ಒತ್ತುವರಿ ತೆರವಿಗೆ ಆದ್ಯತೆ ಪಟ್ಟಿ!! * ತೆರವಿನ ವಿವರ ಚಿತ್ರಸಹಿತ ಕಚೇರಿಗೆ ಒದಗಿಸಬೇಕು! * ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ! NAMMUR EXPRESS NEWS ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿ 2015ರ ನಂತರದ ಅರಣ್ಯ ಒತ್ತುವರಿ ತೆರವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದ್ಯತಾ ಪಟ್ಟಿ ಗೊತ್ತುಪಡಿಸಿದ್ದಾರೆ. ಅನಗತ್ಯ ಗೊಂದಲ ಸೃಷ್ಟಿಸಿ, ತಪ್ಪು ಮಾಹಿತಿ ಹರಡಿ ತೆರವು ಕಾರ್ಯಾಚರಣೆಗೆ ಅಡೆತಡೆ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಟಿಪ್ಪಣಿಯೊಂದನ್ನು ಇಲಾಖೆ ಅಧಿಕಾರಿಗಳಿಗೆ ರವಾನಿಸಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದ ತೆರವು ಕಾರ್ಯಾಚರಣೆಗೆ ಕಾರ್ಯಪಡೆ ರಚಿಸಲಾಗಿದೆ. ಕಳೆದ ತಿಂಗಳಲ್ಲಿ ಮಾಡಿರುವ ಒತ್ತುವರಿ ತೆರವಿನ ವಲಯವಾರು ವಿವರಗಳನ್ನು ಚಿತ್ರಸಹಿತ ಕಚೇರಿಗೆ ಒದಗಿಸಬೇಕೆಂದು ಈಶ್ವರ ಖಂಡ್ರೆ ಸೂಚಿಸಿದ್ದಾರೆ. * ತೆರವಿಗೆ ಆದ್ಯತೆ: ಅರಣ್ಯ ಒತ್ತುವರಿ ಹಾಗೂ ಒತ್ತುವರಿದಾರನ ಪಟ್ಟಾ ಜಮೀನು ಸೇರಿ ಮೂರು ಎಕರೆಗಿಂತ ಕಡಿಮೆ ಇರುವ ಒತ್ತುವರಿದಾರರನ್ನು ಒ್ಕೆಬ್ಬಿಸಬಾರದು ಎಂಬ…
Author: Nammur Express Admin
ಅಡಿಕೆ ದರ ಎಷ್ಟಿದೆ? – ಯಾವ ಅಡಿಕೆಗೆ ಎಷ್ಟು ಬೆಲೆ ? – ಸರಕು ಬೆಲೆ ಎಷ್ಟಿದೆ? ಬೆಟ್ಟೆ ಬೆಲೆ ಎಷ್ಟಿದೆ? NAMMUR EXPRESS NEWS ಶಿವಮೊಗ್ಗ ಸರಕು 50100 – 86220 – 62999 ಬೆಟ್ಟೆ 44069 – 55009 – 54200 ರಾಶಿ 26009 – 48019 – 46069 ಗೊರಬಲು 18109 – 32109 – 31782
ಅಡಕೆ ಬೆಳೆಗೆ ಎಲೆ ಚುಕ್ಕಿ ರೋಗ, ಬೆಳೆಗಾರರಿಗೆ ಆತಂಕ! * ರೋಗಗಳಿಂದ ಅಡಕೆ ಬೆಳೆ ಹೈರಾಣ! * ರೋಗ ಬಂದ ಮರ ಉಳಿಸಿಕೊಳ್ಳುವುದೇ ಸವಾಲು! NAMMUR EXPRESS NEWS ಶಿವಮೊಗ್ಗ: ತಾಲೂಕಿನಲ್ಲಿ ಅತಿವೃಷ್ಟಿ ಅವಾಂತರ ಮುಂದುವರಿದಿದ್ದು, ಅಡಕೆ ಬೆಳೆಗೆ ಈಗಾಗಲೇ ಇರುವ ಹಲವು ಕಾಯಿಲೆ ಗಳೊಂದಿಗೆ ಎಲೆ ಚುಕ್ಕಿ ರೋಗ ಮತ್ತೆ ಮರುಕಳಿಸಿದೆ. ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ. ಕಳೆದ ವರ್ಷ ಮಳೆಯ ಪ್ರಮಾಣದಲ್ಲಿ ಇಳಿಕೆ ಯಾಗಿದ್ದು, ಎಲೆ ಚುಕ್ಕಿ ರೋಗ ನಿಯಂತ್ರಣದ್ದು, ವರ್ಷ ಬೇಸಗೆ ಮಳೆಯೂ ಉತ್ತಮವಾಗಿದ್ದು, ಜುಲೈನಲ್ಲಿ ಸರಾಸರಿಗಿಂತ ಅಧಿಕ ಮಳೆ ಸುರಿದಿದೆ. ಆಗಸ್ಟ್‌ನಲ್ಲಿ ಅಲ್ಪ ಬಿಡುವು ನೀಡಿದರೂ ಮತ್ತೆ ಮಳೆಯಾಗಿದ್ದು, ಮೋಡ ಕವಿದ ವಾತಾವರಣ, ಸೋನೆ ಮಳೆ ಮಾರಕ ರೋಗ ಹರಡಲು ಪೂರಕವಾಗಿದೆ. ತಾಲೂಕಿನಲ್ಲಿ ಹಳದಿ ಎಲೆ ರೋಗ, ಬೇರು ಹುಳು ಮತ್ತು ಕೊಳೆ ರೋಗದಿಂದ ಅಡಕೆ ಬೆಳೆ ಹೈರಾಣಾಗಿದೆ. ಇದರೊಂದಿಗೆ ಎಲೆ ಚುಕ್ಕಿ ರೋಗ ಮತ್ತಷ್ಟು ಹೊಡೆತ ನೀಡಲಾರಂಭಿಸಿದೆ. ಈಗಾಗಲೇ ರೋಗ ಪೀಡಿತವಾಗಿರುವ ಅಡಕೆ ಮರಕ್ಕೆ…
ಕಾರ್ಕಳ ಟಾಪ್ 3 ನ್ಯೂಸ್ ಕಾರ್ಕಳ ಲಯನ್ಸ್ ಕ್ಲಬ್ ಸಮಾಜ ಸೇವೆ ಹೆಜ್ಜೆ! – ಅಶಕ್ತರಿಗೆ ನೆರವು: ಆಹಾರದ ಕಿಟ್ ವಿತರಣೆ ಕಾರ್ಕಳ ಶಂಕರ ಪ್ರತಿಷ್ಠಾನದ ಶೃಂಗೇರಿ ಪ್ರವಾಸ – ಉಡುಪಿಯ ವಿದ್ಯಾ ಮಾರ್ಗದರ್ಶನದಲ್ಲಿ ನಡೆದ ಭಜನೆ ಕಾರ್ಕಳದಲ್ಲಿ ಕಳ್ಳರ ಕಾಟ: 10 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಬೈಕಿಗೆ ಡಿಕ್ಕಿ ಹೊಡೆದ ಲಾರಿ: ಇಂಜಿನಿಯರ್ ವಿದ್ಯಾರ್ಥಿಗೆ ಗಾಯ NAMMUR EXPRESS NEWS ಕಾರ್ಕಳ: ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಲಯನ್ಸ್ ಜಿಲ್ಲೆ 317ಸಿ ಇದರ ಆಶ್ರಯದಲ್ಲಿ ಅಶಕ್ತರಿಗೆ ನೆರವು ನೀಡುವ ದೃಷ್ಟಿಯಿಂದ ಕಾರ್ಕಳ ಲಯನ್ಸ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಇಬ್ಬರಿಗೆ ಆಹಾರ ಕಿಟ್ ವಿತರಿಸಲಾಯಿತು. ಲಯನ್ಸ್ ನಿಂದ ಜಿಲ್ಲಾ ಗವರ್ನರ್ ಹನೀಫ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ಜರುಗಿತು. ಈ ಸಂದರ್ಭದಲ್ಲಿ ಜಿಲ್ಲೆಯ ಮಾಜಿ ಗವರ್ನರ್ ಎನ್. ಎಂ. ಹೆಗ್ಡೆ, ಪ್ರಾಂತ್ಯಾಧ್ಯಕ್ಷ ಹರೀಶ್ ಬೆಳಂಜೆ, ವಲಯಾಧ್ಯಕ್ಷ ಶಾಕೀರ್ ಹುಸೇನ್, ಟಿ. ಜಿ. ಆಚಾರ್ಯ, ಸಂಪುಟ ಸದಸ್ಯರು, ಾರ್ಕಳ…
