ಕರಾವಳಿ ಟಾಪ್ ನ್ಯೂಸ್ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ..! – ಉಪ್ಪಿನಂಗಡಿ ಬಳಿ ನದಿಯಲ್ಲಿ ಮೊಸಳೆಗಳು ಪತ್ತೆ – ಗೆಳತಿ ಮನೆಗೆ ಹೋದವನ ದರೋಡೆ: ಓರ್ವ ಅರೆಸ್ಟ್ – ಕಾರ್ಕಳ: ಧರ್ಮ ಅವಹೇಳನಕಾರಿ ಬ್ಯಾನರ್: ಇಬ್ಬರ ಬಂಧನ NAMMUR EXPRESS NEWS ಉಪ್ಪಿನಂಗಡಿ: ಹೊಸ ಬಸ್ ನಿಲ್ದಾಣದ ಬಳಿಯ ನೇತ್ರಾವತಿ ನದಿ ಸೇತುವೆಯ ಬದಿ ಸೆ.3ರಂದು ಮೊಸಳೆ ಪತ್ತೆಯಾಗಿದ್ದು, ಜನತೆಯ ಆತಂಕಕ್ಕೆ ಕಾರಣವಾಗಿದೆ. ಸೆ.3ರ ಸಂಜೆ ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ನದಿಯ ಮತ್ತೊಂದು ಬದಿಯಲ್ಲಿ ಮೊಸಳೆಯೊಂದು ಮರಳ ದಿಬ್ಬದಲ್ಲಿ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾ.ಪಂ. ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಫಯಾಜ್ ಯು.ಟಿ. ಅವರು ಗಮನಿಸಿದ್ದು, ಇದರ ಪೋಟೋವನ್ನು ಕ್ಲಿಕ್ಕಿಸಿದ್ದಾರೆ. ದೊಡ್ಡ ಗಾತ್ರದ ಮೊಸಳೆ ಇದಾಗಿದೆ. ಕಳೆದ 2022ರ ಸೆಪ್ಟೆಂಬರ್ ತಿಂಗಳಲ್ಲಿ ಪಂಜಳದ ಪೆಟ್ರೋಲ್ ಪಂಪ್ ಸಮೀಪ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಂಡು ಬಂದಿದ್ದವು. ಮಧ್ಯಾಹ್ನ ಹೊತ್ತಿನಲ್ಲಿ ನದಿ ಮಧ್ಯದಲ್ಲಿ ುವ ಕುರುಚಲು ಹುಲ್ಲನ್ನು ಹೊಂದಿರುವ ಮರಳ ದಿಬ್ಬದ ಮೇಲೆ ಈ…
Author: Nammur Express Admin
ತೀರ್ಥಹಳ್ಳಿಯ ಆಗುಂಬೆ ಬಳಿ 50 ಅಡಿ ಗುಡ್ಡ ಕುಸಿತ! – ನಾಲೂರು ಗ್ರಾಪಂ ವ್ಯಾಪ್ತಿಯ ಕಾರ್ ಬೈಲು ಗುಡ್ಡದಲ್ಲಿ ಬಿರುಕು – ಒಂದು ವಾರದಿಂದ ಜಿಟಿ ಜಿಟಿ ಮಳೆ: ಕೊಳೆ ರೋಗದ ಭೀತಿ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಲ್ಲಿ ಮತ್ತೆ ಗುಡ್ಡ ಕುಸಿತ ಪ್ರಕರಣ ಭಾರೀ ಸದ್ದು ಮಾಡುತ್ತಿರುವ ನಡುವೆ ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೊಂದು ಗುಡ್ಡ ಕುಸಿದಿದೆ. ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ ಬೈಲು ಗುಡ್ಡ ಮಂಗಳವಾರ ಬೆಳಿಗ್ಗೆ ಕುಸಿದಿದೆ. ಸೋಮವಾರ ರಾತ್ರಿ ಭಾರೀ ಶಬ್ದದಿಂದ ಗುಡ್ಡ ಕುಸಿದ ಬಗ್ಗೆ ಸ್ಥಳೀಯರು ಹೇಳಿದ್ದಾರೆ. ಸುತ್ತಮುತ್ತಲೂ ಗದ್ದೆ, ತೋಟ, ವಾಸದ ಮನೆ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ದಟ್ಟ ಕಾಡುಗಳಿಂದ ಆವರಿಸಿರುವ ಗುಡ್ಡ ಪ್ರದೇಶದಲ್ಲಿ ಜನರ ಓಡಾಟ ಇಲ್ಲ. ತೀರ್ಥಹಳ್ಳಿ- ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಇರುವ ಬಿಳಚಿಕಟ್ಟೆಯಿಂದ ಗುಡ್ಡ ಜರಿತವನ್ನು ವೀಕ್ಷಿಸಬಹುದು. ಕಲ್ಲು ಬಂಡೆಯ ಮೇಲೆ ಇದ್ದ ಮಣ್ಣು, ಗಿಡ ಮರಗಳು ಅಂದಾಜು 50 ಅಡಿ…
