ಕುಂದಾದ್ರಿಯಲ್ಲಿ ವನ ಮಹೋತ್ಸವ!
– ಶ್ರೀ ಕ್ಷೇತ್ರ ಹುಂಬುಜ ಮಠದ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮ
– ಅರಣ್ಯ ಇಲಾಖೆ, ಗ್ರಾಮ ಪಂಚಾಯತ್ ಸಹಯೋಗ
NAMMUR EXPRESS NEWS
ತೀರ್ಥಹಳ್ಳಿ: ಸಸಿ ನೆಡುವ ಸಪ್ತಾಹ ಅಂಗವಾಗಿ ಕುಂದಾದ್ರಿಯಲ್ಲಿ ಗಿಡ ನೆಡಲಾಯಿತು.
ಮೇಗರವಳ್ಳಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹೊನ್ನೇತಾಳು ಗ್ರಾ.ಪಂ.ವ್ಯಾಪ್ತಿಯ ನಂಟೂರು ಗ್ರಾಮದ ಶ್ರೀ ಕ್ಷೇತ್ರ ಹುಂಬುಜ ಮಠದ ಜಾಗದಲ್ಲಿ ಮಠದ ಮುಖ್ಯ ಆಡಳಿತಾಧಿಕಾರಿ ಪ್ರಕಾಶ್ ಎನ್. ಮಗಧಮ್ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಮಧುಕರ್ ,ಮಠದ ಅಡ್ಮಿನಿಸ್ಟ್ರೇಶನ್ ಅಧಿಕಾರಿ ಸಿ.ಡಿ.ಅಶೋಕ ಕುಮಾರ್, ಕುಂದಾದ್ರಿ ಜೈನ ಬಸದಿ ಮೇಲ್ವಿಚಾರಕರಾದ ಡಾ. ಜೀವಂಧರ್ ಜೈನ್ , ಗ್ರಾಮಪಂಚಾಯ್ತಿ ಸದಸ್ಯ ರಾಘವೇಂದ್ರ ಕುಂದಾದ್ರಿ, ನಂಟೂರು ವಿಎಫ್ ಸಿ ಅಧ್ಯಕ್ಷ ಕಿರಣ್, ಫಾರೆಸ್ಟ್ ಆಫೀಸರ್ ರಾಜೇಂದ್ರ, ವನಪಾಲಕರಾದ ಪಾಂಡು, ಗ್ರಾಮಸ್ಥರಾದ ಶಾಂತಿನಾಥ ಜೈನ್, ಶಿವಪ್ಪಹೆಗ್ಡೆ ಪಾಲ್ಗೊಂಡಿದ್ದರು.
ಇದನ್ನೂ ಓದಿ : ತೀರ್ಥಹಳ್ಳಿ ಟಾಪ್ ಸುದ್ದಿಗಳು 04-07-2023
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023