ಜ.25ಕ್ಕೆ ಅಯೋಧ್ಯೆ ರಾಮ ಮಂದಿರ ಓಪನ್!
– ಏನೇನಿದೆ… ಯಾವಾಗ ಕಾರ್ಯಕ್ರಮ…?
– ಜ.14ರ ಮಕರ ಸಂಕ್ರಾಂತಿಯಿಂದ 24ರವರೆಗೆ ಪ್ರಾಣ ಪ್ರತಿಷ್ಠೆ
NAMMUR EXPRESS NEWS
ಅಯೋಧ್ಯೆ: ಬಹು ನಿರೀಕ್ಷೆಯ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಮುಹೂರ್ಥ ಫಿಕ್ಸ್ ಆಗಿದೆ.
ಈಗಾಗಲೇ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಪ್ರಾಣಪ್ರತಿಷ್ಠೆ 2024ರ ಜ.14ರ ಮಕರ ಸಂಕ್ರಾಂತಿ ಯಿಂದ 24ರವರೆಗೆ ನಡೆಯಲಿದೆ. ಈಗಾಗಲೇ ರಾಮ ಮಂದಿರದ ಕೆಲಸ ಅಂತಿಮ ಹಂತಕ್ಕೆ ಬಂದಿದೆ.
ಕೊನೆಯ ದಿನ ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಪ್ರಾಣಪ್ರತಿಷ್ಠೆಯ ಬಳಿಕ ಜ. 25ರಿಂದ ಮಂದಿರ ತೆರೆದುಕೊಳ್ಳಲಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಈ ಮೂಲಕ ದೇಶದ ಕೋಟಿ ಕೋಟಿ ರಾಮ ಭಕ್ತರಿಗೆ ಇದು ಸಂತಸದ ವಿಷಯವಾಗಿದೆ. ದೇಶ-ವಿದೇಶಗಳ ಭಕ್ತರು ಅದನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರ ಪ್ರವೇಶಕ್ಕೆ ಜ.14ರಿಂದ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ನಾಲ್ಕು ಅಂತಸ್ತುಗಳ ದೇಗುಲ ಸಮುಚ್ಚಯ ಪೂರ್ಣಗೊಂಡ ಬಳಿಕ ಮೊದಲ ಅಂತಸ್ತನ್ನು ‘ರಾಮ ಕಥೆ’ ನಡೆಸಲು ಮೀಸಲಾಗಿ ಇರಿಸಲಾಗುತ್ತದೆ ಎಂದೂ ಮಿಶ್ರಾ ತಿಳಿಸಿದ್ದಾರೆ.