Author: Nammur Express Admin

ಕಾರ್ಕಳ ಶಂಕರ ಪ್ರತಿಷ್ಠಾನದ ಸಂಭ್ರಮಾಚರಣೆ!! * ಶೃಂಗೇರಿಯತ್ತ ಪಯಣ!! * ದೇವರ ದರ್ಶನ ಹಾಗೂ ಗುರುಗಳ ಭೇಟಿ ಕಾರ್ಯಕ್ರಮ!! NAMMUR EXPRESS NEWS ಕಾರ್ಕಳ: ಉಡುಪಿ ಜಿಲ್ಲೆ ಕಾರ್ಕಳ ಶಂಕರ ಪ್ರತಿಷ್ಠಾನದ ಸೆ. 1ರಂದು ಸಂಭ್ರಮಾಚರಣೆ ಪ್ರಯುಕ್ತ ಶೃಂಗೇರಿ ಪ್ರವಾಸ ಕಾರ್ಯಕ್ರಮ ನಡೆಯಿತು. ಅನಂತಶಯನ ದೇವಸ್ಥಾನದ ದಲ್ಲಿ ದೇವರ ದರ್ಶನ ಪಡೆಯಲು ಶೃಂಗೇರಿಯತ್ತ 58 ಜನ ಸದಸ್ಯರು ಗುರುಗಳ ಭೇಟಿಗೆ, ಶೃಂಗೇರಿ ಜಗದ್ಗುರುಗಳಿಗೆ ಮತ್ತು ಶಾರದಾಂಬೆಗೆ ಜಯಕಾರ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆಯನ್ನು ನಡೆಸಿದರು. ಬಜೆಗೋಳಿಯ ಉಮೇಶ್ ರಾವ್ ದಂಪತಿಗಳ ಮನೆಯಲ್ಲಿ ಸದಸ್ಯರಿಗೆ ಉಪಹಾರ ವ್ಯವಸ್ಥೆಯಿದ್ದು, ಉಪಹಾರ ತಯಾರಕರು ನಾಗಭೂಷಣ ಹೆಬ್ಬಾರ್ ಮತ್ತು ಬಳಗದವರಾಗಿದ್ದರು. ಉಡುಪಿಯ ವಿದ್ಯಾ ಅವರ ಮಾರ್ಗದರ್ಶನದಲ್ಲಿ ನಡೆದ ಭಜನೆ ಂದು ಇತಿಹಾವನ್ನು ಸೃಷ್ಟಿಸಿತು. ಭಗವದ್ ಭಕ್ತರು ಮೆರೆದ ಸ್ಥಾನಿಕ ಬ್ರಾಹ್ಮಣ ಸಮಾಜ ಸಂಭ್ರಮಿಸುತ್ತಿದ್ದು, ಗುರುಗಳ ಪಾದ ಪೂಜೆ ಯನ್ನು ಭಕ್ತಿಯಿಂದ ನಡೆಸಲಾಯಿತು. ಶೃಂಗೇರಿ ಜಗದ್ಗುರುಗಳ ಪ್ರತಿನಿಧಿಗಳು, ಮಂಗಳೂರಿನ ಸತ್ಯಶಂಕರ ಬೊಲ್ಲಾವರು ಸದಸ್ಯರನ್ನು ಬರಮಾಡಿಕೊಂಡಿದ್ದು, ಗುರು ಬಿಕ್ಷೆ ನಂತರ ಗುರುಗಳಿಂದ…

Read More

ಗ್ಯಾರಂಟಿ ಯೋಜನೆ ಸಮಿತಿಯ ಕಚೇರಿ ಉದ್ಘಾಟನೆಗೆ ಸಜ್ಜು – ತೀರ್ಥಹಳ್ಳಿಯ ಗ್ರಾಮೀಣಾಭಿವೃದ್ಧಿ ಸೌಧದಲ್ಲಿ ಸೆ.6 ರಂದು ಉದ್ಘಾಟನೆ – ತೀರ್ಥಹಳ್ಳಿ ತಾಲೂಕಿನ ಪಲಾನುಭವಿಗಳ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಗ್ರಾಮೀಣಾಭಿವೃದ್ಧಿ ಸೌಧದಲ್ಲಿ ಸೆ.6 ರಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲೂಕು ಮೇಲ್ವಿಚಾರಣ ಸಮಿತಿಯ ಕಚೇರಿ ಉದ್ಘಾಟನೆ ನಡೆಯಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ವಿವರ ನೀಡಿದ ಸಮಿತಿ ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ ತಾಲೂಕಿನ ಸರ್ವರಿಗೂ ರಾಜ್ಯ ಸರ್ಕಾರದ ಯೋಜನೆಯನ್ನು ತಲುಪಿಸಲು ತೀರ್ಥಹಳ್ಳಿಯ ಗ್ರಾಮೀಣಾಭಿವೃದ್ಧಿ ಸೌಧದಲ್ಲಿ ಸೆ.6 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲೂಕು ಮೇಲ್ವಿಚಾರಣ ಸಮಿತಿಯ ಕಚೇರಿ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿಯ ಗಾಂಧಿ ಭವನದಲ್ಲಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಚ್ಚೀಂದ್ರ ಹೆಗ್ಡೆ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಆರಂಭವಾಗ ಒಂದು ವರ್ ಮುಗಿದಿದ್ದು, ಕಳೆದ ಒಂದು ವರ್ಷದಲ್ಲಿ ಯೋಜನೆಗಳ…

