ಬಿಹಾರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ!
* ಸ್ಪಷ್ಟ ಬಹುಮತದತ್ತ ಎನ್ಡಿಎ ಮೈತ್ರಿಕೂಟ,ಸಂಭ್ರಮಾಚರಣೆಗೆ ಬೇಡ ಎಂದ ಬಿಜೆಪಿ
* ಕುಸಿತದತ್ತ ಮಹಾಘಟಬಂಧನ್,ಕಾಂಗ್ರೆಸ್ಗೆ ಭಾರೀ ಹಿನ್ನಡೆ
NAMMMUR EXPRESS ELECTION BREAKING
ಬಿಹಾರ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಮತ ಎಣಿಕೆ ನಡೆಯುತ್ತಿದ್ದು,ಪ್ರಧಾನಿ ನರೇಂದ್ರ ಮೋದಿ ಅವರ ಸ್ಟ್ರೈಕ್ರೇಟ್ಗೆ ಎದುರಾಳಿಗಳು ಉಡೀಸ್ ಆಗಿದ್ದಾರೆ. ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದ 115 ಕ್ಷೇತ್ರಗಳ ಪೈಕಿ 85 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಹೌದು, 243 ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವು. ಈ ಪೈಕಿ 14 ರ್ಯಾಲಿ, 1 ರೋಡ್ ಶೋ ನಡೆಸಿದ್ದ ಮೋದಿ 115 ಕ್ಷೇತ್ರಗಳನ್ನ ಗುರಿಯಾಗಿಸಿ ಬಿರುಸಿನ ಪ್ರಚಾರ ನಡೆಸಿದ್ದರು. ಈ ಪೈಕಿ 85 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟಾರೆ 11:30 ₹ರ ಟ್ರೆಂಡ್ ವೇಳೆಗೆ ಎನ್ಡಿಎ 188+ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂಧನ್ 51, ಇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಒಟ್ಟಾರೆ ಸ್ಪಷ್ಟ ಬಹುದತ್ತ ಎನ್ಡಿಎ ಮೈತ್ರಿಕೂಟ ಹೆಜ್ಜೆ ಹಾಕುತ್ತಿದ್ದು,ಎದುರಾಳಿ ಮಹಾಘಟಬಂಧನ್ ಇತರರು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಎನ್ಡಿಎ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ.
ಬಿಹಾರ ಗದ್ದುಗೆ ಏರಲು 122 ಮ್ಯಾಜಿಕ್ ನಂಬರ್ ಬೇಕಾಗಿದೆ. ಸದ್ಯ ಎನ್ಡಿಎ ಮೈತ್ರಿಕೂಟ ಈ ಸಂಖ್ಯೆಯನ್ನು ತಲುಪುವುದು ಸ್ಪಷ್ಟವಾಗಿದ್ದು,ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ನಿತೀಶ್ ಕುಮಾರ್ ನೇತೃತ್ವದಲ್ಲಿ ಸರ್ಕಾರ ರಚಿಸೋದು ಪಕ್ಕಾ ಎಂಬಂತಾಗಿದೆ.
* ಸಂಭ್ರಮಾಚರಣೆ ನಡೆಸದಿರಲು ಬಿಜೆಪಿ ನಿರ್ಧಾರ
ಸ್ಪಷ್ಟ ಬಹುಮತದತ್ತ ಹೆಜ್ಜೆ ಹಾಕುತ್ತಿರು ಎನ್ಡಿಎ ಮೈತ್ರಿಕೂಟಕ್ಕೆ ಬಹುತೇಕ ಚುಕ್ಕಾಣಿ ಖಚಿತವಾಗಿದ್ದು,ಎಲ್ಲರಲ್ಲೂ ಸಂಭ್ರಮ ಮನೆಮಾಡಿದೆ. ಆದರೆ ದೇಶವು ದೆಹಲಿ ಸ್ಪೋಟದ ಶೋಕದಲ್ಲಿರುವ ಕಾರಣ ತನ್ನ ಗೆಲುವಿನ ಸಂಭ್ರಮಾಚರಣೆ ನಡೆಸದಿರಲು ಬಿಜೆಪಿ ನಿರ್ಧರಿಸಿದೆ.