ಪಂಚಾಯತ್ ಅಭ್ಯರ್ಥಿಗಳಿಗೆ ಇನ್ಮೇಲೆ ಸ್ಪೆಷಲ್ ಕ್ಲಾಸ್! * ಪ್ರತಿದಿನ 2 ಗಂಟೆಗಳಂತೆ 50 ದಿನ ಒಟ್ಟು 100 ಗಂಟೆ ತರಬೇತಿ * ಸದಸ್ಯರಿಗೆ ತರಬೇತಿ ಕಿಟ್ ಮತ್ತು ಗೌರವಧನ ಭಾಗ್ಯ NAMMUR EXPRESS NEWS ಬೆಂಗಳೂರು: ಗ್ರಾಮಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಸ್ಥಳೀಯ ಆಡಳಿತ ವಹಿಸಿಕೊಳ್ಳಲು ಗ್ರಾಮ ಪಂಚಾಯತ್ ವ್ಯವಸ್ಥೆ ಜಾರಿ ಮಾಡಿರುವುದು ಗೊತ್ತೇ ಇದೆ. ಐದು ವರ್ಷಗಳಿಗೊಮ್ಮೆ ಗ್ರಾಮಗಳಿಂದಲೇ ಅಭ್ಯರ್ಥಿಗಳನ್ನು ಗೆಲ್ಲಿಸಿ, ಪಂಚಾಯ್ತಿ ಸದಸ್ಯರು, ಅಧ್ಯಕ್ಷರು ಹಾಗೂ ಒಂದು ಚುನಾಯಿತರ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಪಂಚಾಯ್ತಿಗಳಿಗೆ ಚುನಾಯಿತರಾಗುವ ಬಹುತೇಕ ಅಭ್ಯರ್ಥಿಗಳು ಅಷ್ಟೇನೂ ಶಿಕ್ಷಣ ಪಡೆದವರಾಗಿರುವುದಿಲ್ಲ. ಇನ್ನೂ ಕೆಲವರು ಅನಕ್ಷರಸ್ಥರೂ ಆಗಿರುತ್ತಾರೆ. ಅಂತವರಿಗಾಗಿ ರಾಜ್ಯ ಸರ್ಕಾರವು ಸಾಕ್ಷರ ಸನ್ಮಾನ ಎನ್ನುವ ಮಹತ್ವದ ಕಾರ್ಯಕ್ರಮವನ್ನು ಜಾರಿ ಮಾಡಿದೆ. ಗ್ರಾಮ ಪಂಚಾಯಿತಿಗಳ 6,346 ಅನಕ್ಷರಸ್ಥ ಚುನಾಯಿತ ಪ್ರತಿನಿಧಿನ್ನು ಸಾಕ್ಷರರನ್ನಾಗಿಸುವ ‘ಸಾಕ್ಷರ ಸನ್ಮಾನ’ ಕಾರ್ಯಕ್ರಮವು ಸೆಪ್ಟೆಂಬರ್ 1ರಿಂದ ಆರಂಭಗೊಂಡಿದೆ. 21 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವು ಜಾರಿಯಾಗಿದೆ. ಅದರಂತೆ ಅಕ್ಟೋಬರ್ 20ರವರೆಗೆ ಪ್ರತಿದಿನ 2 ಗಂಟೆಗಳಂತೆ 50…
ಶಿವಮೊಗ್ಗ ಜಿಲ್ಲೆಯಲ್ಲಿ ಡಿಜೆ ಸಿಸ್ಟಮ್ ನಿಷೇಧ! * ಸಾರ್ವಜನಿಕರ ಹಿತ ದೃಷ್ಟಿಗಾಗಿ ನಿರ್ಧಾರ * ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ NAMMUR EXPRESS NEWS ತೀರ್ಥಹಳ್ಳಿ: ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಆಚರಣೆ ಪೂರ್ಣಗೊಳ್ಳುವವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಮ್ ಬಳಕೆ ನಿಷೇಧವಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಸೆ.7ರಂದು ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆಚರಣೆ ಮಾಡಲಾಗಲಗುತ್ತದೆ. ಹಾಗೆಯೇ ಸೆ.16ರಂದು ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಆಚರಿಸಲಿದ್ದಾರೆ. ಈ ಸಂದರ್ಭದಲ್ಲಿ ಡಿಜೆ ಸಿಸ್ಟಮ್ ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯ್ರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊಂದಿಗೆ ಕಾನೂನು ಸುವ್ಯವಸ್ಥೆಗೆ ದಕ್ಕೆಯುಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಸೌಹಾರ್ದತೆ ಮತ್ತು ಶಾಂತಿಯನ್ನು ಕಾಪಾಡಲು ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆಗಳು ಪೂರ್ಣಗೊಳ್ಳುವವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಮ್ ಗಳನ್ನು ನಿಷೇಧ ಗೊಳಿಸುವುದಾಗಿ ಜಿಲ್ಲಾಧಿಕಾರಿಗಳು ಮತ್ತು ದಂಡಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ. ಎಲ್ಲಾ ಗಣೇಶ…
ಚಿಕ್ಕಮಗಳೂರು: ಪುಟಾಣಿಗಳ ಅಪರೂಪದ ಪ್ರತಿಭಟನೆ!! * ಬದಲಿ ಶಿಕ್ಷಕರು ಬಾರದ ಹಿನ್ನೆಲೆ ಮಕ್ಕಳ ಪ್ರತಿಭಟನೆ! * ಶಿಕ್ಷಕನ್ನು ರಿಲೀವ್ ಮಾಡಿದ ಕಾರಣ ಪೋಷಕರ ಪ್ರಶ್ನೆ! NAMMUR EXPRESS NEWS ಚಿಕ್ಕಮಗಳೂರು:ತಮ್ಮ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರಿಗೆ ಕುಳಿತು ಪ್ರತಿಭಟನೆ ನಡೆಸಿದ ಅಪರೂಪದ ಘಟನೆ ಚಿಕ್ಕಮಗಳೂರಿನಲ್ಲಿ ನಡೆಯಿತು. ಚಿಕ್ಕಮಗಳೂರು ತಾಲೂಕಿನ ಮೇಲು ಹುಲುವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಇದ್ದ ಒಬ್ಬ ಶಿಕ್ಷಕರು ವರ್ಗಾವಣೆಗೊಂಡಿದ್ದು ಇನ್ನೂ ಯಾರನ್ನು ನಿಯೋಜನೆ ಮಾಡಿಲ್ಲ, ಇದರಿಂದ ನಮ್ಮ ಶಿಕ್ಷಣಕ್ಕೆ ತೊಂದರೆಯಾಗಿದೆ ಎಂದು ಬಿ.ಇ.ಓ. ಕಛೇರಿಗೆ ಬಂದು ಶಾಲೆಯ 9 ಮಕ್ಕಳು ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಇದ್ದ ಒಬ್ಬರು ಟೀಚರ್ ಕೂಡ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ ಆ ಸ್ಥಳಕ್ಕೆ ಹೊಸಬರು ಬರೋದಕ್ಕೆ 15 ದಿನ ಆಗುತ್ತೆ ಎಂದು ಹೇಳಲಾಗಿದ್ದು, ಒಬ್ಬರೂ ಟೀಚರ್ ಇಲ್ಲದ ಕಾರಣ ಪೋಷಕರ ಜೊತೆ ಸೇರಿ ಬಿಇಓ ಕಚೇರಿಗೆ ಬಂದ ವಿದಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಹೊಸ ಶಿಕ್ಷಕರು…
