ನಾಡಗೀತೆಗೆ ನೂರರ ಸಂಭ್ರಮ: ನ.22ಕ್ಕೆ ಸಾಮೂಹಿಕ ಗಾಯನ!
– ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜನೆ
– ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಜನತೆ, ಸಾಹಿತ್ಯಾಭಿಮಾನಿಗಳೆಲ್ಲರಿಗೂ ಸ್ವಾಗತ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತೀರ್ಥಹಳ್ಳಿ ವತಿಯಿಂದ ನೂರರ ಸಂಭ್ರಮದಲ್ಲಿರುವ ನಾಡಗೀತೆಯ ಆಚರಣೆಗಾಗಿ ನ. 22ರ ಶನಿವಾರ ಕೊಪ್ಪ ಸರ್ಕಲ್ನಲ್ಲಿ ನಾಡಗೀತೆ ಹಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
22-11-2025 ರ ಶನಿವಾರ ಸಂಜೆ 4:30ಕ್ಕೆ ಸರಿಯಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತೀರ್ಥಹಳ್ಳಿ ಮತ್ತು ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಹಾಗೂ ಸಾಹಿತ್ಯಾಭಿಮಾನಿಗಳೆಲ್ಲರೂ ಸೇರಿ ರಾಷ್ಟ್ರಕವಿ ಕುವೆಂಪು ಅವರ ವಿರಚಿತ “ಜೈ ಭಾರತ ಜನನಿಯ ತನುಜಾತೆ” ನಾಡಗೀತೆಯ ನೂರು ವರ್ಷ ಸಂಭ್ರಮದ ಆಚರಣೆಗಾಗಿ ಈ ಹಾಡನ್ನು ಸಾಮೂಹಿಕವಾಗಿ ಕೊಪ್ಪ ಸರ್ಕಲ್ನ ಕುವೆಂಪು ಪ್ರತಿಮೆಯ ಮುಂಭಾಗದಲ್ಲಿ ಒಟ್ಟಾಗಿ ಹಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸರ್ವರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷರು, ಪದಾಧಿಕಾರಿಗಳು ತಾ.ಕ.ಸಾ.ಸಾಂ. ವೇದಿಕೆ ತೀರ್ಥಹಳ್ಳಿ ಇವರು ಕೋರಿದ್ದಾರೆ.
ಸೂಚನೆ: ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಆರಂಭವಾಗುವುದರಿಂದ ಎಲ್ಲರೂ ಐದು ನಿಮಿಷ ಮುಂಚಿತವಾಗಿ ಆಗಮಿಸಬೇಕಾಗಿ ಕೋರಿದೆ.








