Author: Nammur Express Admin
ತೀರ್ಥಹಳ್ಳಿ ಪಟ್ಟಣದಲ್ಲಿ ಗಣೇಶ ಸಂಭ್ರಮ! – ದೇಗುಲಗಳಲ್ಲಿ ವಿಶೇಷ ಪೂಜೆ: ಗಣಪತಿಗೆ ಜೈ ಜೈ – ತೀರ್ಥಹಳ್ಳಿ ತಾಲೂಕಲ್ಲಿ 229 ಕಡೆ ಗಣೇಶ ಪ್ರತಿಷ್ಠಾಪನೆ – 64 ಕಡೆ ಒಂದೇ ವಿಸರ್ಜನೆ: ಎಲ್ಲೆಡೆ ಖುಷಿಯೋ ಖುಷಿ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸೇರಿ ತಾಲೂಕಿನಲ್ಲಿ ಸಂಭ್ರಮದಿಂದ ಗಣೇಶ ಹಬ್ಬ ಆಚರಣೆ ಮಾಡಲಾಯಿತು. ಎಲ್ಲೆಡೆ ಗಣೇಶನ ಕೂರಿಸಿ ಹಬ್ಬ ಆಚರಣೆ ಮಾಡಲಾಯಿತು. ಮನೆ ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಲಾಗಿದ್ದು, ಇಡೀ ದಿನ ಗಣೇಶನ ಪೂಜೆ ಮಾಡಲಾಯಿತು. ಗಣೇಶ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ತೀರ್ಥಹಳ್ಳಿ ತಾಲೂಕಲ್ಲಿ 229 ಕಡೆ ಗಣೇಶ ಪ್ರತಿಷ್ಠಾಪನೆ ಮಾಡಿದ್ದು, 64 ಕಡೆ ಇಂದು ವಿಸರ್ಜನೆ ನಡೆಯಲಿದೆ. 3ನೇ ದಿನ 123 ಗಣಪತಿ ವಿಸರ್ಜನೆ ನಡೆಯಲಿದೆ.
ಗಣಪತಿ ಮೂರ್ತಿ ತರಲು ಹೋದ ಇಬ್ಬರು ಸ್ಥಳದಲ್ಲೇ ಸಾವು! * ಇನ್ನಿತರ ಮೂರು ಜನ ಯುವಕರಿಗೂ ಗಂಭೀರ ಗಾಯ * 9 ಜನ ಯುವಕರಿದ್ದ ಟಾಟಾ ಏಸ್ ವಾಹನ ಪಲ್ಟಿ NAMMUR EXPRESS NEWS ಶಿವಮೊಗ್ಗ:ಗಣಪತಿ ಮೂರ್ತಿಯನ್ನು ತರಲು ವಾಹನದಲ್ಲಿ ಹೋಗುತ್ತಿದ್ದ ವೇಳೆ ವಾಹನ ಪಲ್ಟಿ ಹೊಡೆದಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಯುವಕರು ಶಿವಮೊಗ್ಗ ಮೆಗ್ಗಾನ್ ಗೆ ದಾಖಲಾಗಿರುವ ಘಟನೆ ಸೆ. 07ರಂದು ಬೆಳಿಗ್ಗೆ ವರದಿಯಾಗಿದೆ. ಗಣಪತಿ ತರಲು ಹೋಗುತ್ತಿದ್ದಾಗ ಟಾಟಾ ಏಸ್ ವಾಹನ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ. ಮೃತರನ್ನ 20 ವರ್ಷದ ಧನುಷ್ ಹಾಗೂ ಶ್ರೀಧರ್ ಎಂದು ಗುರುತಿಸಲಾಗಿದೆ. ಲಿಂಗದಹಳ್ಳಿ ಪಟ್ಟಣದ 9 ಜನ ಯುವಕರು ಬೆಳಗ್ಗೆ ಏಳು ಗಂಟೆಗೆ ಗಣಪತಿ ತರಲೆಂದು 15 ಕಿ.ಮೀ. ದೂರದ ತರೀಕೆರೆ ಪಟ್ಟಣಕ್ಕೆ ಟಾಟಾ ಏಸ್ ಲಾಗೇಜ್ ಆಟೋದಲ್ಲಿ ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ…