ಹಬ್ಬಕ್ಕೆ ಬಸ್, ರೈಲು ಎಲ್ಲಾ ಫುಲ್ ರಶ್! * ಹಬ್ಬದ ಪ್ರಯುಕ್ತ 1,500ಕ್ಕೂ ಹೆಚ್ಚು ವಿಶೇಷ ಬಸ್! * ಹಬ್ಬಕ್ಕೆ ಹೊರಡುವಾಗ ಮೊದಲೇ ಪ್ಲಾನ್ ಮಾಡಿಕೊಳ್ಳಿ! NAMMUR EXPRESS NEWS ಬೆಂಗಳೂರು: ಊರಿಗೆ ತೆರಳಿ ಕುಟುಂಬ, ಬಂಧು ಬಾಂಧವರೊಂದಿಗೆ ಗೌರಿ ಗಣೇಶ ಹಬ್ಬ ಆಚರಿಸಬೇಕೆಂದುಕೊಂಡವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಿಂದ 7ರವರೆಗೆ ಬೆಂಗಳೂರಿನಿಂದ 1,500ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ಓಡಿಸಲು ಮುಂದಾಗಿದೆ. ಕರ್ನಾಟಕ ಸಾರಿಗೆ, ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಇ.ವಿ. ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳೂ ಇರಲಿವೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಗೌರಿ ಹಬ್ಬ, ಗಣೇಶ ಚತುರ್ಥಿಗೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಳವಾಗುವುದರಿಂದ ವಿಶೇಷ ಬಸ್‌ಗಳನ್ನು ಓಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರದ ಬಂಟಿಸಿ ಬಸ್ ನಿಲ್ದಾಣ ಹಾಗೂ…
ಅಕ್ರಮ ಒತ್ತುವರಿ ತೆರವಿಗೆ ಸಿದ್ಧವಾಯ್ತು ಪಟ್ಟಿ! * ತೆರವಿನ ವಿವರ ಚಿತ್ರಸಹಿತ ಕಚೇರಿಗೆ ಒದಗಿಸಬೇಕು! * ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ NAMMUR EXPRESS NEWS ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿ 2015ರ ನಂತರದ ಅರಣ್ಯ ಒತ್ತುವರಿ ತೆರವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದ್ಯತಾ ಪಟ್ಟಿ ಗೊತ್ತುಪಡಿಸಿದ್ದಾರೆ. ಈ ಮೂಲಕ ಇದೀಗ ಒತ್ತುವರಿ ತೆರವಿಗೆ ಕ್ಷಣಗಣನೆ ಆರಂಭವಾಗಿದೆ. ಅನಗತ್ಯ ಗೊಂದಲ ಸೃಷ್ಟಿಸಿ, ತಪ್ಪು ಮಾಹಿತಿ ಹರಡಿ ತೆರವು ಕಾರ್ಯಾಚರಣೆಗೆ ಅಡೆತಡೆ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಟಿಪ್ಪಣಿಯೊಂದನ್ನು ಇಲಾಖೆ ಅಧಿಕಾರಿಗಳಿಗೆ ರವಾನಿಸಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದ ತೆರವು ಕಾರ್ಯಾಚರಣೆಗೆ ಕಾರ್ಯಪಡೆ ರಚಿಸಲಾಗಿದೆ. ಕಳೆದ ತಿಂಗಳಲ್ಲಿ ಮಾಡಿರುವ ಒತ್ತುವರಿ ತೆರವಿನ ವಲಯವಾರು ವಿವರಗಳನ್ನು ಚಿತ್ರಸಹಿತ ಕಚೇರಿಗೆ ಒದಗಿಸಬೇಕೆಂದು ಈಶ್ವರ ಖಂಡ್ರೆ ಸೂಚಿಸಿದ್ದಾರೆ. 3 ಎಕರೆ ಮೇಲೆ ಒತ್ತುವರಿ ತೆರವು ಅಣ್ಯ ಒತ್ತುವರಿ ಾಗೂ…
