ಅಡಿಕೆ, ಕಾಳು ಮೆಣಸಿಗೂ ಬೆಳೆ ವಿಮೆ!
– ಕೇಂದ್ರ ಕೃಷಿ ಇಲಾಖೆಯಿಂದ ಹೊಸ ಟೆಂಡರ್
– ಅಡಿಕೆ, ಕಾಳು ಮೆಣಸು ಬೆಳೆಗಾರರಿಗೆ ಚಿಂತೆ ಬೇಡ
– ಜ್ಞಾನೇಂದ್ರ, ರಾಘವೇಂದ್ರ ಸ್ಪಷ್ಟನೆ
NAMMUR EXPRESS NEWS
ಬೆಂಗಳೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಲಾಭ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೂ ದೊರೆಯಲಿದೆ.
ಈ ಯೋಜನೆಯ ಪ್ರೀಮಿಯಂ ಪಾವತಿಸಲು ಅಡಿಕೆ ಬೆಳೆಗಾರರಿಗೆ ಅವಕಾಶ ದೊರೆಯದೇ ಇರುವ ಕುರಿತು ವರದಿಯಾಗಿದೆ. ಈ ವಿಮಾ ಯೋಜನೆಯ ಉಸ್ತುವಾರಿಗಾಗಿ ವಿಮಾ ಕಂಪನಿಯೊಂದನ್ನು ನೇಮಿಸುವ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬಹುಶಃ ಹತ್ತರಿಂದ ಹದಿನೈದು ದಿನಗಳ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರಿಗೂ ಪ್ರೀಮಿಯಂ ಪಾವತಿಸಲು ಅವಕಾಶ ಲಭ್ಯವಾಗಲಿದೆ ಎಂದು ಶಿವಮೊಗ್ಗ ಸಂಸದ ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಕೃಷಿ ಇಲಾಖೆಯ ಕಾರ್ಯದರ್ಶಿ ಜೊತೆ ನಾನು ಮಾತನಾಡಿದ್ದು ಟೆಂಡರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ್ದಾರೆ. ಇನ್ನು 15 ದಿನ ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ರೈತರು ಯಾರೂ ಆತಂಕ ಪಡುವುದು ಬೇಡ. ಮುಂದೆ ವಿಮಾ ಕಂತು ಕಟ್ಟಲು ಸಮಯಾವಕಾಶ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.ಮೂರು ವರ್ಷಕ್ಕೊಮ್ಮೆ ಇಲಾಖೆಯಿಂದ ವಿಮಾ ಕಂಪನಿಯ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತದೆ. ಈ ವರ್ಷ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಅಡಿಕೆ ಮತ್ತು ಕಾಳುಮೆಣಸನ್ನು ಈ ಯೋಜನೆಯಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ.
ಬೆಳೆ ವಿಮೆ ಸಿಗುತ್ತೆ ಆತಂಕ ಬೇಡ: ಜ್ಞಾನೇಂದ್ರ
ಹವಮಾನ ಆಧಾರಿತ ಬೆಳೆವಿಮೆಯಲ್ಲಿ ಅಡಿಕೆ, ಕಾಳುಮೆಣಸು ಸೇರಿದೆ. ಇವುಗಳನ್ನು ವಿಮೆಯಿಂದ ಕೈಬಿಟ್ಟಿಲ್ಲ ಈ ಬಗ್ಗೆ ಅಡಿಕೆ ಬೆಳೆಗಾರರು ಆತಂಕ ಪಡುವುದು ಬೇಡ ಎಂದು ಅಡಿಕೆ ಕಾರ್ಯಪಡೆಯ ಮಾಜಿ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಮಾ ಕಂಪನಿಯ ಆಯ್ಕೆಗಾಗಿ ಟೆಂಡರ್ ಕರೆಯಲಾಗಿದ್ದು, ಟೆಂಡರಿಗೆ ಯಾರೂ ಬರ್ತಾ ಇಲ್ಲ. ಹೀಗಾಗಿ ವಿಳಂಬ ಆಗಿದೆ ಎಂದು ತಿಳಿಸಿದ್ದಾರೆ.
ಅಡಿಕೆ, ಕಾಳುಮೆಣಸಿಗೆ ಅಗತ್ಯವಾಗಿ ಬೆಳೆವಿಮೆ ಬೇಕೇಬೇಕು. ಈ ಬೆಳೆಗಳಿಗೆ ಅತಿವೃಷ್ಟಿ ಆದರೂ ತೊಂದರೆ, ಅನಾವೃಷ್ಟಿಯಾದರೂ ತೊಂದರೆ, ಹೀಗಾಗಿ ಈ ಹಿಂದೆಯೇ ಇದನ್ನು ವಿಮಾ ಯೋಜನೆಯಡಿ ತರಲಾಗಿದೆ. ಈಗ ಪ್ರೀಮಿಯಂ ಕಟ್ಟಲು ಅವಕಾಶ ನೀಡದೇ ಇರುವುದರಿಂದ ಆಗಸ್ಟ್ ಒಂದರ ವರೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಈ ಬಗ್ಗೆ ಅಡಿಕೆ ಬೆಳೆಗಾರರು ಆತಂಕ ಪಡೆದೇ, ಕೃಷಿ ಇಲಾಖೆಯು ನೀಡುವ ಪ್ರಕಟಣೆಗೆ ಕಾಯಬೇಕಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023