ಮನೆ ಮನೆ, ಹಳ್ಳಿ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ! – ಗಣಪತಿ ಕೂರಿಸಿ ವಿಶೇಷ ಪೂಜೆ: ಮನೆಗಳಲ್ಲಿ ಆಚರಣೆ – ಕರಾವಳಿಯಲ್ಲಿ ಹುಲಿ ವೇಷದ ಸೊಬಗು – ದೇಶದ ಮೂಲೆ ಮೂಲೆಯಲ್ಲಿ ಗಣಪತಿಗೆ ಜೈ NAMMUR EXPRESS ಗಣಪತಿ ಹಬ್ಬ ಎಂದರೆ ಪ್ರತಿಯೊಬ್ಬರಿಗೂ ಸಂಭ್ರಮ ಸಡಗರ. ಹಬ್ಬಕೆಂದೇ ಹೊಸ ಬಟ್ಟೆ ತೆಗೆದುಕೊಡುವ ತಾಯಿ ತಂದೆ. ನಾನಾ ತರದ ಅಡುಗೆ ತಯಾರಿ, ನೆಂಟರ ಹಾವಳಿ ಎಲ್ಲಾ ಜೋರೋ ಜೋರು.ಗಣೇಶನ ಹಬ್ಬಕ್ಕೆ ಕಡುಬು, ಮೋದಕ, ಲಡ್ಡು ಸ್ಪೆಷಲ್, ಮಕ್ಕಳಿಗಂತೂ ಗಣೇಶ ಹಬ್ಬ ಮದುವೆ ಮನೆಯ ಸಂಭ್ರಮವನ್ನು ನೀಡುತ್ತದೆ. ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲೂ ಗಣೇಶನನ್ನು ಕೂರಿಸಿ ಅಲಂಕಾರ ಮಾಡಿ ಪೂಜೆ ಮಾಡುಹುದು ಕ್ರಮ ಆದರೆ ಎಲ್ಲೆಡೆ ಇಂತಿಷ್ಟೇ ದಿನ ಗಣಪತಿನ ಕೂರಿಸಬೇಕು ಎಂಬ ಕಡ್ಡಾಯವೇನಿಲ್ಲ ಮೊದಲ ವರ್ಷ ಯಾವ ರೀತಿ ನಿಯಮ ಪಾಲನೆ ಆಚರಿಸುತ್ತಿದ್ದಾರೋ ಅದನ್ನೇ ಮುಂದುವರಿಸುವ ಪದ್ಧತಿ ಅಷ್ಟೇ… ಕೆಲವೊಂದು ಕಡೆ ಮೂರು ದಿನ ಇನ್ನೂ ಮಲೆನಾಡು ಶಿವಮೊಗ್ಗ ಭಾಗಗಳಲ್ಲಿ ,9,15, ಒಂದು ಿಂಗಳವರೆಗೆ ಗಣಪತಿ…
ಗಣೇಶ ಹಬ್ಬಕ್ಕೆ ಗಾಳಿ ಸಹಿತ ಮಳೆಯ ಕಾಟ?! * ಗಾಳಿಯೊಂದಿಗೆ ಮಳೆ ಅಬ್ಬರ ಸಾಧ್ಯತೆ * ಸೆ.8ರಿಂದ ಭಾರಿ ಮಳೆ ಎಚ್ಚರಿಕೆ! NAMMUR EXPRESS NEWS ಬೆಂಗಳೂರು: ರಾಜ್ಯಾದ್ಯಂತ ನೈರುತ್ಯ ಮುಂಗಾರು ಮತ್ತೆ ಸಕ್ರಿಯಗೊಂಡಿದೆ. ಸೆ. 07ರಂದು ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. * ಗಾಳಿಯೊಂದಿಗೆ ಮಳೆ ಅಬ್ಬರ!! ಬೆಳಗಾವಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯೊಂದಿಗೆ ನಿರಂತರ ಗಾಳಿಯ ವೇಗ 40-50 ಕಿ.ಮೀ ತಲುಪುವ ಸಾಧ್ಯತೆಯಿದೆ. ಒಳನಾಡಿನ ಅನೇಕ ಸ್ಥಳಗಳಲ್ಲಿ ಲಘುವಾಗಿ ಮಧ್ಯಮ ಮಳೆಯೊಂದಿಗೆ ನಿರಂತರ ಗಾಳಿಯ ವೇಗ 40-50 ಕಿ.ಮೀ ತಲುಪುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆ!! ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಹಗುರದಿಂದ ಸಧಾರಣ ಮಳೆಯಾಗುವ ಸಾಧ್ಯತೆ ದೆ.…
ತೀರ್ಥಹಳ್ಳಿ ಗ್ಯಾರಂಟಿ ಯೋಜನೆ ಕಚೇರಿ ಉದ್ಘಾಟನೆ! – ಶಚ್ಚಿಂದ್ರ ಹೆಗ್ಡೆ ಅಧ್ಯಕ್ಷತೆಯಲ್ಲಿ 14 ಮಂದಿ ಸದಸ್ಯರ ಪದಗ್ರಹಣ – ಹೊಗಳುತ್ತಲೇ ಮಾತಿನಿಂದ ಗ್ಯಾರಂಟಿ ಟೀಕಿಸಿದ ಜ್ಞಾನೇಂದ್ರ – ಗ್ಯಾರಂಟಿ ಬಡವರ ಬದುಕು ಎಂದ ಕಿಮ್ಮನೆ, ಮಂಜುನಾಥ ಗೌಡ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಗ್ರಾಮೀಣಾಭಿವೃದ್ಧಿ ಸೌಧದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲೂಕು ಮೇಲ್ವಿಚಾರಣಾ ಸಮಿತಿಯ ಕಚೇರಿ ಶುಕ್ರವಾರ ಉದ್ಘಾಟನೆಗೊಂಡಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಳಿಗೆ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವ ದೃಷ್ಟಿಯಿಂದ ಸಮಿತಿ ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ ನೇತೃತ್ವದಲ್ಲಿ 14 ಮಂದಿ ಸಮಿತಿ ರಚನೆ ಮಾಡಿದ್ದು, ಶುಕ್ರವಾರ ಈ ಕಚೇರಿ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ ನಡೆಯಿತು. 14 ಮಂದಿ ಸದಸ್ಯರ ಪದಗ್ರಹಣ ತೀರ್ಥಹಳ್ಳಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಶಚ್ಚಿಂದ್ರ ಹೆಗ್ಡೆ ಎನ್.ಜಿ, ಸದಸ್ಯರಾದ ಶಶಿಧರ್ ಈ.ಬಿ ಈಚಲಬೈಲು, ಪ್ರದೀಪ್ ಕೆ.,ವಿಕ್ರಮ್ ಕೆ.ಎಸ್ ಕಬಸೆ, ಹರೀಶ್ ಟಿ.ಎನ್ ಮಿಲ್ಕೆರಿ, ಅಶ್ವಲ್ ಹೆಚ್.ಆರ್, ಆದರ್ಶ…
ಕುಪ್ಪಳಿ ಕವಿ ಮನೆ ಮುಂದೆ ವಿಶ್ವಮಾನವ ಸಂದೇಶ ಫಲಕ! – ವಿಶ್ವಮಾನವ ಸಂದೇಶವುಳ್ಳ ವಿಶೇಷ ಫಲಕದ ವಿಶೇಷ – ಕುಪ್ಪಳಿಯ ಕವಿಮನೆಗೆ ವಾರ್ಷಿಕ 2 ಲಕ್ಷಕ್ಕೂ ಅಧಿಕ ಪ್ರವಾಸಿಗರ ಭೇಟಿ NAMMUR EXPRESS NEWS ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಅವರ ಮನೆ ಕುಪ್ಪಳಿಯ ಕವಿಮನೆ ಆವರಣದಲ್ಲಿ ವಿಶ್ವಮಾನವ ಸಂದೇಶ ಫಲಕ ಅನಾವರಣಗೊಳಿಸಲಾಗಿದೆ. ಕುವೆಂಪು ಅವರ ಮನೆ ಎದುರು ಹುಲ್ಲು ಹಾಸಿನ ಪಕ್ಕ ಈ ಫಲಕ ಅನಾವರಣ ಮಾಡಿದ್ದು ಪ್ರವಾಸಿಗರಿಗೆ ಇದೊಂದು ವಿಶೇಷ ಆಕರ್ಷಣೆ ಆಗಿದೆ. ವಿಶ್ವಮಾನವ ಸಂದೇಶವುಳ್ಳ ವಿಶೇಷ ಫಲಕ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ನಿವಾಸದ ಆವರಣದಲ್ಲಿ ವಿಶ್ವಮಾನವ ಸಂದೇಶವುಳ್ಳ 36 ಅಡಿ ಅಗಲ, 18 ಅಡಿ ಎತ್ತರದ ಫಲಕ ಇದಾಗಿದೆ. ಈ ಫಲಕವನ್ನು ಗ್ರಾನೈಟ್‌ನಲ್ಲಿ ಕೆತ್ತಲಾಗಿದೆ. ಕವಿ ಕುವೆಂಪು ಪರಿಚಯ, ಸಪ್ತಸೂತ್ರ, ಪಂಚಮಂತ್ರ, ವಿಶ್ವಮಾನವ ಗೀತೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. 9 ಅಡಿ ಎತ್ತರ 4 ಅಡಿ ಅಗಲವಿರುವ ಕುವೆಂಪು ಅವರ ಕಂಚಿನ…