Read More

ಕರಾವಳಿ ಟಾಪ್ 4 ನ್ಯೂಸ್ ಮುಂಗಾರಿನ ಸಸಿಮಡಿಯಲ್ಲಿ ಅಂಗಮಾರಿ ರೋಗ! – ಬೆಳ್ತಂಗಡಿ ಭಾಗದಲ್ಲಿ ಭತ್ತಕ್ಕೆ ರೋಗ: ಏನಿದು ರೋಗ * ಪುತ್ತೂರು: ಪುತ್ತಿಲ ಅವರಿಗೆ ನ್ಯಾಯಾಲಯದ ಜಾಮೀನು * ಬೆಳ್ತಂಗಡಿ: ಗಾಂಜಾ ಮಾರಾಟ ಮಾಡುತ್ತಿದ್ದಾತನ ಬಂಧನ * ಬ್ರಹ್ಮಾವರ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ NAMMUR EXPRESS NEWS ಬೆಳ್ತಂಗಡಿ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಬ್ಯಾಕ್ಟೀರಿಯಾ ದುಂಡಾಣು ಅಂಗಮಾರಿ ರೋಗವು ಬೆಳ್ತಂಗಡಿ ತಾಲೂಕಿನ ಗದ್ದೆಯಲ್ಲಿ ಕಾಣಿಸಿಕೊಂಡಿದೆ.ಅಂಗಮಾರಿ ಹೆಚ್ಚಾಗಿ ಬಯಲು ಸೀಮೆಯಲ್ಲಿ ಕಾಣಿಸಿಕೊಳ್ಳುವ ರೋಗ, ಕಾಲುವೆ ನೀರಿನ ಮೂಲಕ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡುತ್ತದೆ. ಆದರೆ ಈ ಬಾರಿ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಲಿಂಗಪ್ಪ ಪೂಜಾರಿ ಹಾಗೂ ಮೇಲಂತಬೆಟ್ಟು ಗ್ರಾಮದ ರಘುರಾಮ್‌ ಶೆಟ್ಟಿ ಅವರ ಭತ್ತದ ಗದ್ದೆಯಲ್ಲಿ ಈ ರೋಗದ ಲಕ್ಷಣ ಪತ್ತೆಯಾಗಿದ್ದು, ಇದರ ಬಗ್ಗೆ ಕೃಷಿ ಇಲಾಖೆ ಪರಿಶೀಲನೆ ನಡೆುತ್ತಿದೆ. ಬ್ರಹ್ಮಾವರ ಭಾಗದಲ್ಲೂ ಈ ವರ್ಷದ ಮುಂಗಾರಿನಲ್ಲಿ ಸಸಿಮಡಿಯಲ್ಲೇ ಈ ರೋಗ ಲಕ್ಷಣ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡುಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ಮನಸ್ಸು ತೊಂದರೆಗೊಳಗಾಗುತ್ತದೆ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ವ್ಯಾಪಾರವು ಸುಧಾರಿಸುತ್ತದೆ, ಆದರೆ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ನಿಮ್ಮ ತಾಯಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ಸಾಕಷ್ಟು ಕಠಿಣ ಪರಿಶ್ರಮ ಇರುತ್ತದೆ. ** ವೃಷಭ ರಾಶಿ : ಇಂದು ನಿಮಲ್ಲಿ ಮಾನಸಿಕ ನೆಮ್ಮದಿ ಇರುತ್ತದೆ. ನಿಮ್ಮ ಮೇಲೆ ನಿಮಗೆ ಪೂರ್ಣ ವಿಶ್ವಾಸ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅಧಿಕ ಖರ್ಚು ಇರುತ್ತದೆ. ಸ್ನೇಹಿತರ ಸಹಾಯದಿಂದ ನೀವು ಉದ್ಯೋಗವನ್ನು…

