ವಿಚಿತ್ರ ರೋಗ ತೆಂಗಿನ ಮರಕ್ಕೆ
– ಸಾವಿರಾರು ತೆಂಗಿನ ಮರಗಳು ಬಲಿ
– ಪರಿಹಾರಕ್ಕೆ ರೈತರ ಆಗ್ರಹ
NAMMUR EXPRESS NEWS
ತೆಂಗಿನ ಮರಕ್ಕೆ ತಗುಲಿದ ವಿಚಿತ್ರ ರೋಗದಿಂದ ತೆಂಗಿನ ಗರಿಗಳು ಸುಳಿ ತನಕ ಕೆಂಪಾಗಿ ಕರಟಿ ಹೋಗಿದೆ. 5 ರಿಂದ 6 ಸಾವಿರಕ್ಕೂ ಅಧಿಕ ತೆಂಗಿನ ಮರಗಳು ರೋಗ ಬಾಧೆಯಿಂದ ತತ್ತರಿಸಿದ್ದು ರೈತರು ಆತಂಕಿತರಾಗಿದ್ದಾರೆ. ತೆಂಗಿನ ಮರಕ್ಕೆ ಅಂಟಿಕೊಂಡಿದ್ದ ರೋಗ ಬಾಧೆಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ. ಹಸಿರಿನಿಂದ ಕಂಗೊಳಿಸುತ್ತಿದ್ದ ತೆಂಗಿನ ಮರದ ಗರಿಗಳು ಇದ್ದಕ್ಕಿದಂತೆ ಸುಳಿ ತನಕ ಕೆಂಪಾಗಿ ಕರಟಿ ಒಣಗಿ ಜೋತು ಬೀಳುತ್ತಿದೆ. ತೆಂಗಿನ ಮರದಲ್ಲಿ ಹಸಿರಿನ ಅಂಶವೆ ಮಾಯವಾಗಿದೆ. ಹೊಸ ಗರಿಗಳು ಬಿಡುತ್ತಿಲ್ಲ, ಕೊನೆಗಳು ಕಣ್ಮರೆಯಾಗಿದೆ. ತೆಂಗಿನ ಮರಕ್ಕೆ ತಗುಲಿದ ರೋಗ ಬಾಧೆಯಿಂದ ರೈತರು ಹತಾಶರಾಗಿದ್ದು, ಏನು ಮಾಡದಂತಹ ಪರಿಸ್ಥಿತಿಯಲ್ಲಿಇದ್ದಾರೆ. ಸಂಕಷ್ಟದಲ್ಲಿದ್ದ ರೈತರಿಗೆ ಪರಿಹಾರ ನೀಡಬೇಕ್ಕೆನ್ನುವುದು ತೆಂಗು ಬೆಳೆಗಾರರ ಆಗ್ರಹ.
ರೈತರಿಗೆ ತೆಂಗಿನ ಬೆಳೆ ಜೀವನಾಧಾರ. ಗದ್ದೆಗಳು ನೀರಿನಲ್ಲಿ ಮುಳುಗಿ ಏಳುತ್ತಿದ್ದರಿಂದ ಭತ್ತದ ಕೃಷಿಯನ್ನು ಕೈ ಬಿಟ್ಟಿದ್ದ ಅಲ್ಲಿನ ಜನರು ತೆಂಗಿನ ಬೆಳೆಯನ್ನು ಪ್ರಮುಖ ಬೆಳೆಯನ್ನಾಗಿ ನೆಚ್ಚಿಕೊಂಡಿದ್ದಾರೆ. ಸರಿ ಸುಮಾರು ಒಬ್ಬ ರೈತ ಕಾಯಿ ಕೊಯ್ಲು ಸಮಯದಲ್ಲಿ 2 ರಿಂದ 1,500 ತನಕ ಕಾಯಿಯನ್ನು ಕೊಯ್ಲುಮಾಡುತ್ತಿದ್ದರು. ತೆಂಗಿನ ಮರಗಳು ರೋಗಕ್ಕೆ ತುತ್ತಾಗಿದ್ದರಿಂದ 100 ಕಾಯಿ ಸಿಗುವುದು ಕಷ್ಟ ಎಂದು ರೈತರು ತಮ್ಮ ಅಳನ್ನು ತೊಡಿಕೊಂಡಿದ್ದಾರೆ. ಇದೊಂದು ಗಂಭೀರ ಸ್ವರೂಪದ ಪ್ರಕರಣದಂತೆ ಕಂಡು ಬರುತ್ತಿದೆ.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ.ಸಮಸ್ಯೆ ಕಾರಣವನ್ನು ಗುರುತಿಸಲಾಗುವುದು.ರೈತರ ಜತೆ ಮಾತುಕತೆ ಮಾಡಿ,ಸೂಕ್ತ ಕ್ರಮ ಕೈಗೊಳ್ಳಲಾಗುವುದು.