ಗಣೇಶ ಮತ್ತೆ ಬಂದ.. ಏನಿದು ಹಬ್ಬದ ವಿಶೇಷ?! – ಆಚರಣೆ ಹೇಗೆ..? ಎಲ್ಲರಿಗೂ ಹಬ್ಬದ ಶುಭಾಶಯಗಳು NAMMUR EXPRESS NEWS ಭಗವಂತ ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಅಂದರೆ, ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುವವನು. ಮಹಾಭಾರತವನ್ನು ಬರೆಯುವಾಗ ವ್ಯಾಸರು ಉತ್ತಮ ಲಿಪಿಕಾರನನ್ನು ಅರಸುವ ಸಂದರ್ಭ ಸಿಕ್ಕಿದ್ದು ಈ ಗಜಮುಖನೆ. ಈ ಮೂಲಕ ಗಣೇಶನ ಬುದ್ಧಿವಂತಿಕೆಯನ್ನು ಗಮನಿಸಬಹುದಾಗಿದೆ. ಗಣೇಶ ಚತುರ್ಥಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ವಿಘ್ನಹರ್ತಾ, ಬುದ್ಧಿಯ ದೇವರು ಎಂದು ಪೂಜಿಸಲ್ಪಡುವ ಗಣಪತಿಯ ಜನ್ಮದಿನವನ್ನು ಆಚರಿಸುತ್ತದೆ. ಈ ಹಬ್ಬವು ಭಾರತದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲ್ಪಡುತ್ತದೆ ಮತ್ತು ಇದಕ್ಕೆ ಹಲವಾರು ಮಹತ್ವಗಳಿವೆ. * ಅವುಗಳನ್ನು ಒಂದೊಂದಾಗಿ ಗಮನಿಸುವುದಾದರೆ! ವಿಘ್ನ ನಿವಾರಣೆ: ಗಣೇಶನನ್ನು ವಿಘ್ನವಿನಾಶಕ ಎಂದು ಪೂಜಿಸಲಾಗುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಗಣಪತಿಯನ್ನು ಪೂಜಿಸುವುದರಿಂದ ಎ್ಲಾ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಗಣೇಶನ ಮೂರ್ತಿ ಪ್ರತಿಷ್ಠಾಪನೆ: ಈ ದಿನ ಮನೆ ಅಥವಾ ಪೂಜಾ…
ಶೃಂಗೇರಿಯ ಖ್ಯಾತ ವೈದ್ಯ ಡಾ.ಉರಾಳ್‌ಗೆ ಆಯುಷ್ ಎಕ್ಸಲೆನ್ಸ್ ಅವಾರ್ಡ್ – ವೆರಿಕೋಸ್ ಸಮಸ್ಯೆಗೆ ತಮ್ಮದೇ ಆಯುರ್ವೇದ ಚಿಕಿತ್ಸೆ ನೀಡುವ ಮೂಲಕ ಅನೇಕ ವರ್ಷದಿಂದ ಸೇವೆ – ರಾಜ್ಯದ ಪ್ರಸಿದ್ಧ ವೈದ್ಯರಲ್ಲಿ ಇವರು ಒಬ್ಬರು NAMMUR EXPRESS NEWS ಶೃಂಗೇರಿ: ವೆರಿಕೋಸ್ ಖಾಯಿಲೆಗೆ ತಮ್ಮದೇ ಆಯುರ್ವೇದ ಚಿಕಿತ್ಸೆ ಮೂಲಕ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ಅನೇಕ ವರ್ಷದಿಂದ ಖಾಯಿಲೆ ಗುಣ ಮಾಡುವ ಶೃಂಗೇರಿಯ ಖ್ಯಾತ ವೆರಿಕೋಸ್ ತಜ್ಞ ಡಾ.ಎಂ.ವಿ ಉರಾಳ್‌ರವರಿಗೆ ಕರ್ನಾಟಕ ಹೇಲ್ತ್ ಕೇರ್ ಆಯುಷ್ ಎಕ್ಸಲೆನ್ಸ್ ಅವಾರ್ಡ್ ನೀಡಿದೆ. ಮೂಲತಃ ಉಡುಪಿಯ ಕೋಟಾದ ಮಣೂರಿನವರಾದ ಇವರು ತಮ್ಮ ಆಯುರ್ವೇದ ಅಧ್ಯಯನದ ನಂತರ ಶೃಂಗೇರಿಯಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿ ವಿವಿಧ ದೀರ್ಘಕಾಲದ ಖಾಯಿಲೆಗೆ ಸರಳ ಗಿಡಮೂಲಿಕೆಗಳ ಮೂಲಕ ಔಷಧಿ ನೀಡುತ್ತಾ ಬಂದಿದ್ದಾರೆ. ವೆರಿಕೋಸ್ ಸಮಸ್ಯೆಗೆ ಸೂಕ್ತ ಔಷಧಿ ಇಲ್ಲದಿರುವುದನ್ನು ಮನಗಂಡ ಇವರು ತಮ್ಮದೇ ಪರಿಕಲ್ಪನೆ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಮತ್ತು ಸತತ ಐದು ವರ್ಷಗಳ ಕಾಲ ಕ್ಲಿನಿಕಲ್ ಸಂಯೋಜನೆಯೊಂದಿಗೆ ಸಮಸ್ಯೆಗೆ ಶಸ್ತ್ರ…