- ಸಿ ಎಂ ಬಸವರಾಜ ಬೊಮ್ಮಾಯಿ ಹೇಳಿಕೆ
- ರೈತರ ಸಾಲಕ್ಕಿಲ್ಲ ಜಪ್ತಿ, ಹರಾಜು
NAMMUR EXPRESS NEWS
ಬೆಂಗಳೂರು : ರೈತರ ಸಾಲದ ಮೇಲೆ ಜಪ್ತಿ, ಹರಾಜು ಮಾಡದ ರೀತಿಯಲ್ಲಿ ಕಾನೂನನ್ನು ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೃಷಿ ಮೇಳದ ಅಂಗವಾಗಿ ಶನಿವಾರ ಜಿಕೆವಿಕೆ ಆವರಣದಲ್ಲಿ 125 ಸಾಧಕ ಕೃಷಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ರೈತರ ಸಾಲ ಮರುಪಾವತಿಯಾಗದಿದ್ದಾಗ ಸಮಯಾವಕಾಶ ಕೊಟ್ಟು ಸಹಾಯ ಮಾಡಬೇಕೆ ಹೊರತು ಯಾವುದೇ ಜಪ್ತಿ ಅಥವಾ ಹರಾಜು ಮಾಡಬಾರದೆಂದು ಸರ್ಕಾರ ಹಾಗೂ ಇತರ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಇಲಾಖೆಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ ಎಂದರು. ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಜಾರಿಯಾಗಿದೆ. ನ.1 ಇದರಿಂದ ಈಗಾಗಲೇ ಯಶಸ್ವಿನಿ ಯೋಜನೆ ಮರು ಜಾರಿಗೆ ತರಲಾಗಿದೆ. ದುಡಿಯುವ ವರ್ಗಕ್ಕೆ ಬಲ ತುಂಬಲಾಗುತ್ತಿದ್ದೇವೆ. ಕೃಷಿ ಮೇಲೆ ಅವಲಂಬಿತರಾಗಿರುವ ಶೇ.60 ಎಷ್ಟು ಜನರು ಅಭಿವೃದ್ಧಿ ಹೊಂದರೆ, ದೇಶವು ಅಭಿವೃದ್ಧಿಯಾಗುತ್ತದೆ. ಜನವರಿ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ನಡೆಸಲಾಗುವುದು ಎಂದರು.