ವಿರೇಶ್ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ – ಹೊಸೂರು ಗುಡ್ಡೇಕೇರಿಯ ಸಮಾಜ ವಿಜ್ಞಾನ ಶಿಕ್ಷಕ ವಿರೇಶ್ ಅವರಿಗೆ ಗೌರವ – ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ಮೂಲಕ ಸಾಧನೆ ಮಾಡಿದ ಶಿಕ್ಷಕ – ಶಿಕ್ಷಕಿ ಭಾಗೀರಥಿ, ಉಪನ್ಯಾಸಕ ವಾಸುದೇವ ಕೆ.ಹೆಚ್ ಅವರಿಗೆ ಪ್ರಶಸ್ತಿ NAMMUR EXPRESS NEWS ತೀರ್ಥಹಳ್ಳಿ: ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ ನೀಡುವ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗಿದೆ. ಪ್ರಾಥಮಿಕ ಶಾಲೆ ವಿಭಾಗದಲ್ಲಿ 20 ಶಿಕ್ಷಕರು, ಪ್ರೌಢಶಾಲೆ ವಿಭಾಗದಲ್ಲಿ 11 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲೇ ತನ್ನ ಸಾಧನೆ ಹಾಗೂ ಶೈಕ್ಷಣಿಕ ಾತಾವರಣ, ಕ್ರೀಡೆ ಮೂಲಕ ಗಮನ ಸೆಳೆದಿರುವ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಸಮಾಜ ವಿಜ್ಞಾನ ಸಹ ಶಿಕ್ಷಕರಾದ ವಿರೇಶ್ ಟಿ. ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ವೀರೇಶ್ ಅವರು ಕಳೆದ 14…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗಣೇಶನ ಅನುಗ್ರಹದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ಮಾತಿನಲ್ಲಿ ಮಾಧುರ್ಯವಿರುತ್ತದೆ. ಉದ್ಯೋಗದಲ್ಲಿರುವವರಿಗೆ ದಿನವು ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳ ಸಹಕಾರವಿರುತ್ತದೆ. ಪ್ರಗತಿಯ ಹಾದಿ ಸುಗಮವಾಗಲಿದೆ. ಕೆಲಸದ ಸ್ಥಳದಲ್ಲಿ ಬದಲಾವಣೆಯೊಂದಿಗೆ, ನೀವು ಬೇರೆ ಸ್ಥಳಕ್ಕೆ ಹೋಗಬಹುದು. ಕುಟುಂಬದಿಂದ ಬೆಂಬಲ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಿರಿ. ** ವೃಷಭ ರಾಶಿ : ಇಂದು ನೀವು ಸ್ವಯಂ ನಿಯಂತ್ರಣವನ್ನು ಹೊಂದಿರಬೇಕು. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಯಾರೊಂದಿಗಾದರೂ ಮಾತಾನಾಡುವಾಗ ಸಮತೋಲನದಿಂದಿರಿ. ನೀವು ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬಹುದು. ಓಡಾಟ ಹೆಚ್ಚು ಇರುತ್ತದೆ. ನೀವು ಕೆಲಸದಲ್ಲಿ ಹೆಚ್ಚುವರಿ ಸಮಯವನ್ನು ಕಳೆಯೇಕಾಗಬಹುದು. ಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಆದರೆ,…
