- 4 ದಿನದ ಕೃಷಿ ಮೇಳ: ಸಾವಿರಾರು ಜನರ ಭೇಟಿ
- ಮಿನಿ ಟ್ರ್ಯಾಕ್ಟರ್ ವಿಭಾಗದಲ್ಲಿ ಕ್ಯಾಪ್ಟನ್ ಟ್ರ್ಯಾಕ್ಟರ್ ಬಗ್ಗೆ ಜನರ ಸ್ಪಂದನೆ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ನವುಲೆ ಕೃಷಿ ವಿವಿ ಯಲ್ಲಿ ನಡೆದ 4 ದಿನಗಳ ಕೃಷಿ ಹಾಗೂ ತೋಟಗಾರಿಕೆ ಮೇಳದಲ್ಲಿ ಪ್ರತಿ ದಿನ ಸಾವಿರಾರು ಮಂದಿ ಭೇಟಿ ನೀಡಿ ಕೃಷಿ ಮತ್ತು ತೋಟಗಾರಿಕೆ ಮಾಹಿತಿ ಪಡೆದರು. ಕೃಷಿ ಮೇಳದಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದರು.
300ಕ್ಕೂ ಹೆಚ್ಚು ಮಂದಿ ಕೃಷಿ ಉತ್ಪನ್ನ ಉತ್ಪಾದಕರು, ಸ್ಟಾಲ್ ಮಾರಾಟಗಾರರು, ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರ ಮಾರಾಟಗಾರರು ಭಾಗಿಯಾದರು.
ವಿವಿಧ ಹಸು, ಶ್ವಾನ ತಳಿಗಳು, ಅಡಿಕೆ ಮಿಷನ್, ವಿವಿಧ ಯಂತ್ರಗಳು, ಸಾವಯವ ಕೃಷಿ ಗಮನ ಸೆಳೆಯಿತು.
ಕೃಷಿ ಮೇಳದಲ್ಲೂ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಹವಾ
ರಾಜ್ಯದಲ್ಲಿ ಬಹು ಬೇಡಿಕೆ ಸೃಷ್ಟಿ ಮಾಡುತ್ತಿರುವ ಮಿಶ್ಚಿಬ್ಯುಷಿ ಇಂಜಿನ್ನಿನ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಕೃಷಿಕರ ಗಮನ ಸೆಳೆಯಿತು. ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್ ಅಲ್ಲಿರುವ ಕ್ಯಾಪ್ಶನ್ ಮಿನಿ ಟ್ರ್ಯಾಕ್ಟರ್ ಶೋ ರೂಂವತಿಯಿಂದ ಕೃಷಿ ಮೇಳದಲ್ಲಿ ರೈತರಿಗೆ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಬಗ್ಗೆ ಮಾಹಿತಿ ನೀಡಿದ್ದು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ರೈತರು ಅತ್ಯುತ್ತಮ ಹಾಗೂ ಹೈಟೆಕ್ ತಂತ್ರಜ್ಞಾನ ಹೊಂದಿರುವ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಖರೀದಿಗೆ ಉತ್ಸುಕತೆ ತೋರಿದರು. ಈ ವೇಳೆ ಅಚ್ಚೂರ್ ಆಗ್ರೋ ಸೇಲ್ಸ್ ಅಂಡ್ ಸರ್ವಿಸ್ ಮಾಲೀಕ ರಂಜನ್ ಹೆಗ್ಡೆ, ಶಿವಮೊಗ್ಗ ಶೋ ರೂಂ ಮ್ಯಾನೇಜರ್ ಕುಮಾರ್ ಇದ್ದರು.