Read More

ಹೊಸದುರ್ಗದಲ್ಲಿ ದೇವಾಂಗ ಸಮುದಾಯದ ಕಾರ್ಯಕ್ರಮ – ಮಕ್ಕಳಿಗೆ ಸಂಸ್ಕಾರವಿಲ್ಲದ ಶಿಕ್ಷಣ ನೀಡಿದರೆ ತಂದೆ ತಾಯಿಗಳು ವೃದ್ಧಾಶ್ರಮಕ್ಕೆ ಸೇರುವ ಅನಿವಾರ್ಯತೆ ಬರುತ್ತದೆ – ದೇವಲ ಪ್ರತಿಭಾ ಪುರಸ್ಕಾರದಲ್ಲಿ ಶಾಸಕ ಬಿಜಿ ಗೋವಿಂದಪ್ಪ ಕಳವಳ NAMMUR EXPRESS NEWS ಹೊಸದುರ್ಗ: ಪೋಷಕರು ಹಾಗೂ ಶಿಕ್ಷಕರು ತಮ್ಮ ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರದ ಪಾಠ ಕಳಿಸುವುದು ಬಹಳ ಮುಖ್ಯ. ಏಕೆಂದರೆ ಸಂಸ್ಕಾರ ಇಲ್ಲದೇ ಹೋದರೆ ಭವಿಷ್ಯದ ಜೀವನ ಕಷ್ಟವಾಗುತ್ತದೆ. ಇಂದು ಪೋಷಕರು ತಾವು ದುಡಿದ ಹಣ ಖರ್ಚು ಮಾಡಿ, ಮಕ್ಕಳಿಗೆ ವಿದ್ಯೆ ಕೊಟ್ಟು ಸಂಸ್ಕಾರ ಕಲಿಸದಿದ್ದರೆ ತಾವು ವಯಸ್ಸಾದಾಗ ವೃದ್ಧಾಶ್ರಮಕ್ಕೆ ಹೋಗಬೇಕಾಗುತ್ತದೆ. ಇದರಿಂದ ಕುಟುಂಬ ಹಾಗೂ ಸಮಾಜಕ್ಕೆ ನಷ್ಟ ಉಂಟಾಗುತ್ತದೆ ಎಂದು ಶಾಸಕ ಬಿ ಜಿ ಗೋವಿಂದಪ್ಪ ತಿಳಿಸಿದ್ದಾರೆ. ನಗರದ ಬನಶಂಕರಿ ಸಂಭೋಗಾಯ ಭವನದಲ್ಲಿ ತಾಲೂಕು ದೇವಾಂಗ ಸಂಘ, ದೇವಾಂಗ ಸಮಾಜ ಹಾಗೂ ದೇವಾಂಗ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಪ್ರತಿಭಾನ್ವಿತರಿಗೆ ಸನ್ಮಾನ ಹಾಗೂ ಸಮಾಜದ ನಿವೃತ್ತ ನೌಕರರಿಗೆ ಅಭಿನದಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಸದುರ್ಗ ದೇವಾಂಗ…

Read More

ಕೊಪ್ಪ ಪಟ್ಟಣ ಪಂಚಾಯ್ತಿ ಕಮಲ ಪಾಲು! – ಅಧ್ಯಕ್ಷರಾಗಿ ಗಾಯತ್ರಿ ವಸಂತ ಹಾಗೂ ಉಪಾಧ್ಯಕ್ಷರಾಗಿ ಗಾಯತ್ರಿ ಶೆಟ್ಟಿ ಅವಿರೋಧ ಆಯ್ಕೆ – ಜೀವರಾಜ್, ಕೋಟಾ, ಹೊಸೂರು ದಿನೇಶ್, ಪುಣ್ಯಪಾಲ್ ಅಭಿನಂದನೆ NAMMUR EXPRESS NEWS ಕೊಪ್ಪ: ಕೊಪ್ಪ ಪಟ್ಟಣ ಪಂಚಾಯಿತಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೊಪ್ಪ ಪಟ್ಟಣ ಪಂಚಾಯ್ತಿಯ ಅಧಿಕಾರ ಬಿಜೆಪಿಯ ಪಾಲಾಗಿದೆ. ನೂತನ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಗಾಯಿತ್ರಿ ವಸಂತ್ ಮತ್ತು ಉಪಾಧ್ಯಕ್ಷರಾಗಿ ಗಾಯಿತ್ರಿ ಶೆಟ್ಟಿ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣ ಪಂಚಾಯ್ತಿ ನೂತನ ಸಾರಥಿಗಳಿಗೆ ಸಂಸದ ಕೊಟಾ ಶ್ರೀನಿವಾಸ ಪೂಜಾರಿ,ಮಾಜಿ ಶಾಸಕ ಡಿ.ಎನ್ ಜೀವರಾಜ್, ಕೊಪ್ಪ ತಾಲೂಕು ಅಧ್ಯಕ್ಷರಾದ ದಿನೇಶ್ ಹೊಸೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಸೇರಿದಂತೆ ಬಿಜೆಪಿ ಕೊಪ್ಪ ಮಂಡಲದ ಎಲ್ಲಾ ಪ್ರಮುಖರು ಶುಭ ಕೋರಿದ್ದಾರೆ.