ಕೆಎಂಎಫ್ ನ ನಂದಿನಿ ಹಾಲಿಗೆ ಡಿಮ್ಯಾಂಡ್!!! * ಕರ್ನಾಟಕ ನಂದಿನಿ ಹಾಲು ದೆಹಲಿಗೂ ಸರಬರಾಜು!! * ಸರಬರಾಜು ಮಾಡುವಂತೆ ದೆಹಲಿ ಸರ್ಕಾರ ಮನವಿ! NAMMUR EXPRESS NEWS ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳ (ಕೆಎಂಎಫ್) ಉತ್ಪಾದಿಸುವ ನಂದಿನಿ ಹಾಲನ್ನು ದೆಹಲಿಗೂ ಸರಬರಾಜು ಮಾಡುವಂತೆ ಬೇಡಿಕೆ ಬಂದಿದೆ. ಹೌದು!.. ನಂದಿನಿ ಹಾಲನ್ನು ರಾಷ್ಟ್ರ ರಾಜಧಾನಿ ದೆಹಲಿಗೂ ಕಳುಹಿಸುವಂತೆ ದೆಹಲಿ ಸರ್ಕಾರ ಮನವಿ ಮಾಡಿದೆ. ಪ್ರತಿನಿತ್ಯ ದೆಹಲಿಗೆ 1 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡುವಂತೆ ದೆಹಲಿ ಸರ್ಕಾರದಿಂದ ಮನವಿ ಮಾಡಲಾಗಿದೆ. ದೇಶದ ಮೆಟ್ರೋ ಪಾಲಿಟಿನ್ ಸಿಟಿಯಾಗಿರುವ ದೆಹಲಿ ಕೇಂದ್ರಾಡಳಿತ ಪ್ರದೇಶ ಆಗಿದ್ದರೂ ಪ್ರತ್ಯೇಕ ಸರ್ಕಾರದ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಮೂಲ ಸೌಕರ್ಯಗಳನ್ನು ದಗಿಲಾಗುತ್ತಿದೆ. ಇನ್ನು ದೆಹಲಿಗೆ ಹತ್ತಿರದಲ್ಲಿರುವ ಗುಜರಾತ್ ರಾಜ್ಯದ ಅಮುಲ್ ಹಾಲು, ಮದರ್ ಡೈರಿಯ ಹಾಲನ್ನು ದೆಹಲಿಗೆ ಸರಬರಾಜು ಮಾಡಲಾಗುತ್ತಿದೆ. ಈಗ ದೆಹಲಿ ಸರ್ಕಾರದಿಂದಲೂ ಕೆಎಂಎಪ್‌ನ ನಂದಿನಿ ಹಾಲಿಗೆ ಡಿಮ್ಯಾಂಡ್ ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ…
ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ!! * ಸುಳ್ಳು ದಾಖಲೆ,ಅನರ್ಹ ಬಿಪಿಎಲ್ ಕಾರ್ಡ್ ಸೃಷ್ಟಿ! * ದಂಡದ ಜೊತೆಗೆ ಕಾನೂನು ಕ್ರಮ ಗ್ಯಾರಂಟಿ? NAMMUR EXPRESS NEWS ದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ಅಥವಾ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ರೇಷನ್ ಕಾರ್ಡ್ ಮುಖ್ಯವಾಗಿದೆ. ಆದರೆ, ನಕಲಿ ದಾಖಲೆ ನೀಡಿ ರೇಷನ್ ಕಾರ್ಡ್ ಪಡೆಯುವವರಿಗೆ ಸರ್ಕಾರ ಶಾಕ್ ಕೊಟ್ಟಿದೆ. ರಾಜ್ಯ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವವರು ಸಿಕ್ಕಿಬಿದ್ದರೆ ದಂಡದ ಜೊತೆಗೆ ಕಾನೂನು ಕ್ರಮ ಎದುರಿಸಬೇಕು. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸಕ್ಕೆ ಆಹಾರ ಇಲಾಖೆ ಮುಂದಾಗಿದೆ. ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಇದುವರೆಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡೆದ ಅಕ್ಕಿ ಹಾಗೂ ಇತರೆ ಧಾ್ಯಗಳ ಮೊತ್ತವನ್ನು ಮರಳಿಸಬೇಕು ಜೊತೆಗೆ ಕ್ರಿಮಿನಲ್ ಕೇಸ್ ಎದುರಸಬೇಕು. ರಾಜ್ಯದಲ್ಲಿ 10,97,621 ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಯಾಗಿದ್ದು, ಈ ಪೈಕಿ 97,431 ಮಂದಿ…
ಶಿವಮೊಗ್ಗಕ್ಕೆ ಕೀರ್ತಿ ತಂದ ನಮ್ರತ..! * ಓದಿನ ಜತೆಗೆ ಭರತ ನಾಟ್ಯದಲ್ಲಿ ಪಾಂಡಿಚೇರಿಯಲ್ಲಿ ದಾಖಲೆ * ಎಕ್ಸಲೆಂಟ್ ವಿದ್ಯಾರ್ಥಿನಿಯಿಂದ ಗಿನ್ನಿಸ್ ವರ್ಡ್ ರೆಕಾರ್ಡ್, ಯುನಿಕ್ಯು ವರ್ಡ್ ರೆಕಾರ್ಡ್ NAMMUR EXPRESS NEWS ಶಿವಮೊಗ್ಗ/ ತೀರ್ಥಹಳ್ಳಿ: ಎಕ್ಸಲೆಂಟ್ ಎಜುಕೇಶನ್ ಅಕಾಡೆಮಿ ತೀರ್ಥಹಳ್ಳಿ, ಇವರ ಆಡಳಿತ ಇರುವ ಮಂದಾರ ಜ್ಞಾನದಾಯಿನಿ ಪದವಿ ಪೂರ್ವ ಕಾಲೇಜು ಶಿವಮೊಗ್ಗ ಇಲ್ಲಿ ವ್ಯಾಸಂಗ ಮಾಡುತ್ತಿರುವ ನಮ್ರತ ಗಿನ್ನಿಸ್ ವರ್ಡ್ ರೆಕಾರ್ಡ್ ಹಾಗೂ ಯುನಿಕ್ಯು ವರ್ಡ್ ರೆಕಾರ್ಡ್ ಗೆ ಭಾಜನರಾಗಿದ್ದಾರೆ. ನಮ್ರತ ಸುಮಾರು 11 ವರ್ಷಗಳಿಂದ ಶಿಕ್ಷಣದ ಜೊತೆಗೆ ವಿದ್ವಾನ್ ಕೇಶವ ಶರ್ಮ ಬಳಿ ಭರತ ನಾಟ್ಯವನ್ನು ಕಲಿತು ಅಭ್ಯಾಸ ಮಾಡುತ್ತಿದ್ದಾರೆ. ಜೂನೀಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ಪೂರ್ಣಗೊಳಿಸಿ 2022-23 ರಲ್ಲಿ ಪಾಂಡಿಚೇರಿಯಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿನ್ನಿಸ್ ವರ್ಡ್ ರೆಕಾರ್ಡ್ ಹಾಗೂ ಯುನಿಕ್ಯು ವರ್ಡ್ ರೆಕಾರ್ಡ್ ಮಾಡಿ ಕಾಲೇಜು ಹಾಗೂ ಶಿವಮೊಗ್ಗಕ್ಕೆ ಕೀರ್ತಿ ತಂದಿರುತ್ತಾರೆ. ನಮ್ರತರವರ ಸಾಧನೆಗೆ ಎಕ್ಸಲೆಂಟ್ ಎಜುಕೇಶನ್ ಅಕಾಡೆಮಿ (ರಿ) ತೀರ್ಥಹಳ್ಳಿಯ ಆಡಳಿತ ಮಂಡಳಿಯ…