ಟಾಪ್ 4 ನ್ಯೂಸ್: ತೀರ್ಥಹಳ್ಳಿ
ಬಾಳೆಬೈಲು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು…!
* ಆತ್ಮಹತ್ಯೆ ಸುತ್ತ ಅನುಮಾನ: ದಬ್ಬಣಗದ್ದೆ ಗ್ರಾಮದ ಯುವತಿ
– ತೂದೂರು ಇರೇಗೋಡು ಬಳಿ ಕಾಡು ಆನೆ ಪತ್ತೆ
– ನಂದೀಶ್ ಬಳಗಟ್ಟೆ ಅವರ ತಾಯಿ ಪದ್ಮಾವತಮ್ಮ ನಿಧನ
– ಅಡಿಕೆ ಯಂತ್ರಕ್ಕೆ ಸಿಲುಕಿ ಬಾಲಕಿ ಬೆರಳು ತುಂಡು
ತೀರ್ಥಹಳ್ಳಿ: ತೀರ್ಥಹಳ್ಳಿ ಬಾಳೆಬೈಲು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ದಬ್ಬಣ ಗದ್ದೆ ಸಮೀಪದ ಬಚ್ಚನಕೊಡಿಗೆ ರಮೇಶ್ ಆಚಾರ್ ಎಂಬುವರ ಪುತ್ರಿ ಪ್ರಾಪ್ತಿ (21) ಎಂಬ ಯುವತಿ ಬಾಳೆಬೈಲು ಕಾಲೇಜಿನಲ್ಲಿ ತೃತೀಯ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿ ಕ್ಷುಲ್ಲಕ ಕಾರಣಕ್ಕೆ ನವೆಂಬರ್ 14ರಂದು ಬೆಳಿಗ್ಗೆ 4:00 ಸಮಯದಲ್ಲಿ ಮನ ನೊಂದ ಪ್ರಾಪ್ತಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯಾ ಸುತ್ತ ಅನುಮಾನದ ಚಕ್ರ ಸುಳಿ ತಿರುಗುತ್ತಿದೆ. ವ್ಯಾಸಂಗದಲ್ಲಿ ಮುಂದಿದ್ದ ಪ್ರಾಪ್ತಿಯ ಸಾವಿನ ಸುದ್ದಿ ತಿಳಿದು ಕಾಲೇಜಿನಲ್ಲಿ ನೀರವ ಮೌನ ಆವರಿಸಿದೆ. ಈಕೆಗೆ ಓರ್ವ ಸಹೋದರಿ ಇದ್ದಾಳೆ.