Read More

ಕಾರ್ಕಳದಲ್ಲಿ ಕ್ರಿಯೇಟಿವ್ ಮಕ್ಕಳಿಂದ ಸ್ವಚ್ಛತಾ ಕೆಲಸ – ಕಾರ್ಕಳದಲ್ಲಿ ಕ್ರಿಯೇಟಿವ್ ಕಾಲೇಜಿನ ಸಹಕಾರದೊಂದಿಗೆ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ – ಸ್ವಚ್ಛ ಭಾರತ ಕಲ್ಪನೆಗೆ ಸಾಥ್ ನೀಡೋಣ ಎಂದ ಸುನಿಲ್ ಕುಮಾರ್ NAMMUR EXPREES NEWS ಕಾರ್ಕಳ: ಕಾರ್ಕಳ ಪರಿಸರದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ರಾಷ್ಟ್ರೀಯ ಸೇವಾ ಯೋಜನೆ ಪ್ರಾಂತೀಯ ಕೇಂದ್ರ ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ರಾಷ್ಟ್ರೀಯ ಸೇವಾ ಯೋಜನೆ ಕೋಶ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇದರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶಾಸಕರಾದ ಸುನಿಲ್ ಕುಮಾರ್ ಮಾತನಾಡಿ, ಎಲ್ಲರೂ ಸ್ವಚ್ಛತೆಯನ್ನು ಕಾಪಾಡುವುದರಿಂದ ಆೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸ್ವಚ್ಛತೆ ಇರುವ ಕಡೆ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ತಡೆಗಟ್ಟಬಹುದಾಗಿದೆ. ನಮ್ಮ ಮನೆ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿದಾಗಲೇ ಸ್ವಚ್ಛ…

Read More

ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದ ಶ್ರಾವಣ ಸಂಭ್ರಮ – ನಾಡಿನ ಸಂಪ್ರದಾಯ ಪ್ರತಿನಿಧಿಸಿದ ಮಹಿಳಾ ಕಾರ್ಯಕರ್ತರು – ಶಾಸಕ ಸುನಿಲ್‌ ಕುಮಾರ್, ಬೋಳ ಪ್ರಭಾಕರ್‌ ಕಾಮತ್‌ ಮೆಚ್ಚುಗೆ NAMMUR EXPRESS NEWS ಕಾರ್ಕಳ : ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ರಾಜಕೀಯ ಚಟುವಟಿಕೆಗಳೊಂದಿಗೆ ನಮ್ಮ ಸಂಸ್ಕೃತಿ-ಸಂಪ್ರದಾಯವನ್ನು ಉಳಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ಶಕ್ತಿಕೇಂದ್ರದಿಂದ ಮಹಿಳೆಯರು ಭಾಗವಹಿಸಿರುವುದು ಶ್ಲಾಘನೀಯ. ನಮ್ಮ ಸಾಂಸ್ಕೃತಿಕ ಸಂಗತಿಗಳನ್ನು ಮೆಲುಕು ಹಾಕುವಂತಹ ಶ್ರಾವಣ ಸಂಭ್ರಮ ಅಭಿನಂದನಾರ್ಹ ಎಂದು ಶಾಸಕ ಸುನಿಲ್‌ ಕುಮಾರ್‌ ಹರ್ಷ ವ್ಯಕ್ತಪಡಿಸಿದರು. ಅವರು ಸೆ. 1ರಂದು ಕಾರ್ಕಳ ಬಿಜೆಪಿ ಮಹಿಳಾ ಮೊರ್ಚಾ ವತಿಯಿಂದ ಬಂಡೀಮಠದ ರಾಮಕ್ಷತ್ರೀಯ ಸಭಾಭವನದಲ್ಲಿ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪಕ್ಷದ ಹಿರಿಯ ಮುಖಂಡರು, ಉದ್ಯಮಿಗಳು ಆಗಿರುವ ಬೋಳ ಪ್ರಭಾಕರ್‌ ಕಾಮತ್‌ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶಭ ಹಾರೈಸಿದರು. ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ…

