ಅಯ್ಯೋ ದೇವ್ರೇ..ಈ ವಾರವೂ ಮಳೆ!
– ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸಾಧ್ಯತೆ
– ಅಕ್ಟೋಬರ್ 8ರವರೆಗೂ ಗಾಳಿ ಜತೆಗೆ ಮಳೆ ಅಲರ್ಟ್
– ದಸರಾಕ್ಕೂ ಮಳೆ ಅಡ್ಡಿ: ಅಡಿಕೆ ಬೆಳೆಗೆ ಸಂಕಷ್ಟ
NAMMUR EXPRESS NEWS
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಇದರಿಂದಾಗಿ ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ ಸೇರಿ ಹಲವೆಡೆ ಮಳೆಯಾಗಲಿದೆ. ಈಗಾಗಲೇ ಕಳೆದ 6 ತಿಂಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ರೈತರು ಹೈರಾಣಾಗಿದ್ದಾರೆ. ಇದೀಗ ಮತ್ತೆ ಮೋಡ, ಮಳೆ ಜನ ಜೀವನಕ್ಕೆ ಭಾರೀ ತೊಂದರೆ ಆಗಿದೆ.
ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತ ಪ್ರಭಾವ ಕರ್ನಾಟಕದ ಮೇಲೂ ಆಗಲಿದ್ದು, ಅಕ್ಟೋಬರ್ 8ರವರೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.
ಯಲ್ಲಾಪುರದಲ್ಲಿ ಭಾರಿ ಮಳೆಯಾಗಿದೆ, ಹೊನ್ನಾವರ, ಆಗುಂಬೆ, ಅಂಕೋಲಾ, ಕ್ಯಾಸಲ್ರಾಕ್, ಗೇರುಸೊಪ್ಪ, ಮಂಕಿ, ಕದ್ರಾ, ಕಾರವಾರ, ಕೋಟಾ, ಕೊಟ್ಟಿಗೆಹಾರ, ಕುಮಟಾ, ಕುಂದಾಪುರ, ಲೋಂಡಾ, ಮಂಗಳೂರು, ಮುಂಡಗೋಡಿನಲ್ಲಿ ಮಳೆಯಾಗಿದೆ.
ಅಡಿಕೆ ಸೀಸನ್ ಆಗಿರುವುದರಿಂದ ಅಡಿಕೆ ಬೆಳೆ ಗಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬಾರಿ ದಸರಾಕ್ಕೂ ಮಳೆ ಹಲವೆಡೆ ಅಡ್ಡಿ ಮಾಡಿದೆ.