ಮಾನವೀಯತೆ ಇನ್ನು ಉಳಿದಿದೆ..! – ಕೊಪ್ಪದಲ್ಲಿ 10 ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೈಟ್ ಸಿಕ್ಕವರು ವಾಪಾಸ್ ಕೊಟ್ಟರು – ಶೃಂಗೇರಿ: ಕಳೆದು ಹೋದ ಮೊಬೈಲನ್ನು ವಾಪಾಸು ಕೊಟ್ಟ ಬಸ್ ಸಿಬ್ಬಂದಿ NAMMUR EXPRESS NEWS ಶೃಂಗೇರಿ: ಖಾಸಗಿ ಬಸ್ಸೊಂದರಲ್ಲಿ ಕಳೆದು ಹೋದ ಮೊಬೈಲನ್ನು ಬಸ್ ಸಿಬ್ಬಂದಿ ವಾಪಾಸು ಕೊಟ್ಟಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ. ವಾರಸುದಾರರಿಗೆ ಹಿಂತಿರುಗಿಸಿದ ಬಸ್‌ನ ಚಾಲಕರಾದ ರಿಝ್ವಾನ್, ಮತ್ತು ನಿರ್ವಾಹಕ ರಾಜೇಶ್. ಇವರ ಕಾರ್ಯಕ್ಕೆ ಮೆಚ್ಚುಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಪ್ಪದಲ್ಲಿ 10 ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೈಟ್ ಸಿಕ್ತು ಕೊಪ್ಪ: ಕೊಪ್ಪ ಪೊಲೀಸ್ ಠಾಣೆಯಲ್ಲಿ ಕೊಪ್ಪ ಪಟ್ಟಣ ವಾಸಿಯಾದ ಪತ್ರಕರ್ತ ಪ್ರಕಾಶ್ 10 ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೈಟ್ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಯಿತು.ಈ ಸಂದರ್ಭದಲ್ಲಿ ಸದಿ ಚಿನ್ನದ ಬ್ರೇಸ್ ಲೈಟ್ ನ್ನು ಪ್ರಾಮಾಣಿಕವಾಗಿ ಠಾಣೆಗೆ ಹಿಂದಿರುಗಿಸಿದಂತಹ ರೂಪೇಶ್ ಮೇಲಿನಪೇಟೆ ಕೊಪ್ಪ ಹಾಗೂ ಪಟ್ಟಣ ಪಂಚಾಯಿತಿಯ ಇಂಜಿನಿಯರ್ ರಾಜೇಶ್ ಎನ್ ಇವರನ್ನು ಕೊಪ್ಪ…
ಟಾಪ್ ನ್ಯೂಸ್ ಕರಾವಳಿ ಕೋಳಿ ಅಂಕ: ಹೊಳೆಗೆ ಹಾರಿ ತಪ್ಪಿಸಿಕೊಂಡರು! – ಕುಂದಾಪುರ ನಗರದ ಬಳಿ ಪೊಲೀಸ್ ದಾಳಿ ವೇಳೆ ಘಟನೆ * ಪುತ್ತೂರು: ಪುತಿಲ ಕೇಸ್: ಬೆಂಗಳೂರಿನ ಹೊಟೇಲಿನಲ್ಲಿ ಮಹಜರು! * ಮೂಡುಬಿದಿರೆ: ಮಹಿಳೆ ಚೈನ್ ಎಳೆದು ಪರಾರಿಯಾದ ಖದೀಮರು! * ಪುತ್ತೂರು: ಲಾರಿ- ಆಂಬ್ಯುಲೆನ್ಸ್ ಮಧ್ಯೆ ಅಪಘಾತ : ಐವರಿಗೆ ಗಾಯ * ಉಪ್ಪಿನಂಗಡಿ: ಪತಿ ಮಕ್ಕಳ ಬಿಟ್ಟು ಪತ್ನಿ ನಾಪತ್ತೆ: ಪತ್ತೆಯಾದ್ರೂ ಬರಲ್ಲ ಎಂದ ಮಹಿಳೆ! NAMMUR EXPRESS NEWS ಕುಂದಾಪುರ : ಕುಂದಾಪುರ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಹಳೇ ಆದರ್ಶ ಆಸ್ಪತ್ರೆಯ ಎದುರಿನ ಕಡ್ಡಿ ರಸ್ತೆಯ ತುದಿಯ ಖಾಲಿ ಜಾಗದಲ್ಲಿ ನಡೆಯುತ್ತಿದ್ದ ಕೋಳಿಪಡೆಗೆ ಕುಂದಾಪುರ ಪೊಲೀಸರು ಸೋಮವಾರ ಸಂಜೆಯ ವೇಳೆಗೆ ದಾಳಿ ನಡೆಸಿದ್ದಾರೆ ಪೊಲೀಸರ ದಾಳಿ ವೇಳೆ 15 ರಿಂದ 20 ಜನರಿದ್ದ ಗುಂಪು ದಿಕ್ಕಾಪಾಲಾಗಿ ಓಡಿ ಹೋಗಿದ್ದು ಕೆಲವರು ತೋಡು ಪಾಗಾರವನ್ನು ಹಾರಿ ತಪ್ಪಿಸಿಕೊಂಡರೇ ಇನ್ನು ೆಲವರು ಪಕ್ಕದ ೊಳೆಗೆ ಹಾರಿ…