Read More

ವಾಗ್ದೇವಿ ಪಿಯು ವಿದ್ಯಾರ್ಥಿಗಳ ಸಾಧನೆ – ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ – ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಭಿನಂದನೆ NAMMUR EXPRESS NEWS ತೀರ್ಥಹಳ್ಳಿ: 27.08.2024 ಹಾಗೂ 28.08.2024 ರಂದು ರಾಷ್ಟ್ರೀಯ ವಸತಿ ಪಿ ಯು ಕಾಲೇಜು ಕೋಣಂದೂರಿನಲ್ಲಿ ನಡೆದ ತಾಲ್ಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ಕೆಳಕಂಡ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳ ವಿವರ ಬಾಲಕರ ವಯಕ್ತಿಕ ವಿಭಾಗ – * ಉದ್ದಜಿಗಿತ – ಪ್ರಥಮಸ್ಥಾನ. * ಹ್ಯಾಮರ್ ಥ್ರೋ – ದ್ವಿತೀಯ ಸ್ಥಾನ. *ಗುಂಡು ಎಸೆತ – ತೃತೀಯ ಸ್ಥಾನ. * 100 ಮೀ ಓಟ – ತೃತೀಯಸ್ಥಾನ. * ಜಾಲಿನ್ ಥ್ರೋ – ೃತೀಯ ಸ್ಥಾನ. *200 ಮೀ ಓಟ – ತೃತೀಯ ಸ್ಥಾನ. * 3000 ಮೀ ಓಟ – ತೃತೀಯ ಸ್ಥಾನ. ಬಾಲಕರ ಗುಂಪುಆಟಗಳು – *ಬಾಲ್-ಬ್ಯಾಟ್ ಮಿಂಟನ್ – ಫ್ರಥಮ ಸ್ಥಾನ. *4×100…

Read More

ತೀರ್ಥಹಳ್ಳಿ ಆಸ್ಪತ್ರೆಗೆ ನೂತನ ಆರೋಗ್ಯ ರಕ್ಷಾ ಸಮಿತಿ – ಕುರುವಳ್ಳಿ ನಾಗರಾಜ್, ವಿಶ್ವನಾಥ್ ಹಾರೋಗೋಳಿಗೆ, ವಾಸುದೇವ್ ಕಾಮತ್, ಶ್ರೇಯಸ್ ರಾವ್ ಸೇರಿ 9 ಮಂದಿ ನೇಮಕ NAMMUR EXPRESS NEWS ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಶ್ರೇಯಸ್ ರಾವ್, ಬಿನ್ ಸುರೇಶ್ ರಾವ್, ಸೀಬಿನಕೆರೆ, ತೀರ್ಥಹಳ್ಳಿ, ಕಿಶೋರ್ ಬಿನ್ ಶಂಕರ್ ಬಾಳೆಬೈಲು,, ದೇವರಾಜ್ ಬಿನ್ ರಾಮ್ ನಾಯಕ್, ಮೇಲಿನ ಕೊಪ್ಪ ತೀರ್ಥಹಳ್ಳಿ, ನಾಗರಾಜ್ ಪೂಜಾರಿ ಬಿನ್, ರವಿ ಕುರುವಳ್ಳಿ ತೀರ್ಥಹಳ್ಳಿ , ವಾಸು ದೇವ್ ಕಾಮತ್ ಬಿನ್ ರಾಮಕಷ್ಣ ಾಮತ್, ಕುಶಾವತಿ, ತೀರ್ಥಹಳ್ಳಿ, ವಿಶ್ವನಾಥ್ ಬಿನ್ ಶಿವಣ್ಣ ಹಾರೋಗೊಳಿಗೆ, , ರಮೇಶ್ ನಾಯಕ್ ಬಿನ್ ಅಪ್ಪು ನಾಯಕ್, ಕುವೆಂಪು ಲೇಔಟ್ ತೀರ್ಥಹಳ್ಳಿ , ಪೂರ್ಣಿಮಾ ಶ್ರೀನಿವಾಸ್ ಬಿನ್ ಶ್ರೀನಿವಾಸ್ ಬಾಳೆಬೈಲು, ತೀರ್ಥಹಳ್ಳಿ, ಈ ಆಸ್ಪತ್ರೆಯಲ್ಲಿ…

Read More