESS NEWS
ಮಂಗಳೂರು/ಶಿವಮೊಗ್ಗ: ದೇಶದಲ್ಲೇ ದಾಖಲೆಯ ಗರಿಷ್ಠ ತಾಪಮಾನ ಮಂಗಳೂರುನಲ್ಲಿ ದಾಖಲಾಗಿದ್ದು ಜನ ಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ. ಇನ್ನು ಮಲೆನಾಡಲ್ಲಿ ಕೂಡ ಬಿಸಿಲಿನ ಝಳ ಜನರನ್ನು ಕಂಗಾಲಾಗಿಸಿದೆ.
ಬಿಸಿಲ ದಗೆಗೆ ಕಾಡ್ಗಿಚ್ಚುಗಳು ಹೆಚ್ಚಾಗುತ್ತಿತ್ತು. ಇತ್ತ ತೀವ್ರವಾದ ತಾಪಮಾನದಿಂದಾಗಿ ಅನಾರೋಗ್ಯವೂ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಬೆಂಕಿ ಅವಘಡಗಳು ಕೂಡ ಹೆಚ್ಚಾಗಿವೆ.
ಮಾ, 2ರಂದು ದೇಶದಲ್ಲೇ ಗರಿಷ್ಠ ಎನಿಸಿಕೊಂಡ ಸರಿ ಸುಮಾರು 37 ಡಿ.ಸೆ ನಷ್ಟು ತಾಪಮಾನ ಮಂಗಳೂರುನಲ್ಲಿ ದಾಖಲಾಗಿದ್ದು. ಬುಧವಾರ 38.8 ಡಿ.ಸೆ ತಾಪಮಾನ ದಾಖಲಾಗಿದೆ.
2010 ರಿಂದ ಇಲ್ಲಿಯವರೆಗೆ ದಾಖಲೆಯಾದ ಉಷ್ಣತೆಯಲ್ಲಿ ಅತೀ ಹೆಚ್ಚು ಉಷ್ಣತೆ ಇದಾಗಿದೆ. ದೇಶದಲ್ಲೇ ಅತೀ ಹೆಚ್ಚು ತಾಪಮಾನ ಮಂಗಳೂರುನಲ್ಲಿ ದಾಖಲಾಗಿದೆ.
ಕರಾವಳಿ ಹಾಗೂ ಮಲೆನಾಡಲ್ಲಿ ಬಿಸಿಲ ಬೇಗೆ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇದ್ದು ಇನ್ನು ತಾಪಮಾನ 2 ರಿಂದ 3 ಡಿ.ಸೆ ನಷ್ಟು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏರುತ್ತಿರುವ ತಾಪಮಾನ ಮಕ್ಕಳ ಮೇಲೆ ಬಾರಿ ಪರಿಣಾಮ ಬಿರುತ್ತಿದ್ದು ಪ್ರತಿಯೊಬ್ಬರು ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆಯನ್ನು ಪಾಲಿಸಬೇಕಾಗಿದೆ. ಅನಾರೋಗ್ಯ ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆ ತೋರಿಸಬೇಕಿದೆ.
ಬತ್ತಿ ಹೋದ ನೀರಿನ ಸೆಲೆ!
ಮಲೆನಾಡಿನ ಹಳ್ಳ, ಕೊಳ್ಳಗಳು ಬಿಸಿಲಿನ ತಾಪ ಹೆಚ್ಚಾಗಿದ್ದು ಹಳ್ಳ ಕೊಳ್ಳಗಳು, ನದಿಗಳು, ನೀರಿನ ಸೆಲೆಗಳು ಸಂಪೂರ್ಣ ಬತ್ತಿ ಹೋಗಿವೆ. ಬೇಸಿಗೆ ಆರಂಭಕ್ಕೆ ಹೀಗಾದರೆ ಮುಂದೆ ಏನು ಎಂಬ ಆತಂಕ ಎದುರಾಗಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.