‘ಡೆಂಗ್ಯೂ ಸಾಂಕ್ರಾಮಿಕ ಕಾಯಿಲೆ’ ಎಂದು ಘೋಷಿಸಿದ ಸರ್ಕಾರ! * ಸೊಳ್ಳೆಗಳ ನಿಯಂತ್ರಣಕ್ಕೆ ನಿಯಮಗಳು ಜಾರಿ! * ನಿಯಮ ಉಲ್ಲಂಘಿಸಿದರೆ ದಂಡ ಖಚಿತ! NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಪಣತೊಟ್ಟಿದ್ದು, ಈ ಹಿನ್ನಲೆ ಡೆಂಗ್ಯೂ ವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಸರ್ಕಾರ ಘೋಷಿಸಿದೆ. ಇನ್ನು ಮುಂದೆ ನೈರ್ಮಲ್ಯ(ಸ್ವಚ್ಚತೆ) ಕಾಪಾಡದವರಿಗೆ ದಂಡ ಬೀಳಲಿದೆ. ಹೌದು!ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2020ಕ್ಕೆ ತಿದ್ದುಪಡಿ ಮಾಡಿ ಆಗಸ್ಟ್ 31ರಂದು ಕರ್ನಾಟಕ ಗೆಜೆಟ್ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಮನೆ, ಖಾಲಿ ಜಾಗ, ಕಟ್ಟಡದ ಬಳಿ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆ ಸಂತಾನೋತ್ಪತ್ತಿ ಹರಡಲು ಅವಕಾಶ ನೀಡದಂತೆ ಕ್ರಮವಹಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಸೊಳ್ಳೆಗಳ ಸಂತಾನೋತ್ಪತ್ತಿ ಹರಡಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು.ಆಯಾ ಜಾಗದ ಮಾಲೀಕರು ಸೊಳ್ಳೆ ಬಾರದಂತೆ ಕ್ರಮ ವಹಿಸಬೇಕು. ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು.ನಿವೇಶನ ಅಥವಾ ಖಾಲಿ ಜಾಗದಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಆ ರೀತಿ…
* ನಿವೃತ್ತ ಎಸಿಪಿ ಫೋಟೊ ಬಳಸಿ, ಸೈಬರ್ ವಂಚನೆ! * ಗುಜರಿ ವ್ಯಾಪಾರಿಗೆ ಖೋಟಾ ನೋಟು ಕೊಟ್ಟು ವಂಚನೆ * ಸುಮಾರು 110 ಇ- ಸಿಗರೇಟ್ ವಶ!! NAMMUR EXPRESS NEWS ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೂರಾರು ವಂಚನೆ ಪ್ರಕರಣಗಳು ದಾಖಲಾಗುತ್ತಲೇ ಇರುತ್ತದೆ. ನಿವೃತ್ತ ಎಸಿಪಿ ಟೈಗರ್ ಅಶೋಕ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆಗೆದು ಹಣಕ್ಕೆ ಬೇಡಿಕೆ ಇಟ್ಟರೆ ಮತ್ತೊಂದು ಕಡೆ ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಸೈಬರ್ ವಂಚನೆ ನಡೆಯುತ್ತಿದೆ. ನಿವೃತ್ತ ಎಸಿಪಿ ಟೈಗರ್ ಅಶೋಕ್ ಹೆಸರಲ್ಲಿ ನಕಲಿ ಫೇಸ್ ಬುಕ್ ಸೈಬರ್ ವಂಚಕರು ನಕಲಿ ಫೇಸ್ ಬುಕ್ ಖಾತೆ ತೆರದು ಹಲವರಿಗೆ ಮೆಸೇಜ್ ಮಾಡಿದ್ದಾರೆ.ಹಣ ಕೀಳಲು ಯತ್ನಿಸಿದ್ದಾರೆ. ಅಶೋಕ್ ಕುಮಾರ್ ಫೋಟೊ ಬಳಸಿ ನಕಲಿ ಅಕೌಂಟ್ ಓಪನ್ ಮಾಡಿ ಹಣಕ್ಕಾಗಿ ಮೆಸೇಜ್ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ಟೈಗರ್ ಅಶೋಕ್ ಕುಮಾರ್ ಅವರು ದೂರು ನೀಡಿದ್ದಾರೆ. ಜೊತೆಗೆ ನಕಲಿ ಖಾತೆಯಿಂದ ಯಾರಾದರೂ ಮೆಸೇಜ್…