Categories
ತೀರ್ಥಹಳ್ಳಿ

ತೀರ್ಥಹಳ್ಳಿ ಟಾಪ್ ಸುದ್ದಿಗಳು 04-07-2023

ತೀರ್ಥಹಳ್ಳಿ ಟಾಪ್ ಸುದ್ದಿಗಳು

ತೀರ್ಥಹಳ್ಳಿ – ಶಿವಮೊಗ್ಗ ರಸ್ತೆಯಲ್ಲಿ ಭೀಕರ ಅಪಘಾತಕ್ಕೆ ಓರ್ವ ಬಲಿ!
– ಬಸ್ ಮತ್ತು ಕಾರು ನಡುವೆ ಅಪಘಾತ
– ವಿಡಿಯೋ ವೈರಲ್: ಕುಡುಮಲ್ಲಿಗೆಯದಲ್ಲ!
– ಕೈಮರ ಬಳಿ ಕಾರು ನುಜ್ಜು ಗುಜ್ಜು!
– ಕುರುವಳ್ಳಿಯಲ್ಲಿ ಆಟೋ ಪಲ್ಟಿ: ಇಬ್ಬರಿಗೆ ಗಾಯ!

NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ 169A ತೀರ್ಥಹಳ್ಳಿ ಶಿವಮೊಗ್ಗ ಮಾರ್ಗ ಮಧ್ಯ ಗಾಜನೂರಿನ ಬಳಿ ಕಾರು ಮತ್ತು ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಮೂರು ಜನ ಪೈಕಿ ಓರ್ವ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದದ್ದಾರೆ. ಒಬ್ಬನಿಗೆ ಗಂಭೀರ ಗಾಯ ಆಗಿದೆ.
ಕಾರು ತೀರ್ಥಹಳ್ಳಿ ಕಡೆಗೆ ಬರುತ್ತಿತ್ತು ಎನ್ನಲಾಗಿದೆ.
ಇತ್ತೀಚಿಗೆ ಕಾರೊಂದು ಅತೀ ವೇಗವಾಗಿ ಮೂರು ಪಲ್ಟಿಯಾಗಿ ಸಹ್ಯಾದ್ರಿ ಬಸ್ಸಿಗೆ ಪಲ್ಟಿ ಹೊಡೆದು ಕೂದಲೆಳೆ ಅಂತರದಲ್ಲಿ ಪ್ರಾಣ ಅಪಾಯದಿಂದ ಪಾರಾಗಿದ್ದರು.

ಕೈಮರ ಬಳಿ ಕಾರು ಜಖಂ

ತೀರ್ಥಹಳ್ಳಿ ತಾಲೂಕು ಕೈಮರ ಬಳಿ ಕ್ರೇಟಾ ಕಾರೊಂದು ಅಪಘಾತಕ್ಕೆ ಒಳಗಾಗಿ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಕಾರಿನಲ್ಲಿದ್ದವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ

ವಿಡಿಯೋ ವೈರಲ್: ಕುಡುಮಲ್ಲಿಗೆಯದಲ್ಲ!

ತೀರ್ಥಹಳ್ಳಿ ಪಟ್ಟಣ ಮೂಲದ ಯುವಕನ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಂಪರ್ಕವಾದ ಓರ್ವ ಯುವತಿ ಜತೆ ನಕಲಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಕುಡುಮಲ್ಲಿಗೆ ಸಮೀಪದ ಕೆಸರೆ ಬಳಿ ಸೋಮವಾರ ಬೇರೆ ಪ್ರಕರಣದಲ್ಲಿ ಕಾರಿನಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗಿದ್ದ ಹೊರ ಊರಿನ ಜೋಡಿಗೆ ದಾರಿಯಲ್ಲಿ ಪಯಣ ಮಾಡುತ್ತಿದ್ದ ಇತರೆ ವಾಹನ ಸವಾರರು ತರಾಟೆಗೆ ತೆಗೆದುಕೊಂಡಿದ್ದು, ಯುವಕ ಯುವತಿ ತೀರ್ಥಹಳ್ಳಿ ಅಥವಾ ಕುಡುಮಲ್ಲಿಗೆಯವರಲ್ಲ. ಕುಡುಮಲ್ಲಿಗೆ ಸಮೀಪದ ಕೆಸರೆ ಬಳಿ ಕಾರಲ್ಲಿ ಈ ಘಟನೆ ನಡೆದಿದೆ. ಹೊರಗಿನವರು ಎಂದು ತಿಳಿದು ಬಂದಿದೆ.

ಆಟೋ-ಕಾರು ಅಪಘಾತ: ಇಬ್ಬರಿಗೆ ಗಾಯ

ತೀರ್ಥಹಳ್ಳಿ ಪಟ್ಟಣದ ಸಮೀಪದ ಮೇಲಿನಕುರುವಳ್ಳಿಯ ಸರ್ಕಲ್ ನಲ್ಲಿ ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಆಟೋ ಪಲ್ಟಿಯಾಗಿ ಇಬ್ಬರಿಗೆ ಗಾಯವಾಗಿದೆ. ಮೇಳಿಗೆ ಕಡೆಯಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಆಟೋ ಗೆ ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದ್ದು ಆಟೋ ಪಲ್ಟಿಯಾದ ಕಾರಣ ಗಾಜು ಪುಡಿ ಪುಡಿಯಾಗಿದೆ. ಆಟೋದಲ್ಲಿ ಇಬ್ಬರು ಮಹಿಳೆಯರು ಇದ್ದು ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ತೀರ್ಥಹಳ್ಳಿ ಪಟ್ಟಣದ ಸಮೀಪದ ಮೇಲಿನಕುರುವಳ್ಳಿ

ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.